ಮತ್ತೆ ವಿಶ್ವ ಬಂಟರ ಸಮ್ಮೇಳನ ಆಯೋಜನೆಯಾಗಲಿ: ಸದಾನಂದ ಶೆಟ್ಟಿ

ಮತ್ತೆ ವಿಶ್ವ ಬಂಟರ ಸಮ್ಮೇಳನ ಆಯೋಜನೆಯಾಗಲಿ: ಸದಾನಂದ ಶೆಟ್ಟಿ

HSA   ¦    Jan 08, 2018 05:40:29 PM (IST)
ಮತ್ತೆ ವಿಶ್ವ ಬಂಟರ ಸಮ್ಮೇಳನ ಆಯೋಜನೆಯಾಗಲಿ: ಸದಾನಂದ ಶೆಟ್ಟಿ

ಪುಣೆ: ಬಂಟರು ಎಲ್ಲೇ ಇದ್ದರೂ ಅವರನ್ನು ಸಂಘಟಿಸುವ ಕಾರ್ಯ ನಡೆಯಬೇಕು. 2002ರಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದ ಬಳಿಕ ಇಂತಹ ಕಾರ್ಯವಾಗಿಲ್ಲ. ಪುಣೆಯ ಬಂಟರು ಒಂದೇ ಛತ್ರದಲ್ಲಿ ಸೇರಿಸಿ ವಿಶ್ವ ಬಂಟರ ಸಮ್ಮೇಳನ ಆಯೋಜಿಸಬೇಕು ಎಂದು ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಮಂಗಳೂರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ಹೇಳಿದರು.

ಪುಣೆ ಬಂಟ್ಸ್ ಅಸೋಸಿಯೇಶನ್ ನ 7ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕಾರ್ಯಕ್ಷೇತ್ರವಾದರೂ ಜಾತಿಯ ಉಲ್ಲೇಖ ಮುಖ್ಯ. ಇಂತಹ ಸಮಯದಲ್ಲಿ ನಮ್ಮ ಸಮಾಜದ ಜಾತಿಯ ಸಂಘಟನೆ ಬಲಪಡಿಸಬೇಕು. ಬಂಟ ಸಮಾಜ ಇರುವಲ್ಲಿ ಸಂಘಟನೆ ಬೆಳೆಯಬೇಕು ಎಂದು ಅವರು ತಿಳಿಸಿದರು.

ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಅಡ್ವಾನ್ಸಡ್ ಟೆಕ್ನಿಕಲ್ ಸರ್ವಿಸಸ್ ಕತಾರ್ ನ ಆಡಳಿತ ನಿರ್ದೇಶಕ ಹಾಗೂ ಕತಾರ್ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾದ ರವಿ ಶೆಟ್ಟಿ ಮೂಡಂಬೈಲ್, ಸಮ್ಮಾನ ಸ್ವೀಕರಿಸಿದ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ ಸಮಯೋಚಿತವಾಗಿ ಮಾತನಾಡಿದರು.

ಸಂಘದ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಉಪಾಧ್ಯಕ್ಷರುಗಳಾದ ಸುರೇಶ್ ಎಸ್. ಶೆಟ್ಟಿ, ಆನಂದ್ ಶೆಟ್ಟಿ ಮಿಯ್ನಾರು, ಪ್ರಧಾನ ಕಾರ್ಯದರ್ಶೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಗೌರವ ಕೋಶಾಧಿಕಾರಿ ಅರವಿಂದ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಸರೋಜಿನಿ ಜಯಶೆಟ್ಟಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್ ಶೆಟ್ಟಿ, ಕಾರ್ಯದರ್ಶಿ ಉಷಾ ಉಲ್ಲಾಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಗೆದ್ದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಇದರ ಬಳಿಕ ಸಂಘದ ಸದಸ್ಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.