ಭಿವಂಡಿ ಬಿಲ್ಲವರ ಅಸೋಸಿಯೇಶನ್ ನ 35ನೇ ವಾರ್ಷಿಕ ಸಮಾರಂಭ

ಭಿವಂಡಿ ಬಿಲ್ಲವರ ಅಸೋಸಿಯೇಶನ್ ನ 35ನೇ ವಾರ್ಷಿಕ ಸಮಾರಂಭ

HSA   ¦    Mar 07, 2018 03:13:38 PM (IST)
ಭಿವಂಡಿ ಬಿಲ್ಲವರ ಅಸೋಸಿಯೇಶನ್ ನ 35ನೇ ವಾರ್ಷಿಕ ಸಮಾರಂಭ

ಭಿವಂಡಿ: ಬಿಲ್ಲವರ ಅಸೋಸಿಯೇಶನ್ ಭಿವಂಡಿ ಇದರ ಸ್ಥಳೀಯ ಸಮಿತಿಯ 35ನೇ ವಾರ್ಷಿಕ ಸಮಾರಂಭವು ಮಾ.3ರಂದು ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಥಾಣೆಯ ಮೇಯರ್ ಮೀನಾಕ್ಷಿ ರಾಜೇಂದ್ರ ಶಿಂಧೆ ಅವರು ಮಾತನಾಡುತ್ತಾ, ಬಿಲ್ಲವರು ಪರಿಶ್ರಮಿಗಳು. ತಮ್ಮ ಕರಿಣ ಪರಿಶ್ರಮ ಮತ್ತು ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಬದ್ಧರಾಗಿ, ಎಲ್ಲರೊಂದಿಗೆ ಬೆರೆಯುವ ಗುಣ ಬಿಲ್ಲವರದ್ದಾಗಿದೆ. ಅದಕ್ಕೆ ಇಂದಿನ ಬೃಹತ್ ಸಂಭ್ರಮವೇ ಸಾಕ್ಷಿ ಎಂದರು.

ಗೌರವ ಅತಿಥಿಯಾಗಿ ಭಿವಂಡಿ ನಗರ ಬಿಜೆಪಿ ಅಧ್ಯಕ್ಷ ಸಂತೋಷ್ ಎಂ. ಶೆಟ್ಟಿ ಅವರು ಮಾತನಾಡಿ, ಬಿಲ್ಲವ ಸಮಾಜದಲ್ಲಿ ಜಯ ಸುವರ್ಣರೊಬ್ಬರು ದೃಢವ್ಯಕ್ತಿಯಾಗಿ ಮುಂದಾಳತ್ವದ ಶಕ್ತಿಯಾಗಿ ಬೆಳೆದಿದ್ದಾರೆ. ಅವರು ದೂರದೃಷ್ಟಿ ಚಿಂತನೆಯಿಂದ ಎಲ್ಲರಿಗೂ ಮಾದರಿ. ಸಮಿತಿಯು ಇಲ್ಲಿ ಕಳೆದ 35 ವರ್ಷಗಳಿಂದ ಸೇವೆಗೈಯುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಪುರೋಹಿತ ಸದಾಶಿವ ಶಾಂತಿ ಅವರು ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.