ನಟ ಸುನೀಲ್ ಶೆಟ್ಟಿ ತುಳು ಮಾತುಕತೆ: NK ತಂಡದ ವಿಡಿಯೋ ತುಣುಕು ಸಖತ್ ವೈರಲ್

ನಟ ಸುನೀಲ್ ಶೆಟ್ಟಿ ತುಳು ಮಾತುಕತೆ: NK ತಂಡದ ವಿಡಿಯೋ ತುಣುಕು ಸಖತ್ ವೈರಲ್

YK   ¦    Dec 06, 2018 12:11:23 PM (IST)
ನಟ ಸುನೀಲ್ ಶೆಟ್ಟಿ ತುಳು ಮಾತುಕತೆ:  NK ತಂಡದ ವಿಡಿಯೋ ತುಣುಕು ಸಖತ್ ವೈರಲ್

ದುಬೈ: ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ದುಬೈನಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ 'ಕಾಫಿ ವಿದ್ ದಿ ಆಡಿಯೆನ್ಸ್' ಎಂಬ NK ತಂಡದ ವಿಡಿಯೋ ತುಣುಕೊಂದು ನ್ಯೂಸ್ ಕರ್ನಾಟಕದ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ ಕೇವಲ 48 ಗಂಟೆಗಳಲ್ಲಿ ಸುಮಾರು 2 ಲಕ್ಷದಷ್ಟು ವೀಕ್ಷಕರನ್ನು ತಲುಪಿ  ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.  

NK(ನ್ಯೂಸ್ ಕರ್ನಾಟಕ) ತಂಡ ನವೆಂಬರ್ 23 ಹಾಗೂ 24ರಂದು ದುಬೈನಲ್ಲಿ ನಡೆದ ವಿಶ್ವ ತುಳು ಸಮ್ಮೇಳನವನ್ನು ಫೇಸ್ ಬುಕ್ ನಲ್ಲಿ ಲೈವ್ ಪ್ರಸಾರ ಮಾಡಿದ್ದು,  ಅದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ಇದೀಗ ಸಮ್ಮೇಳನದಲ್ಲಿ ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಸುನೀಲ್ ಶೆಟ್ಟಿ ಅವರು ತುಳು ಭಾಷೆಯಲ್ಲಿ ಪ್ರೇಕ್ಷಕರ ಜತೆ ಮಾತನಾಡಿದ ವಿಡಿಯೋ ತುಣುಕೊಂಡು ನ್ಯೂಸ್ ಕರ್ನಾಟಕ ಪೇಜ್ ನಲ್ಲಿ ಅಪ್ಲೋಡ್ ಮಾಡಿದ ಗಂಟೆಗಳಲ್ಲಿ  ವೈರಲ್ ಆಗಿದೆ.  

ವಿಡಿಯೋದಲ್ಲಿ ಏನಿದೆ:ವಿಶ್ವ ತುಳು ಸಮ್ಮೇಳನದಲ್ಲಿ ಭಾಗಿಯಾಗಿದ್ದ ಸುನೀಲ್ ಶೆಟ್ಟಿ ಬಳಿ ಮಾತನಾಡಲು ಕಾರ್ಯಕ್ರಮದ ಸಂಯೋಜಕರು ಮೈಕ್ ನೀಡಿದಾಗ 'ತುಳು ಕಾರ್ಯಕ್ರಮದಲ್ಲಿ ಭಾಗಿಯಾಗುವುದೆಂದರೆ ನನಗೆ ತುಂಬಾ ಖುಷಿಯಾಗುತ್ತದೆ.ಆದರೆ ವೇದಿಕೆಯಲ್ಲಿ ನಿಂತು ಭಾಷಣ ಮಾಡುವುದೆಂದರೆ ನನಗೆ ಹೆದರಿಕೆ. ಈ ಬಗ್ಗೆ ಜತೆ ಕುಳಿತಿದ್ದ ಡಾ.ಡಿ.ವೀರೇಂದ್ರ ಹೆಗ್ಗಡೆ ಬಳಿ ಹೇಳಿಕೊಂಡೆ. ಅದಕ್ಕೆ ಅವರು ನೀವು ಮಾತನಾಡುವಾಗ ನಮ್ಮ ಮನೆಯವರ ಬಳಿ ಹಾಗೂ ಮಕ್ಕಳ ಜತೆ ಮಾತನಾಡುತ್ತಿದ್ದೇನೆ ಎಂದು ಭಾವಿಸಿ ಮಾತನಾಡಿ. ಎಲ್ಲ ಗೊಂದಲಗಳು ದೂರವಾಗುತ್ತದೆ ಎಂಬ ಸಲಹೆಯನ್ನು ನೀಡಿದರು. ಇದರಿಂದ ನಾನು ನಿರಳವಾಗಿದ್ದೇನೆ. ಇದೀಗ ನಾನು ನನ್ನ ಮನೆಯವರ ಜತೆ ಮಾತನಾಡುತ್ತಿದ್ದೇನೆ ಎಂಬ ಭಾವನೆಯೊಂದಿಗೆ 'ಕಾಫಿ ವಿದ್ ದಿ ಆಡಿಯೆನ್ಸ್' ರೀತಿ ಮಾತನಾಡುವ ಎಂದಿದ್ದಾರೆ.  ಈ ವೇಳೆ ನೆರೆದಿದ್ದ ಜನರಲ್ಲಿ ಕೇಳಿದ ಪ್ರಶ್ನೆಗಳಿಗೆ ಸುನೀಲ್ ಶೆಟ್ಟಿ ತುಳುವಿನಲ್ಲಿ ಉತ್ತರ ನೀಡಿದ್ದರು. ಈ ವಿಡಿಯೋ ತುಣುಕನ್ನು ನ್ಯೂಸ್ ಕರ್ನಾಟಕ ಹಾಗೂ ನ್ಯೂಸ್ ಕನ್ನಡ ವೆಬ್ ಸೈಟ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಹಾಕಲಾಗಿತ್ತು. ಆಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಕರು ನೋಡಿ ಶೇರ್ ಮಾಡಿದ್ದಾರೆ.   

NK ತಂಡಕ್ಕೆ ಶುಭ ಹಾರೈಸಿದ ಓದುಗರಿಗೆ ಹಾಗೂ ವೀಕ್ಷಕರಿಗೆ ಧನ್ಯವಾದಗಳು.