ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಗೌರವ ಡಾಕ್ಟರೇಟ್  

ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಗೌರವ ಡಾಕ್ಟರೇಟ್  

YK   ¦    Jun 21, 2019 10:28:10 AM (IST)
ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಗೌರವ ಡಾಕ್ಟರೇಟ್   

ಕಲಾವಿದ ಝುಬೇರ್ ಖಾನ್ ಕುಡ್ಲ ಅವರಿಗೆ ಪಾಂಡಿಚೇರಿಯ ಗ್ಲೋಬಲ್ ಪೀಸ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 

ಜೂನ್‌ 9 ರಂದು ಪಾಂಡಿಚೇರಿಯಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರು ಕಲೆ ಹಾಗೂ ಮಕ್ಕಳ ಕ್ರಿಯಾತ್ಮಕ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ಲಲಿತಕಲೆ ವಿಭಾಗದಲ್ಲಿ ಈ ಗೌರವಕ್ಕೆ ಇವರನ್ನು ಆರಿಸಲಾಗಿದೆ. 

ಸಮಾರಂಭದಲ್ಲಿ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶ್ರೀ ಕೆ.ಸ್ವಾಮಿ ದೋರೈ, ಜರ್ಮನಿಯ ಗ್ಲೋಬಲ್ ಪೀಸ್ ಯೂನಿವರ್ಸಿಟಿಯ ಸಲಹೆಗಾರರಾದ ಶ್ರೀ ಜಾನ್ ಪೀಟರ್ ಜಸ್ ಬರ್ಗ್, ಇಂಗ್ಲೆಂಡ್ ಜಿಪಿಯುನ ಡಾ.ರಾಯಲ್ ಪ್ರೆಸೆನ್ಟ್, ದಕ್ಷಿಣ ಭಾರತದ ಖ್ಯಾತ ನಟರಾದ ಶ್ರೀಮಾನ್ ರಂಜಿತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಗೌರವಿಸಲಾಯಿತು. 

ದುಬೈ ನ ಏಶಿಯನ್ ಕಿಡ್ಸ್ ಅಕಾಡೆಮಿಯ ಕಲಾ ನಿರ್ದೇಶಕರಾಗಿರುವ ಝಬೇರ್ ರವರು ಕಳೆದ ಇಪ್ಪತ್ತು ವರ್ಷಗಳಿಂದ ಕಲೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.300 ಕ್ಕೂ ಅಧಿಕ ಮಕ್ಕಳ ಕ್ರಿಯಾತ್ಮಕ ಶಿಬಿರಗಳಲ್ಲಿ ನಿರ್ದೇಶಕರಾಗಿ, ಸಂಪನ್ಮೂಲ ವ್ಯಕ್ತಿ, ಸಂಘಟಕರಾಗಿ ತೊಡಗಿಸಿಕೊಂಡಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಿಂದ ಮೆಚ್ಚುಗೆ ಪತ್ರ ಪಡೆದಿರುವ ಇವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲಾಂ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮನ್ನಣೆಯನ್ನು ಪಡೆದಿರುತ್ತಾರೆ. 

ರಂಗ ಸ್ವರೂಪ ಕುಂಜತ್ತಬೈಲ್ ಇದರ ಪ್ರಧಾನ ಕಾರ್ಯದರ್ಶಿಯಾಗಿರುವ ಝುಬೇರ್ ಮಂಗಳೂರು ಮಹಾನಗರ ಪಾಲಿಕೆ ಉದ್ಯೋಗಿ ಶ್ರೀ ಆದಂಖಾನ್, ಫಾತಿಮ ದಂಪತಿಯ ಪುತ್ರ.

ಮಂಗಳೂರಿನ ಮಹಾಲಸ ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಚಿತ್ರಕಲಾ ಪದವೀಧರರು.