ಪಿವಿ ಸಿಂಧು ಮುಡಿಗೆ ‘ಸುಧಾರಿತ ಆಟಗಾರ್ತಿ’ ಪ್ರಶಸ್ತಿ

ಪಿವಿ ಸಿಂಧು ಮುಡಿಗೆ ‘ಸುಧಾರಿತ ಆಟಗಾರ್ತಿ’ ಪ್ರಶಸ್ತಿ

Dec 13, 2016 05:36:12 PM (IST)

ದುಬೈ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್  ವತಿಯಿಂದ ವರ್ಷದ ಸುಧಾರಿತ ಆಟಗಾರ್ತಿ ಪ್ರಶಸ್ತಿಯನ್ನು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ  ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.

ನನಗೆ ತುಂಬಾನೆ ಸಂತೋಷವಾಗುತ್ತಿದೆ. ಕಾರಣ ನಾನು ಈ ಪ್ರಶಸ್ತಿ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸಿಂಧು ಹೇಳಿಕೊಂಡಿದ್ದಾರೆ.  ರಿಯೋ  ಒಲಿಂಪಿಕ್ಸ್ ನಲ್ಲಿ ಮಹಿಳೆಯ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿ.ವಿ.ಸಿಂಧು ಸ್ಪೇನ್ನ ಆಟಗಾರ್ತಿ ಕ್ಯಾರೋಲಿನಾ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕ ಪಡೆದುಕೊಂಡಿದ್ದರು.  ನವೆಂಬರ್ನಲ್ಲಿ ನಡೆದ ಚೀನಾ ಸೂಪರ್ಸೀರಿಸ್ ಟೂರ್ನಿ ಜಯಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದರು.