ಯು.ಎ.ಇ ಗ್ರಾಂಡ್ ಇಫ್ತಾರ್ ಮೀಟ್ 2018, ಆಮಂತ್ರಣ ಪತ್ರಿಕೆ ಬಿಡುಗಡೆ

ಯು.ಎ.ಇ ಗ್ರಾಂಡ್ ಇಫ್ತಾರ್ ಮೀಟ್ 2018, ಆಮಂತ್ರಣ ಪತ್ರಿಕೆ ಬಿಡುಗಡೆ

May 16, 2018 04:25:07 PM (IST)
ಯು.ಎ.ಇ ಗ್ರಾಂಡ್ ಇಫ್ತಾರ್ ಮೀಟ್ 2018, ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ರಾಷ್ಟ್ರಿಯ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುವ ಬೃಹತ್ ಇಫ್ತಾರ್ ಕೂಟ ಮೇ 25 2018ರಂದು ಮುಸಲ್ಲ ಟವರ್ ಬರ್ ದುಬೈನಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮವು ಅಸರ್ ನಮಾಝಿನ ನಂತರ ಭಕ್ತಿ ನಿರಿತ ಜಲಾಲಿಯ ಮಜಲಿಸ್ ರಾಷ್ಟ್ರಿಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಫ್ಹಾಕಿ ತಂಘಳ್ ಹಾಗೂ ಹಲವಾರು ಸಾದಾತುಗಳು ಮತ್ತು ಉಲಮಾಗಳು ಇದರ ನೇತೃತ್ವ ನಡೆಯಲಿದೆ.

ಸಭಾ ಕಾರ್ಯಕ್ರಮವು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಇಕ್ಬಾಲ್ ಕಣ್ಣಂಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಡಿ.ಕೆ.ಎಸ್.ಸಿ. ಧಾರ್ಮಿಕ ಸಲಹೆಗಾರರಾದ ಉಸ್ತಾದ್ ಇಬ್ರಾಹಿಂ ಸಖಾಫಿ ಕೆದುಂಬಾಡಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಹಲವಾರು ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಲಿದ್ದಾರೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕುಟುಂಬ ಮಿತ್ರಾದಿಗಳೊಂದಿಗೆ ಆಗಮಿಸಬೇಕಾಗಿ ಎಂದು ಗ್ರಾಂಡ್ ಇಫ್ತಾರ್ ಮೀಟ್-2018 ಸ್ವಾಗತ ಸಮಿತಿ ಛೇರ್ಮನ್ ಜನಾಬ್ ಅಬ್ದುಲ್ ರಹಿಮಾನ್ ಸಜಿಪ ಹಾಗೂ ಡಿ.ಕೆ.ಎಸ್.ಸಿ ಇಪ್ತಾರ್ ಕಮಿಟಿ ಮತ್ತು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಪದಾದಿಕಾರಿಗಳು ವಿನಂತಿಸಿರುತ್ತಾರೆ.

ಗ್ರಾಂಡ್ ಇಫ್ತಾರ್ ಮೀಟ್-2018 ಇದರ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರಿಯ ಸಮಿತಿಯ ಅಧ್ಯಕ್ಷರಾದ ಹಾಜಿ ಇಕ್ಬಾಲ್ ಕಣ್ಣಂಗಾರ್, ಪ್ರಧಾನ ಕಾರ್ಯದರ್ಶಿ ಯುಸೂಫ್ ಅರ್ಲಪದವು, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ, ಡಿ.ಕೆ.ಎಸ್.ಸಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಜನಾಬ್ ಮುಹಮ್ಮದ್ ಇಬ್ರಾಹಿಂ ಮೂಳೂರ್, ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಸಲಹೆಗಾರರಾದ ಹಾಜಿ.ಮೊಯಿದೀನ್ ಕುಟ್ಟಿ ಕುಟ್ಟಿ ಕಕ್ಕಿಂಜೆ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಮದನಿ ಕೆಮ್ಮಾರ, ರಾಷ್ಟೀಯ ಸಮಿತಿ ಉಪಾಧ್ಯಕ್ಷರಾದ ಲತೀಫ್ ಮುಲ್ಕಿ, ಅಬ್ದುಲ್ಲಾ ಬೀಜಾಡಿ, ಇಕ್ಬಾಲ್ ಕುಂದಾಪುರ, ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಕಮಲ್ ಅಜ್ಜಾವರ, ಕಮರುದ್ದೀನ್ ಗುರುಪುರ, ಇ.ಕೆ.ಇಬ್ರಾಹಿಂ ಕಿನ್ಯ , ಶುಕೂರ್ ಮಣಿಲ, ಅಬ್ದುಲ್ ರಜಾಕ್ ಮುಟ್ಟಿಕಲ್, ಸಮೀರ್ ಕೊಳ್ನಾಡು, ಅಬ್ಬಾಸ್ ಪಾಣಾಜೆ, ಅಶ್ರಫ್ ಕಾನಾ, ಅಶ್ರಫ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು. ಗ್ರಾಂಡ್ ಇಫ್ತಾರ್ ಮೀಟ್ - 2018 ಸ್ವಾಗತ ಸಮಿತಿ ಸಂಚಾಲಕರಾದ ಬದ್ರುದ್ದೀನ್ ಅರಂತೋಡು ಕಾರ್ಯಕ್ರಮ ನಿರ್ವಹಿಸಿದರು.