ಸಮಾಜಕ್ಕೆ ಸೂರು ಸಿ. ಕರ್ಕೇರ ರ ಕೊಡುಗೆ ಚಿರಸ್ಮರಣೀಯ- ಚಂದ್ರಶೇಖರ

ಸಮಾಜಕ್ಕೆ ಸೂರು ಸಿ. ಕರ್ಕೇರ ರ ಕೊಡುಗೆ ಚಿರಸ್ಮರಣೀಯ- ಚಂದ್ರಶೇಖರ

IS   ¦    Nov 06, 2018 12:50:49 PM (IST)
ಸಮಾಜಕ್ಕೆ ಸೂರು ಸಿ. ಕರ್ಕೇರ ರ ಕೊಡುಗೆ ಚಿರಸ್ಮರಣೀಯ- ಚಂದ್ರಶೇಖರ

ಮುಂಬಯಿ: ಮುಂಬಯಿ ಮಹಾನಗರದ ಹೃದಯ ಭಾಗದಲ್ಲಿ ಹೋಟೇಲು ಉದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ವಿದೇಶಗಳಲ್ಲಿಯೂ ನಮ್ಮ ಕರಾವಳಿಯ ಆತಿಥ್ಯದ ಸ್ವಾದವನ್ನು ಪಸರಿಸಿದ ಬಿಲ್ಲವ ಸಮಾಜದ ಕುಲರತ್ನವೆಂದೇ ಗುರುತಿಸಿಕೊಂಡಿರುವ ಶಿಕ್ಷಣ ಪ್ರೇಮಿ, ಕೊಡುಗೈ ದಾನಿ, ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ, ಬಿಲ್ಲವ ಸಮಾಜದ ಐಕ್ಯತೆಗೆ ದುಡಿದ, ಸಮಾಜ ಸೇವಕ ಸೂರು ಸಿ. ಕರ್ಕೇರ ಅವರು ಅ. 31 ರಂದು ವಿಧಿವಶರಾಗಿದ್ದು ಅವರ ಶ್ರದ್ದಾಂಜಲಿ ಸಭೆಯು ಭಾನುವಾರ ನಡೆಯಿತು.

ಬಿಲ್ಲವ ಸಮಾಜದ ಮುಂದಾಳು ಜಯ ಸಿ ಸುವರ್ಣರ ಉಪಸ್ಥಿತಿಯಲ್ಲಿ ಬಿಲ್ಲವರ ಅಸೋಶಿಯೇಶನ್ ಮುಂಬಯಿ ಆಯೋಜಿಸಿದ ಈ ಶ್ರದ್ದಾಂಜಲಿ ಸಭೆಯಲ್ಲಿ ಅಸೋಶಿಯೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಎಸ್. ಪೂಜಾರಿಯವರು ಸೂರು ಸಿ. ಕರ್ಕೇರ ರ ಸಾಧನೆ ಹಾಗೂ ಜನಸಾಮಾನ್ಯರಿಗೆ ಅವರ ಕೊಡುಗೆ ಬಗ್ಗೆ ಮಾತನಾಡಿ ಶ್ರದ್ದಾಂಜಲಿ ಅರ್ಪಿಸಿದರು.

ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಏಂಡ್ ಇಂಡರ್ಷ್ಟೀಸ್ ನ ಅಧ್ಯಕ್ಷ, ಭಾರತ್ ಬ್ಯಾಂಕ್ ನ ನಿರ್ದೇಶಕ ಎನ್. ಟಿ. ಪೂಜಾರಿಯವರು ದಿ. ಸೂರು ಸಿ. ಕರ್ಕೇರ ರಿಗೆ ಶ್ರದ್ದಾಂಜಲಿ ಅರ್ಪಿಸುತ್ತಾ ತನ್ನ ಹೋಟೇಲು ಉದ್ಯಮದಲ್ಲಿ ಸಣ್ಣ ಮಟ್ಟದಿಂದ ಉನ್ನತ ಮಟ್ಟಕ್ಕೇರುವಲ್ಲಿ ಸೂರು ಸಿ. ಕರ್ಕೇರ ರ ಪ್ರೋತ್ಸಾಹ ಅಪಾರ. ದಿವಂಗತರ ಸಾಧನೆಯು ಸಮಾಜದ ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರದಲ್ಲಿ ಉಳಿಯುವಂತಾಗಲಿ ಎಂದರು.

ಬಿಲ್ಲವರ ಅಸೋಷಿಯೇಶನಿನ ನಿಕಟ ಪೂರ್ವ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಜಯ ಕೃಷ್ಣ ಶೆಟ್ಟಿ, ಖಾರ್ ಶನಿ ಪೂಜಾ ಸಮಿತಿಯ ಶಂಕರ್ ಸುವರ್ಣ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕರಾದ ಎಲ್. ವಿ. ಅಮೀನ್, ಪುರುಷೋತ್ತಮ ಕೋಟ್ಯಾನ್, ಭಾಸ್ಕರ ಎಂ. ಸಾಲ್ಯಾನ್, ಭಾರತ್ ಬ್ಯಾಂಕಿನ ಸಿಇಓ ಸಿ. ಅರ್. ಮೂಲ್ಕಿ, ಬಂಟರ ಸಂಘ ಮುಂಬಯಿಯ ಪ್ರಾದೇಸಿಕ ಸಮಿತಿಯ ಸಮನ್ವಯಕರಾದ ಡಾ. ಪ್ರಭಾಕರ ಶೆಟ್ಟಿ, ಹರೀಶ್ ಪೂಜಾರಿ, ಜೆ. ಎಂ. ಕೋಟ್ಯಾನ್, ಮೊಹನ್ ಮಾರ್ನಾಡ್, ಕೇಶವ ಕೋಟ್ಯಾನ್, ಕೆ. ಎಂ. ಕೋಟ್ಯಾನ್, ವರದ್ ಉಳ್ಲಾಲ್, ಶ್ರಿಧರ್ ಬಂಗೇರ ಇವರು ಶ್ರದ್ದಾಂಜಲಿ ಅರ್ಪಿಸುತ್ತಾ ಸೂರು ಕರ್ಕೇರರು ಮಹಾನಗರದಲ್ಲಿ ಹೊಟೇಲು ಉದ್ಯಮ ಮಾತ್ರವಲ್ಲದೆ ಮುಂಬಯಿ ಹಾಗೂ ತವರೂರಲ್ಲಿ ಎಲ್ಲಾ ಸಮುದಾಯದವರಿಗೂ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಿಕ ಸೇವೆಯಲ್ಲಿ ಮಾಡಿದ ಸಾಧನೆಯನ್ನು ಯಾರೂ ಮರೆಯುವಂತಿಲ್ಲ ಎಂದರು.

ಆರಂಭದಲ್ಲಿ ಬಿಲ್ಲವರ ಅಸೋಷಿಯೇಶನಿನ ಗೌ. ಪ್ರಧಾನ ಕಾರ್ಯದರ್ಶಿ ಧನಂಜರ್ ಎಸ್ ಕೋಟ್ಯಾನ್ ಅವರು ಮಾತನಾಡಿ ಸೂರು ಸಿ. ಕರ್ಕೇರ ರ ಸಾಧನೆ ಬಗ್ಗೆ ವಿವರವನ್ನು ನೀಡಿದರು.

ಮಹಾನಗರದ ಹೋಟೇಲು ಅಸೋಷಿಯೇಶನಿನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಾಜದ ಗಣ್ಯರು ಹಾಗೂ ಸೂರು ಸಿ. ಕರ್ಕೇರ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ದಿವಂಗತರ ಇಬ್ಬರು ಪುತ್ರರು ಮತ್ತು ಸಂಬಂಧಿಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.