ಅ. 5 ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17 ನೇ ವಾರ್ಷಿಕ ಮಹಾಸಭೆ

ಅ. 5 ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17 ನೇ ವಾರ್ಷಿಕ ಮಹಾಸಭೆ

IK   ¦    Sep 27, 2018 10:42:08 AM (IST)
ಅ. 5 ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17 ನೇ ವಾರ್ಷಿಕ ಮಹಾಸಭೆ

ಮುಂಬಯಿ: ಕಳೆದ ಹದಿನೇಳು ವರ್ಷಗಳಿಂದ ನಾಡಿನ ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾತ್ರವಲ್ಲದೆ ನೆರೆಯ ಕಾಸರಗೋಡು ಜಿಲ್ಲೆಯ ಹಾಗೂ ಪರಿಸರದ ಸಮಸ್ಯೆಗಳಿಗೆ ಸ್ಪಂದಿಸಿ ಜಿಲ್ಲೆಗಳ ಅಭಿವೃದ್ದಿಗಾಗಿ ವಿವಿಧ ರೀತಿಯಲ್ಲಿ ಕಾರ್ಯನಿರತರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 17 ನೆಯ ವಾರ್ಷಿಕ ಮಹಾಸಭೆಯು ಅಕ್ಟೋಬರ್ 5ರಂದು ಮುಂಬೈನಲ್ಲಿ ನಡೆಯಲಿದೆ

ಖ್ಯಾತ ರಾಜಕಾರಿಣಿಗಳು, ಸಮಾಜ ಸೇವಕರು, ಉಧ್ಯಮಿಗಳು, ಮುಂಬಯಿಯ ಎಲ್ಲಾ ತುಳು ಕನ್ನಡಿಗರ ಸಂಘಟನೆಗಳ ಪ್ರಮುಖರ ಮಾರ್ಗದರ್ಶನದಲ್ಲಿ ಕ್ರೀಯಾಶೀಲವಾಗಿರುವ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಯು ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ ಮುಂಬಯಿ ಮಾತ್ರವಲ್ಲದೆ ಉಭಯ ಜಿಲ್ಲೆಗಳಲ್ಲಿಯೂ ಕ್ರೀಯಾಶೀಲವಾಗಿದ್ದು ಈಗಾಗಲೇ ಜಿಲ್ಲೆಗಳ ಹಲವಾರು ಸಮಸ್ಯೆಗಳನ್ನು ಬಗೆಹರಿಸುದರಲ್ಲಿ ಯಶಸ್ವಿಯಾಗಿದೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ಜಿಲ್ಲೆಗಳ ವಿವಿಧ ಅಭಿವೃದ್ದಿ ಬಗ್ಗೆ ಮಾತ್ರವಲ್ಲದೆ ಮಂಗಳೂರು ವಿಮಾನ ನಿಲ್ಧಾಣದಲ್ಲಿ ಜನಸಾಮಾನ್ಯರಿಗೆ ನೆಲಮಾರ್ಗವಾಗಿ ಪ್ರಯಾಣಿಸಲು ಸೂಕ್ತ ವ್ಯವಸ್ಥೆಯಿಲ್ಲದೆ ಆಗುತ್ತಿರುವ ತೊಂದರೆ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಂವಾದ ನಡೆಯಲಿದ್ದು, ಸಮಿತಿಯ ಸದಸ್ಯರೆಲ್ಲರೂ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಬೆಳ್ಚಡ ಅವರು ವಿನಂತಿಸಿದ್ದಾರೆ.