ಬಾಂಬೆ ಬಂಟ್ಸ್ ಅಸೋಸಿಯೇಶನ್, ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ

ಬಾಂಬೆ ಬಂಟ್ಸ್ ಅಸೋಸಿಯೇಶನ್, ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ

IL   ¦    Jul 23, 2019 03:21:25 PM (IST)
ಬಾಂಬೆ ಬಂಟ್ಸ್ ಅಸೋಸಿಯೇಶನ್, ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ, ಸನ್ಮಾನ

ಮುಂಬಯಿ: ಸಂಸ್ಕೃತಿ, ಆಚಾರ, ವಿಚಾರ ಮಾತೆಯ ಮಡಿಲಲ್ಲಿ ಹುಟ್ಟಿ ಬರಲಿ. ಯಾರು ತಂದೆ, ತಾಯಂದಿರ ಮಾತನ್ನು ಗೌರವಿಸುತ್ತಾರೋ ಅಂತಹ ಮಕ್ಕಳು ಮುಂದೆ ಸಮಾಜದಲ್ಲಿ ಓರ್ವ ಗೌರವಾನ್ವಿತ ವ್ಯಕ್ತಿಯಾಗಿ ಮುಂದುವರಿಯಲು ಸಾದ್ಯ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಶೆಟ್ಟಿಯವರು ಅಭಿಪ್ರಾಯಪಟ್ಟರು.

ಈಚೆಗೆ ಬಾಂಬ್ ಬಂಟ್ಸ್ ಅಸೋಸಿಯೇಶನ್ ನ ಶಿಕ್ಷಣ ಸಮಿತಿಯ ವತಿಯಿಂದ ಜೂಯಿನಗರ ಪಶ್ಚಿಮ ಬಂಟ್ಸ್ ಸೆಂಟರಿನ ಶಶಿಕಲಾ ಮನಮೋಹನ ಶೆಟ್ಟಿ ಕಾಂಪ್ಲೆಕ್ಷ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಜರಗಿದ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಸಮಾರಂಭದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.  

ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ನೀಡುತ್ತಿರುವ ವಿದ್ಯಾಭ್ಯಾಸವನ್ನು ನಿರಂತರವಾಗಿ ಅವರಿಗೆ ನೀಡಬೇಕು. ಅದೇ ರೀತಿ ವಿದ್ಯೆ ಎಂಬ ಅಹಂಕಾರ ನಮ್ಮಲ್ಲಿರಬಾರದು. ವಿದ್ಯೆಗೆ ಯಾವುದೇ ಜಾತಿಯಾ ಕೊನೆ ಎಂಬುದಿಲ್ಲ ಎನ್ನುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು. 

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ  ಸಮಾಜಸೇವೆ ಜಸ್ಮಿನ್ ಗ್ರೂಪ್ ಆಫ್ ಕಂಪನಿಯ  ಸಿಎಂಡಿ ಡಾ. ಸುರೇಂದ್ರ ಶೆಟ್ಟಿ - ಮಾತನಾಡುತ್ತಾ ಸಂಘ ಸಂಸ್ಥೆಯಿಂದ ದೊರೆಯುತ್ತಿರುವ ಆರ್ಥಿಕ ಸಹಾಯವನ್ನು ಮಕ್ಕಳು ಒಂದು ಪ್ರಸಾದವೆಂದು ಸ್ವೀಕರಿಸಿ ಶೈಕ್ಷಣಿಕವಾಗಿ ಯಶಸ್ವಿಯಾಗಿ ಮುಂದುವರಿಯಬೇಕು. ನಮ್ಮ ಸಮಾಜದಲ್ಲಿ ದಾನಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತವರನ್ನು ಕೂಡಾ ಸಂಪರ್ಕಿಸಿ ಅವರ ಮೂಲಕ ಶೈಕ್ಷಣಿಕ ನೆರವನ್ನು ನೀಡುವಂತಾಗಬೇಕು ಎಂದರು.

ತುಳು ಸಂಘ ಬರೋಡದ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿಗೊಳ್ಳಬೇಕಾದರೆ ಸಂಘಟನೆಗಳು ಅಗತ್ಯವಿದೆ ಎಂದು ನುಡಿದರು. 

ಗೌರವ ಅತಿಥಿ ತುಂಗ ಗ್ರೂಪ್ ಆಫ್ ಹೋಟೆಲ್ಸ್ ಇನ್ ಆ ಸಿಎಂ ಡಿ ಸುಧಾಕರ್ ಹೆಗಡೆ ಮಾತನಾಡಿ, ಅಸೋಸಿಯೇಷನ್ ಸ್ಥಾಪನೆ ದಿನದಲ್ಲಿ ನನ್ನ ಸದಸ್ವತ್ವ ಇದೆ ಆರು ಸಾವಿರ ರೂಪಾಯಿಯಿಂದ ಪ್ರಾರಂಭಗೊಂಡ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಇದೀಗ 40 ಲಕ್ಷದಷ್ಟು ವಿಸ್ತಾರವಾಗಿರುವ ಸಂತಸ ತಂದಿದೆ. ಬಂಟರ ಸಂಘ ಇದೀಗ 2 ಎರಡು ಕೋಟಿ ರೂಪಾಯಿಯಷ್ಟು ನೆರವನ್ನು  ವಿತರಿಸುತ್ತಿದೆ. ಸಮಾಜದ ಮಕ್ಕಳು ವಿದ್ಯೆಯಿಂದ ವಂಚಿತರಾಗದಂತೆ ಸಂಘಟನೆಗಳು ನೋಡಬೇಕು ಎಂದು ನುಡಿದರು. 

ಮತ್ತೋರ್ವ ಮುಖ್ಯ ಅತಿಥಿ  ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಜಯ ಕೆ. ಶೆಟ್ಟಿ ಮಾತನಾಡಿದರು. 

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಭಾರತ್ ಕೋಚ್ ಬಿಲ್ಡರ್ ಸಿಎಂಡಿ ಸದಾಶಿವ ಶೆಟ್ಟಿ ವಿದ್ಯೆ ಮನುಷ್ಯನ ಬದುಕನ್ನು ಬದಲಾಯಿಸಬಲ್ಲದು. ನಾವು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಅವರನ್ನು ಸ್ವ ಪ್ರಜೆಗಳನ್ನಾಗಿ ಮಾಡುವಂತೆ ಶಕ್ತಿ ತುಂಬುವ ಸೇವೆ ಮಾಡೋಣ ಎಂದು ನುಡಿದರು

 ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಸರಳಾ ಬಿ. ಶೆಟ್ಟಿ ಸ್ವಾಗತಿಸಿದರು, 

ವೇದಿಕೆಯಲ್ಲಿ ಕೃಷ್ಣ ಪ್ಯಾಲೇಸ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿ ಅಸೋಸಿಯೇಶನ್‌ ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಶೆಟ್ಟಿ, ಜತೆ ಕಾರ್ಯದರ್ಶಿ ಅಡ್ವೊಕೇಟ್‌ ಗುಣಾಕರ್‌ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶ್ಯಾಮ ಸುಂದರ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್. ಶೆಟ್ಟಿ, ವಿಭಾಗದ ಕಾರ್ಯಧ್ಯಕ್ಷೆ ಚರಣ್ ಆರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.  

 

More Images