ಸಮುದ್ರ ತ್ಯಾಜ್ಯ ನಿರ್ವಹಣೆಗೆ ಅಗ್ರಿಬೋಟ್ ನಿರ್ಮಿಸಿದ ಭಾರತ ಮೂಲದ ವಿದ್ಯಾರ್ಥಿ

ಸಮುದ್ರ ತ್ಯಾಜ್ಯ ನಿರ್ವಹಣೆಗೆ ಅಗ್ರಿಬೋಟ್ ನಿರ್ಮಿಸಿದ ಭಾರತ ಮೂಲದ ವಿದ್ಯಾರ್ಥಿ

HSA   ¦    Apr 12, 2019 02:14:00 PM (IST)
ಸಮುದ್ರ ತ್ಯಾಜ್ಯ ನಿರ್ವಹಣೆಗೆ ಅಗ್ರಿಬೋಟ್ ನಿರ್ಮಿಸಿದ ಭಾರತ ಮೂಲದ ವಿದ್ಯಾರ್ಥಿ

ದುಬೈ: ಸಮುದ್ರ ತ್ಯಾಜ್ಯವನ್ನು ತೆಗೆಯುವಂತಹ "ಅಗ್ರಿಬೋಟ್" ಎಂಬ ರೋಬೋಟ್ ವನ್ನು ಭಾರತೀಯ ಮೂಲದ ಅಬುಧಾಬಿಯ ವಿದ್ಯಾರ್ಥಿಯೊಬ್ಬ ಕಂಡುಹಿಡಿದಿದ್ದಾನೆ.

ಸಾಗರ ಜಲಚರಗಳ ಜೀವ ರಕ್ಷಿಸುವ ಮತ್ತು ಕೃಷಿ ಕಾರ್ಯಗಳಲ್ಲಿ ಕೂಲಿಗಳ ಸಂಖ್ಯೆಯನ್ನು ಕನಿಷ್ಠಗೊಳಿಸುವ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಅಬುಧಾಬಿಯ ಜೆಮ್ಸ್ ಯುನೈಟೆಡ್ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿ ಸಾಯಿನಾಥ್ ಮಣಿಕಂಠನ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ.

ಅಗ್ರಿಬೋಟ್ ಸಮುದ್ರದ ಮೇಲ್ಮೈನಲ್ಲಿ ತೇಲುವ ತ್ಯಾಜಗಳನ್ನು ನಿರ್ಮೂಲನೆಗೊಳಿಸುತ್ತದೆ. ಇದು ದೋಣಿಯಾಕಾರದಲ್ಲಿದ್ದು, ರೇಡಿಯೊ ನಿಯಂತ್ರಣ ಮೂಲಕ ರಿಮೋಟ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಅಳವಡಿಸಿರುವ ಎರಡು ಮೋಟರ್‌ಗಳ ಸಹಾಯದಿಂದ ಎಂಬೋಟ್ ನೀರಿನಲ್ಲಿ ಚಲಿಸಿ, ತೇಲುವ ತ್ಯಾಜ್ಯ ಸಂಗ್ರಹಿಸುತ್ತದೆ ಎಂದು ಮಣಿಕಂಠನ್ ವಿವರಿಸಿದ್ದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.