ಅಣಿ ಅರದಳ-ಸಿರಿ ಸಿಂಗಾರ ಬೃಹತ್ ಕೃತಿಗೆ ಪುಸ್ತಕ ಸೊಗಸು ಪ್ರಶಸ್ತಿ

ಅಣಿ ಅರದಳ-ಸಿರಿ ಸಿಂಗಾರ ಬೃಹತ್ ಕೃತಿಗೆ ಪುಸ್ತಕ ಸೊಗಸು ಪ್ರಶಸ್ತಿ

HSA   ¦    Jan 10, 2018 04:39:53 PM (IST)
ಅಣಿ ಅರದಳ-ಸಿರಿ ಸಿಂಗಾರ ಬೃಹತ್ ಕೃತಿಗೆ ಪುಸ್ತಕ ಸೊಗಸು ಪ್ರಶಸ್ತಿ

ಮುಂಬಯಿ: ಅಣಿ ಅರದಳ-ಸಿರಿ ಸಿಂಗಾರ ಬೃಹತ್ ಕೃತಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ 2017ನೇ ಸಾಲಿನ `ಪುಸ್ತಕ ಸೊಗಸು' ಪ್ರಶಸ್ತಿ ಪ್ರಾಪ್ತಿಯಾಗಿದೆ.

ಈ ಬೃಹತ್ ಕೃತಿಯನ್ನು ಮುಂಬಯಿ ಸಂಘಟಕ, ಸಾಹಿತಿ ಎಚ್. ಬಿ.ಎಲ್. ರಾವ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ವಿದ್ವಾಂಸ ಸಾಹಿತಿ ಕೆ.ಎಲ್. ಕುಂಡತಾಯ ಅವರ ಸಂಪಾದಕತ್ವದಲ್ಲಿ ಸಾಹಿತ್ಯ ಬಳಗ ಮುಂಬಯಿ ಇದನ್ನು ಪ್ರಕಟಿಸಿದೆ.

ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಬೋರ್ಡ್ ಆಯೋಜಿಸುವ ಸಂಗೀತ-ನೃತ್ಯ ಮತ್ತು ತಾಳವಾದ್ಯಗಳು ಮುಂಬಯಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಮುಂಬಯಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ, ನವಿಮುಂಬಯಿಯಲ್ಲಿ ಕನ್ನಡ ಭವನ ಸ್ಥಾಪನೆ ಇತ್ಯಾದಿಗಳನ್ನು ಎಚ್. ಬಿ. ಎಲ್. ರಾವ್ ಮಾಡಿದ್ದಾರೆ.