ಪ್ರಾಕೃತಿಕ ಆಹಾರ ಸೇವನೆಯಿಂದ ಆರೋಗ್ಯ: ಆರೋಗ್ಯ ತಜ್ಞ ಹರೀಶ್ ಶೆಟ್ಟಿ

ಪ್ರಾಕೃತಿಕ ಆಹಾರ ಸೇವನೆಯಿಂದ ಆರೋಗ್ಯ: ಆರೋಗ್ಯ ತಜ್ಞ ಹರೀಶ್ ಶೆಟ್ಟಿ

HSA   ¦    Jan 13, 2019 04:41:43 PM (IST)
ಪ್ರಾಕೃತಿಕ ಆಹಾರ ಸೇವನೆಯಿಂದ ಆರೋಗ್ಯ: ಆರೋಗ್ಯ ತಜ್ಞ ಹರೀಶ್ ಶೆಟ್ಟಿ

ಮುಂಬಯಿ: ಪ್ರಾಕೃತಿಕವಾಗಿ ಸಿಗುವಂತಹ ಆಹಾರಗಳನ್ನು ಬಳಸಿಕೊಂಡು ಆರೋಗ್ಯವನ್ನು ಹತೋಟಿಯಲ್ಲಿಡಬಹುದು ಎಂದು ಆಹಾರ್ ವೇದ ಸಂಸ್ಥೆಯ ಮೂಲಕ ಆರೋಗ್ಯ ಅಭಿಯಾನ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ತಜ್ಞ ಹರೀಶ್ ಶೆಟ್ಟಿ ಸಲಹೆ ನೀಡಿದರು.

ಗಾಳಿ, ಮಣ್ಣು, ನೀರು, ಅಗ್ನಿ, ಆಕಾಶ ಎಂಬ ಪ್ರಾಕೃತಿಕ ಪಂಚ ತತ್ವಗಳ ಆಧಾರದಿಂದ ನಾವು ಬದುಕುತ್ತಿದ್ದೇವೆ. ಪ್ರಾಕೃತಿಕ ನಿಯಮ ಪಾಲನೆಯೊಂದಿಗೆ ನಮ್ಮ ಮನಸ್ಸು, ದೇಹ ಮತ್ತು ಆತ್ಮ ಶುದ್ಧಿಯಲ್ಲಿರಿಸಬೇಕಾದ ಅಗತ್ಯವಿದೆ ಎಂದರು.

ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ರಾನಂದ ಸಭಾಗೃಹದಲ್ಲಿ ಬಂಟರ ಸಂಘದ ಮಹಿಳಾ ವಿಭಾಗ ಆಯೋಜಿಸಿದ್ದ ಆಹಾರ್ ವೇದದಿಂದ ಆರೋಗ್ಯ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ರಾಸಾಯನಿಕ ಆಹಾರದಿಂದಾಗಿ ಕ್ಯಾನ್ಸರ್ ನಂತಹ ರೋಗಕ್ಕೆ ತುತ್ತಾಗುವವರ ಸಂಖ್ಯೆಯು ಹೆಚ್ಚಗುತ್ತಲಿದೆ. ಎಲ್ಲಾ ಆಹಾರವು ರಾಸಾಯನಿಕ ವಸ್ತುವಿನಿಂದ ಕೂಡಿರುವುದು ತುಂಬಾ ವಿಷಾದನೀಯ. ಆಹಾರ್ ವೇದವನ್ನು ಅನುಸರಿಸಿ ನಮ್ಮ ಮನಸ್ಸು ಮತ್ತು ದೇಹವನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಬೇಕು ಎಂದರು.