ಮುಂಬೈನಲ್ಲಿ 2020ರಲ್ಲಿ “ಚಿಣ್ಣರ ಚಿಲಿಪಿಲಿ-4′: ವಿಶೇಷ ಸಮಿತಿ ರಚನೆ

ಮುಂಬೈನಲ್ಲಿ 2020ರಲ್ಲಿ “ಚಿಣ್ಣರ ಚಿಲಿಪಿಲಿ-4′: ವಿಶೇಷ ಸಮಿತಿ ರಚನೆ

YK   ¦    Dec 17, 2019 05:32:36 PM (IST)
ಮುಂಬೈನಲ್ಲಿ 2020ರಲ್ಲಿ “ಚಿಣ್ಣರ ಚಿಲಿಪಿಲಿ-4′: ವಿಶೇಷ ಸಮಿತಿ ರಚನೆ

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಆಶ್ರಯದಲ್ಲಿ 2020ರ ಫೆಬ್ರವರಿ 8ರಂದು ನಡೆಯುವ ನಾಲ್ಕನೇ ವರ್ಷದ ಬಂಟರವಾಣಿ “ಚಿಣ್ಣರ ಚಿಲಿಪಿಲಿ-4′ ಫ್ಯಾಶನ್‌ ಶೋ ಪ್ರತಿಭಾ ಸ್ಪರ್ಧೆ ಹಾಗೂ ಸಮೂಹ ನೃತ್ಯ ಸ್ಪರ್ಧೆ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಯಿತು.

ಕಾರ್ಯಕ್ರಮವು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ.

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಮಾರ್ಗದರ್ಶನದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಮತ್ತು ಸಮಿತಿಯ ಪ್ರೋತ್ಸಾಹ, ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಸಭೆಯಲ್ಲಿ ಕಾರ್ಯಕ್ರಮ ಬಗ್ಗೆ ಚರ್ಚೆ ಹಾಗೂ ಸಮಿತಿಯೊಂದನ್ನು ರಚಿಸಲಾಯಿತು.