ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ

ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ

HSA   ¦    Nov 05, 2019 07:15:41 PM (IST)
ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ

ನವದೆಹಲಿ: ದೆಹಲಿ ಕರ್ನಾಟಕ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ವತಿಯಿಂದ ನವದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಚುಟುಕು ಸಾಹಿತ್ಯ ಕವಿಗೋಷ್ಠಿಯಲ್ಲಿ ಮುಡಿಪುವಿನ ಆಯುರ್ವೇದ ವೈದ್ಯರಾದ ಡಾ. ಅಮೃತ ಸಿಂಧು ಬರೆದ ಆರೋಗ್ಯ ಮಾಹಿತಿ ಕೃತಿ “ನನ್ನೊಳಗಿನ ನಾನು”ಎಂಬ ಪುಸ್ತಕವನ್ನು ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷರಾದ ಡಾ. ಅವನೀಂದ್ರನಾಥ ರಾವ್‌ ಅವರು ಬಿಡುಗಡೆಗೊಳಿಸಿದರು.

ಕಾಸರಗೋಡಿನ ಸವಿಹೃದಯದ ಕವಿ ಮಿತ್ರರು ಬರೆದ “ಭಾವ ತರಂಗ’’ ಈ ಕೃತಿಯನ್ನು ಡಾ. ಪುರುಷೋತ್ತಮ ಬಿಳಿಮಲೆಯವರು ಬಿಡುಗಡೆಗೊಳಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ವೆಂಕಟಾಚಲ ಜಿ. ಹೆಗಡೆಯವರು ವಹಿಸಿದರು. ಸಮಾರಂಭದಲ್ಲಿ ವಸಂತ ಶೆಟ್ಟಿ ಬೆಳ್ಳಾರೆ, ಸಿ.ಎಂ ನಾಗರಾಜ, ಇರಾ ನೇಮು ಪೂಜಾರಿ, ತಾರಾನಾಥ ಬೋಳಾರ್, ವೇದಮೂರ್ತಿ ಎಂ.ಜನಾರ್ಧನಾ ಭಟ್, ರಾಧಾಕೃಷ್ಣ ಉಳಿಯತಡ್ಕ, ಸುಭಾಸ್ ಪೆರ್ಲ, ಜಯಾನಂದ ಪೆರಾಜೆ, ಡಾ. ಎಂ.ಜಗದೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ ನಾಗರಾಜ್ ಸ್ವಾಗತಿಸಿ, ದ.ಕ ಚು.ಸಾ.ಪರಿಷತ್ತ್ನ ಕಾರ್ಯದರ್ಶಿ ಹರೀಶ್ ಸುಲಾಯ ಒಡಂಬೆಟ್ಟು ವಂದಿಸಿ, ಸುರೇಖಾ  ಯಳವಾರರವರು ಕಾರ್ಯಕ್ರಮ ನಿರೂಪಿಸಿದರು.