ನಲಾಸೋಪಾರದಲ್ಲಿ ನೂತನ ತುಳುಕೂಟ ಸ್ಥಾಪನೆ

ನಲಾಸೋಪಾರದಲ್ಲಿ ನೂತನ ತುಳುಕೂಟ ಸ್ಥಾಪನೆ

YK   ¦    Mar 30, 2018 10:24:02 AM (IST)
ನಲಾಸೋಪಾರದಲ್ಲಿ ನೂತನ ತುಳುಕೂಟ ಸ್ಥಾಪನೆ

ಮುಂಬಯಿ: ನಲಾಸೋಪಾರ ತುಳು-ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿ ಸುವ ಉದ್ದೇಶದಿಂದ ಸ್ಥಾಪನೆಗೊಂಡ ನೂತನ ತುಳುಕೂಟ ನಲಸೋಪರ ಇದರ ಉದ್ಘಾ ಟನಾ ಸಮಾರಂಭವು ಮಾ. 25ರಂದು ನಲಸೋಪರ ಪಶ್ಚಿಮದ ಹೊಟೇಲ್ಗ್ಯಾಲಕ್ಸಿಯ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತುಳುಕೂಟ ನಲಸೋಪರ ಅಧ್ಯಕ್ಷ ರಮೇಶ್ ವಿ. ಶೆಟ್ಟಿ ಕಾಪು ಇವರು ವಹಿಸಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ಚಾಲನೆ ನೀಡಿದರು. ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ಮೇಯರ್ ಪೇಶ್ಜಾಧವ್, ಅತಿಥಿಯಾಗಿ ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಉಮೇಶ್ನಾಯ್ಕ ಇವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ವಸಾಯಿ- ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ಆರ್. ಪಕ್ಕಳ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ಶೆಟ್ಟಿ ಪಡುಬಿದ್ರೆ, ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ಬಿ. ಸಾಲ್ಯಾನ್, ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ಉದ್ಯಮಿ, ಸಮಾಜ ಸೇವಕ ಮಂಜುನಾಥ ಶೆಟ್ಟಿ ವಸಾಯಿ, ರಜಕ ಸಂಘ ಮೀರಾರೋಡ್ವಿರಾರ್ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್ಅವರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ತುಳುಕೂಟ ನಲಸೋಪರ ಸಂಸ್ಥೆಯ ಗೌರವಾಧ್ಯಕ್ಷ ಶಶಿಧರ ಕೆ. ಶೆಟ್ಟಿ, ಅಧ್ಯಕ್ಷ ರಮೇಶ್ವಿ. ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ಶೆಟ್ಟಿ ಗುರ್ಮೆ, ಉಪಾಧ್ಯಕ್ಷ ಗಣೇಶ್ವಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ಕೋಶಾಧಿಕಾರಿ ಸುರೇಂದ್ರ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ಯಶವಂತ್ಸಾಲ್ಯಾನ್, ಜತೆ ಕೋಶಾಧಿಕಾರಿ ದಿವಾಕರ ಶೆಟ್ಟಿ ನಿಟ್ಟೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರಾನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿ ಕೆ. ಚೌಟ ಮೊದಲಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳುಕೂಟದ ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ, ಸ್ವಾಗತ ನೃತ್ಯ, ಏಕಪಾತ್ರಾಭಿನಯ ಇನ್ನಿತರ ವಿವಿಧ ವಿನೋದಾವಳಿಗಳು ಹಾಗೂ ಎಂಕ್ ಪುರುಷೊತ್ತಿಜ್ಜಿ ತುಳು ನಾಟಕ ಪ್ರದರ್ಶನಗೊಂಡಿತು. ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಿದ್ದು, ಪರಿಸರದ ನೂರಾರು ಸಂಖ್ಯೆಯಲ್ಲಿ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಸಿಗೆ ಸಹಕರಿಸಿದರು.

More Images