ಮುಂಬಯಿ ಯಕ್ಷಕಲಾ ರಕ್ಷಣಾ ವೇದಿಕೆಯ ಆರನೇ ವಾರ್ಷಿಕೋತ್ಸವ

ಮುಂಬಯಿ ಯಕ್ಷಕಲಾ ರಕ್ಷಣಾ ವೇದಿಕೆಯ ಆರನೇ ವಾರ್ಷಿಕೋತ್ಸವ

HSA   ¦    Feb 08, 2018 03:28:57 PM (IST)
ಮುಂಬಯಿ ಯಕ್ಷಕಲಾ ರಕ್ಷಣಾ ವೇದಿಕೆಯ ಆರನೇ ವಾರ್ಷಿಕೋತ್ಸವ

ಮುಂಬಯಿ: ಯಕ್ಷಕಲಾ ರಕ್ಷಣಾ ವೇದಿಕೆ ಮುಂಬಯಿ ಇದರ ಆರನೇ ವಾರ್ಷಿಕೋತ್ಸವವು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಫೆ.3ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ವಹಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ಅಭಿವೃದ್ಧಿ ಪಥದಲ್ಲಿ ಸಾಗುವಾಗ ಟೀಕೆ-ಟಿಪ್ಪಣಿಗಳು ಸ್ವಾಭಾವಿಕ. ಸಾಮಾಜಿಕ ಕಳಕಳಿ, ಪಾರದರ್ಶಕತೆಯಿಂದ ದುಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಶ್ರೀ ಉಮಾಮಹೇಶ್ವರಿ ಜರಿಮರಿ ಇದರ ಪ್ರಧಾನ ಅರ್ಚಕ ಎಸ್. ಎನ್. ಉಡುಪ ಅವರು ಮಾತನಾಡುತ್ತಾ, ಯಕ್ಷಗಾನ ಕಲಾವಿದರು ಮತ್ತು ಆರೋಗ್ಯ ಹಾಗೂ ಅವರ ಕುಟುಂಬದ ಬಗ್ಗೆ ಕಾಳಜಿ ವಹಿಸಿ ಉತ್ತಮ ಮಾರ್ಗದರ್ಶಕರಾಗಬೇಕು. ಯಕ್ಷಕಲಾ ರಕ್ಷಣಾ ವೇದಿಕೆಯ ಕಾರ್ಯ ಅಭಿನಂದನೀಯ ಎಂದು ಹೇಳಿದರು.

ನಾದಲೋಲ ಬಿರುದಾಂಕಿತ ಭಾಗವತ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಕಲಾಪೋಷಕ ಶಂಕರ ಪೂಜಾರಿ ಪೆಲತ್ತೂರು, ಯಕ್ಷಗಾನ ಕಲಾವಿದ ಕಿರಣ್ ಪೈ ಅವರನ್ನು ಗಣ್ಯರು ಸನ್ಮಾನಿಸಿದರು.