ಕಲ್ಯಾಣ್: ಕರ್ನಾಟಕ ಸಂಘದಿಂದ ಮಹಾರಾಷ್ಟ್ರ ದಿನಾಚರಣೆ

ಕಲ್ಯಾಣ್: ಕರ್ನಾಟಕ ಸಂಘದಿಂದ ಮಹಾರಾಷ್ಟ್ರ ದಿನಾಚರಣೆ

YK   ¦    May 04, 2018 05:18:44 PM (IST)
ಕಲ್ಯಾಣ್: ಕರ್ನಾಟಕ ಸಂಘದಿಂದ ಮಹಾರಾಷ್ಟ್ರ ದಿನಾಚರಣೆ

ಕಲ್ಯಾಣ್‌: ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ಮಹಾರಾಷ್ಟ್ರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ವಿಚಾರವಾದಿ, ಲೇಖಕ ಸದಾನಂದ ಫಣಸೆ ಮತ್ತು ಅತಿಥಿ ಪ್ರತಿಷ್ಠಿತ ಶೇಟೆ ಶಿಕ್ಷಣ ಸಂಸ್ಥೆಯ ಸಂಚಾಲಕ ಅವಿರತ ಶೇಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರರು.

ಸಮಾರಂಭದಲ್ಲಿ ಸಾಧನೆಗೈದ ಡಾ.ಮುಕೇಶ್‌ ಶಹಾ (ವೈದ್ಯಕೀಯ), ಡಿ'ಸೋಜಾ ಜಾನ್‌ ಎಂ. ಝೆಡ್‌ (ಶಿಕ್ಷಣ ಹಾಗೂ ಸಾಮಾಜಿಕ) ವಿಲಾಸ್‌ ವಾಘ(ಕ್ರೀಡೆ)ಯಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷ ಗೋಪಾಲ ಹೆಗ್ಡೆ, ಗೌರವ ಕಾರ್ಯದರ್ಶಿ ನ್ಯಾಯವಾದಿ ನೂತನ್‌ ಹೆಗ್ಡೆ, ಉಪಾಧ್ಯಕ್ಷ ಕೆ. ಎನ್‌. ಸತೀಶ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದರ್ಶನಾ ಸೋನ್ಕರ್‌ ಇದ್ದರು.