ಹೊರನಾಡ ಮಣ್ಣಲ್ಲಿ ಕನ್ನಡ ಬೆಳಗುತ್ತಿರುವುದು ಇತರರಿಗೆ ಮಾದರಿ: ಗುರ್ಮೆ ಸುರೇಶ್ ಶೆಟ್ಟಿ

ಹೊರನಾಡ ಮಣ್ಣಲ್ಲಿ ಕನ್ನಡ ಬೆಳಗುತ್ತಿರುವುದು ಇತರರಿಗೆ ಮಾದರಿ: ಗುರ್ಮೆ ಸುರೇಶ್ ಶೆಟ್ಟಿ

HSA   ¦    Nov 12, 2018 02:50:40 PM (IST)
ಹೊರನಾಡ ಮಣ್ಣಲ್ಲಿ ಕನ್ನಡ ಬೆಳಗುತ್ತಿರುವುದು ಇತರರಿಗೆ ಮಾದರಿ: ಗುರ್ಮೆ ಸುರೇಶ್ ಶೆಟ್ಟಿ

ಕಲ್ಯಾಣ್: ಜಾತಿ, ಮತ, ಧರ್ಮವನ್ನು ಮೀರಿ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುತ್ತಿರುವಂತಹ ಕಲ್ಯಾಣ್ ನ ಕನ್ನಡ ಸಾಂಸ್ಕೃತಿಕ ಕೇಂದ್ರ ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಸಾಹಿತಿ, ಸಮಾಜ ಸೇವಕ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಕಲ್ಯಾಣ್ ಪಶ್ಚಿಮದ ಗಿರಿಜಾ ಮಾತಾ ಪಯ್ಯಡೆ ಸಂಭಾಗೃಹದಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 17ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊರನಾಡಿನಲ್ಲಿ ಅದರಲ್ಲೂ ಮರಾಠಿ ಮಣ್ಣಿನಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಕನ್ನಡ ಸಾಂಸ್ಕೃತಿಕ ಕೇಂದ್ರವು ಪ್ರತಿಯೊಬ್ಬರಿಗೂ ಮಾದರಿ. ನಾಡು ನುಡಿಯ ಬಗ್ಗೆ ಇರುವ ನಿಮ್ಮ ಪ್ರೇಮ ಇತರರಿಗೆ ಪ್ರೇರಣೆಯಾಗಬೇಕು. ನಾವೆಲ್ಲರೂ ಒಂದಾಗಿ ಕನ್ನಡತನ ಕಟ್ಟೋಣ ಎಂದು ಅವರು ಕರೆಯಿತ್ತರು.

ಅತಿಥಿಗಳಾಗಿ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ, ಚಿಣ್ಣರ ಬಿಂಬದ ಪ್ರಕಾಶ್ ಭಂಡಾರಿ, ಮೆಹ್ತಾ ಪದವಿ ಕಾಲೇಜಿನ ಉಪಾಧ್ಯಕ್ಷ ವಿ.ಎನ್. ಹೆಗ್ಡೆ, ಮೈಸೂರು ಅಸೋಸಿಯೇಶನ್ ಮುಂಬಯಿ ಟ್ರಸ್ಟ್ ನ ಕೆ. ಮಂಜುನಾಥಯ್ಯ ಅವರು ಭಾಗವಹಿಸಿದರು.