ಕರ್ನಿರೆ ಶ್ರೀಧರ ಶೆಟ್ಟಿ ವಿಧಿವಶ

ಕರ್ನಿರೆ ಶ್ರೀಧರ ಶೆಟ್ಟಿ ವಿಧಿವಶ

Jun 24, 2017 09:22:44 AM (IST)
ಕರ್ನಿರೆ  ಶ್ರೀಧರ ಶೆಟ್ಟಿ ವಿಧಿವಶ

ಮುಂಬಯಿ: ವಸಯಿ ಪರಿಸರದಲ್ಲಿ ಜನಾನುರಾಗಿಯಾಗಿ ಪರಿಸರದ ಎಲ್ಲಾ ಜಾತೀಯ ಬಂಧುಗಳ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತವಾದ ಪರಿಹಾರವನ್ನು ಕಲ್ಪಿಸುತ್ತಿದ್ದ ಕಲಾ ಪೋಷಕ, ಕೊಡುಗೈ ದಾನಿ, ಉದ್ಯಮಿ ಕರ್ನಿರೆ  ಶ್ರೀಧರ ಶೆಟ್ಟಿ ಅವರು ಶುಕ್ರವಾರ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲಿ ವಿಧಿವಶರಾಗಿದ್ದಾರೆ.

ದಿ.ಕರ್ನಿರೆ ಶ್ರೀಧರ ಶೆಟ್ಟಿ ಅವರು ಉತ್ತಮ ಸಂಘಟಕರಾಗಿದ್ದು ವಸಯಿ ಕರ್ನಾಟಕ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದವರಾಗಿದ್ದಾರೆ. ವಸಯಿ ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಅವರು, ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದಲ್ಲದೆ, ಮುಂಬಯಿ ಮಹಾನಗರದ  ಪ್ರತಿಷ್ಠಿತ ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷರಾದ ಕರ್ನಿರೆ  ವಿಶ್ವನಾಥ್ ಶೆಟ್ಟಿ ಅವರ ಸಹೋದರನಾಗಿದ್ದು ವಸಯಿ ಡಹಾಣು ಪ್ರಾದೇಶಿಕ ಸಮಿತಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಸಮಿತಿಯ ಸಮನ್ವಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.