ಪುಣೆಯಲ್ಲಿ ವಿವಿಧ ಗಣ್ಯರ ಮೂರ್ತಿಗಳ ಅನಾವರಣ

ಪುಣೆಯಲ್ಲಿ ವಿವಿಧ ಗಣ್ಯರ ಮೂರ್ತಿಗಳ ಅನಾವರಣ

DA   ¦    Sep 22, 2018 10:24:07 AM (IST)
ಪುಣೆಯಲ್ಲಿ ವಿವಿಧ ಗಣ್ಯರ ಮೂರ್ತಿಗಳ ಅನಾವರಣ

ಬೆಳ್ತಂಗಡಿ: ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿನ ಎಮ್.ಐ.ಟಿ. (ಮೀಡಿಯಾ, ಇನ್‍ಫೊರ್ಮೇಶನ್, ಟೆಕ್ನೋಕಲ್ಚರ್), ವಿಶ್ವ ಶಾಂತಿ ವಿಶ್ವವಿದ್ಯಾನಿಲಯ ಮತ್ತು ರಾಜ್‍ಬಾಗ್‍ನಲ್ಲಿರುವ ಮೈಟ್ ಎಡಿಟಿ ( ಆರ್ಟ್, ಡಿಸೈನ್, ಟೆಕ್ನೋಲೋಜಿ) ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವವಾರ್‍ಜಿಬಾಗ್‍ನಲ್ಲಿರುವ ವಿಶ್ವದ ಅತಿದೊಡ್ಡ ಗೋಲಾಕಾರದ ರಚನೆಯ ಐತಿಹಾಸಿಕ, ತತ್ವಜ್ಞಾನಿ ಸಂತ ಶ್ರೀ ಧನ್ಯೇಶ್ವರ ವಿಶ್ವ ಶಾಂತಿ ಪ್ರಾರ್ಥನಾ ಮಂದಿರದಲ್ಲಿ ಸೆ. 21 ರಂದು ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಅನ್ಯಾನ್ಯ ಮಹಾಪುರುಷರ ಮೂರ್ತಿಗಳನ್ನು ಅನವಾರಣಗೊಳಿಸಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಭಗವಾನ್ ಮಹಾವೀರ ಸ್ವಾಮಿಯ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸಿದರು.

ಬಳಿಕ, ಇತಿಹಾಸಕಾರ ಶಿವಶಾಹಿರ್ ಬಾಬಾಸಾಹೇಬ ಪುರಂದರೆ ಹಾಗು ಡಾ.ಶಂಕರ ಅಭ್ಯಂಕರ್ ಅವರು ಸಮರ್ಥ ರಾಮದಾಸ್ ಅವರ, ಯುಜಿಸಿಯ ಮಾಜಿ ಅಧ್ಯಕ್ಷ ಡಾ| ಅರುಣ್ ನಿಗ್‍ವೇಕರ್ ಅವರು ಮ್ಯಾಕ್ಸ್ ಪ್ಲಾಂಕ್ ಅವರ, ಪಂ. ಹೃದಯನಾಥ ಮಂಗೇಶ್‍ಕರ್ ಹಾಗೂ ಉಷಾ ಮಂಗೇಶ್‍ಕರ್ ಅವರು ಸಂತ ಮೀರಾ ಬಾಯಿ ಮತ್ತು ಸಂತ ಕಬೀರ ಅವರ, ಅಯೋಧ್ಯೆ ರಾಮಜನ್ಮಭೂಮಿ ಶಿಲಾನ್ಯಾಸ ಮಾಜಿ ಕಾರ್ಯಕಾರಿ ಅಧ್ಯಕ್ಷ ಡಾ| ರಾಮ ವಿಲಾಸ ವೇದಾಂತಿ, ಅಯೋಧ್ಯೆಯ ಹನುಮಾನ್ ಗದ್ದಿಯ ಮಹಂತ ರಾಮದಾಸ್ ಅವರು ಭಾರತೀಯ ಸಂಸ್ಕಂತಿ,ಪರಂಪರೆ ಮತ್ತು ತತ್ವಜ್ಞಾನದ ಸಂಕೇತವಾಗಿರುವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮನ ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಡಾ. ವಿಜಯ ಪಿ ಭಾಟ್ಕರ್, ಪ್ರೊ. ಸ್ವಾತಿ ಎಮ್. ಕರಾಡ್ ಚಾಟೆ, ಪ್ರೊ. ರಾಹುಲ್ ವಿ. ಕರಾಡ್, ಪ್ರೊ. ಜ್ಯೋತಿ ಎ. ಕರಾಡ್ ಧಾಕ್ಣೆ, ಡಾ. ವಿಶ್ವನಾಥ್ ಡಿ.ಕರಾಡ್, ಡಾ. ಮಂಗೇಶ್ ಟಿ. ಕರಾಡ್ ಉಪಸ್ಥಿತರಿದ್ದರು.