ನಲಾಸೋಪರ ತುಳು ಒಕ್ಕೂಟದ ಪೂರ್ವಭಾವಿ ಸಭೆ

ನಲಾಸೋಪರ ತುಳು ಒಕ್ಕೂಟದ ಪೂರ್ವಭಾವಿ ಸಭೆ

HSA   ¦    Mar 03, 2018 04:22:02 PM (IST)
ನಲಾಸೋಪರ ತುಳು ಒಕ್ಕೂಟದ ಪೂರ್ವಭಾವಿ ಸಭೆ

ನಲಾಸೋಪರ: ಇತ್ತೀಚೆಗೆ ನಲಾಸೋಪರ ಪೂರ್ವ ರಿಜೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ತುಳುವರು ಒಗ್ಗಟ್ಟಾಗಿ ತುಳು ಒಕ್ಕೂಟ ಸ್ಥಾಪಿಸುವ ವಿಷಯವಾಗಿ ನಲಾಸೋಪರ ತುಳು ಒಕ್ಕೂಟದ ಪೂರ್ವಭಾವಿ ಸಭೆ ನಡೆಯಿತು.

ತುಳು ಒಕ್ಕೂಟದ ಸ್ಥಾಪನೆ ಉದ್ದೇಶವೆಂದರೆ ಈ ಪರಿಸರದ ಸರ್ವ ಸಮಾಜದ ತುಳು ಬಾಂಧವರನ್ನು ಒಗ್ಗೂಡಿಸುವುದರೊಂದಿಗೆ ಅವರ ಆಶೋತ್ತರಗಳಿಗೆ ಸ್ಪಂದಿಸುವುದು.

ಒಕ್ಕೂಟದಲ್ಲಿ ಎಲ್ಲಾ ಜಾತಿ ಬಾಂಧವರು ಒಮ್ಮತದಿಂದ ಸೇವೆ ಸಲ್ಲಿಸಬೇಕು ಎಂದು ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಂಟರ ಸಂಘದ ವಸಾಯಿ-ಡಹಾಣು ಪ್ರದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್ ವಿರಾರ್-ನಲಾಸೋಪರ ಸಮಿತಿಯ ಕಾರ್ಯಾಧ್ಯಕ್ಷ ಕೋಡಿ ಗೋಪಾಲ ಪೂಜಾರಿ, ಶ್ರೀದೇವಿ ಯಕ್ಷ ನಿಲಯ ನಲಾಸೋಪಾರದ ಅಧ್ಯಕ್ಷ ಶಶಿಧರ್ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ವಿರಾರ್- ನಲಾಸೋಪರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಗಣೇಶ್ ಸುವರ್ಣ ಮೊದಲಾದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನೂತನ ಸಂಸ್ಥೆಯ ಅಧ್ಯಕ್ಷರಾಗಿ ರಮೇಶ್ ವಿ. ಶೆಟ್ಟಿ ಕಾಪು ಆಯ್ಕೆಯಾದರು. ವೇದಿಕೆಯಲ್ಲಿ ಕುಲಾಲ ಸಂಘದ ಮೀರಾ-ವಿರಾರ್ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿ ವಂದಿಸಿದರು.