ನವಿಮುಂಬಯಿ ಸ್ಥಳೀಯ ಸಮಿತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

ನವಿಮುಂಬಯಿ ಸ್ಥಳೀಯ ಸಮಿತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

YK   ¦    Mar 13, 2018 05:33:54 PM (IST)
ನವಿಮುಂಬಯಿ ಸ್ಥಳೀಯ ಸಮಿತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

ಮುಂಬೈ: ಇಲ್ಲಿನ ಕುಲಾಲ ಸಂಘ ಇದರ ನವಿಮುಂಬಯಿ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಈಚೆಗೆ ವಾಶಿಯ ಕನ್ನಡ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಚೇತಾ ವಿ. ಕುಲಾಲ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೂಪಾ ದಿನೇಶ್‌ ಶೆಟ್ಟಿ ಮತ್ತು ಶ್ರೀ ಶನೀಶ್ವರ ಮಂದಿರ ನೆರೂಲ್‌ ಇದರ ಮಹಿಳಾ ಮಂಡಳದ ಕಾರ್ಯಾಧ್ಯಕ್ಷೆ ವೀಣಾ ವಿಶ್ವನಾಥ್‌ ಪೂಜಾರಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ನವಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಲಾ ಎಸ್‌. ಮೂಲ್ಯ, ಉಪಕಾರ್ಯಾಧ್ಯಕ್ಷೆ ಹರಿಣಾಕ್ಷಿ ಎ. ಸಾಲ್ಯಾನ್‌, ಕಾರ್ಯದರ್ಶಿ ಬೇಬಿ ವಿ. ಬಂಗೇರ, ಕೋಶಾಧಿಕಾರಿ ಮಲ್ಲಿಕಾ ಡಿ. ಕುಲಾಲ್‌ ಇದ್ದರು. 

ಶಶಿಕಲಾ ಎಸ್‌. ಮೂಲ್ಯ ಸ್ವಾಗತಿಸಿ, ಶಕುಂತಳಾ ಆರ್‌. ಮೂಲ್ಯ ಮತ್ತು ಉಷಾ ಮೂಲ್ಯ ಪ್ರಾರ್ಥನೆಗೈದರು. ಹರಿಣಾಕ್ಷೀ ಎ. ಸಾಲ್ಯಾನ್‌ ಮತ್ತು ಮಮತಾ ಎಸ್‌. ಕುಲಾಲ್‌ ಅತಿಥಿಗಳನ್ನು ಪರಿಚಯಿಸಿದರು. ಮಾಲತಿ ಜೆ. ಅಂಚನ್‌ ಕಾರ್ಯಕ್ರಮ ನಿರೂಪಿಸಿದರು. ಹರಿಣಾಕ್ಷೀ ಎ. ಸಾಲ್ಯಾನ್‌ ವಂದಿಸಿ ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರನ್ನು ಉಡುಗೊರೆ ನೀಡಿ ಸತ್ಕರಿಸಲಾಯಿತು.