ಭಾರತ್ ಕೋ ಆಪರೇಟಿವ್ ಬ್ಯಾಂಕ್ ಗೆ ಪದ್ಮಭೂಷಣ ವಸಂತ್ ದಾದಾ ಪಾಟೀಲ್ ಪ್ರಶಸ್ತಿ

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಗೆ ಪದ್ಮಭೂಷಣ ವಸಂತ್ ದಾದಾ ಪಾಟೀಲ್ ಪ್ರಶಸ್ತಿ

HSA   ¦    Feb 10, 2018 03:47:31 PM (IST)
ಭಾರತ್ ಕೋ ಆಪರೇಟಿವ್ ಬ್ಯಾಂಕ್ ಗೆ ಪದ್ಮಭೂಷಣ ವಸಂತ್ ದಾದಾ ಪಾಟೀಲ್ ಪ್ರಶಸ್ತಿ

ಮುಂಬಯಿ: ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಡೆಡ್ ಸಂಸ್ಥೆಗೆ ಪದ್ಮಭೂಷಣ ವಸಂತ್ ದಾದಾ ಪಾಟೀಲ್ ಉತ್ಕೃಷ್ಟ ಸಹಕಾರಿ ಬ್ಯಾಂಕ್ ಪುರಸ್ಕಾರಕ್ಕೆ ಭಾಜನವಾಯಿತು.

ಫೆ.8ರಂದು ದಾದರ್ ಪ್ರಭಾದೇವಿಯ ಮಹಾರಾಷ್ಟ್ರ ಕಲಾ ಅಕಾಡೆಮಿಯ ರವೀಂದ್ರ ನಾಟ್ಯ ಮಂದಿರದ ಸಭಾಗೃಹದಲ್ಲಿ ನಡೆದ ಮಹಾರಾಷ್ಟ್ರ ಸ್ಟೇಟ್ ಕೋ. ಆಪರೇಟಿವ್ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಇದರ ವಾರ್ಷಿಕ ಆರ್ಥಿಕ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತ್ ಬ್ಯಾಂಕ್ ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಹಾಗೂ ಸಿಇಒ-ಆಡಳಿತ ನಿರ್ದೇಶಕ ಸಿ.ಆರ್. ಮೂಲ್ಕಿ ಅವರು ಮಹಾರಾಷ್ಟ್ರ ವಿಧಾನ ಪರಿಷದ್ ನ ಉಪ ಸಭಾಪತಿ ಮಾಣಿಕ್ ರಾವ್ ಠಾಕ್ರೆ, ಅಸೋಸಿಯೇಶನ್ ನ ಕಾರ್ಯಾಧ್ಯಕ್ಷ ಶರದ್ ಅಪ್ಪರಾವ್ ಗೋವಿಂದ್ ಅವರಿಂದ ಪ್ರಶಸ್ತಿ ಪತ್ರ, ಪುರಸ್ಕಾರ ಫಲಕ ಸ್ವೀಕರಿಸಿದರು.