ಬಂಟರಸಂಘ ಸಂಚಾಲಕತ್ವದ ರಾತ್ರಿಶಾಲೆಗಳ ವಾರ್ಷಿಕೋತ್ಸವ

ಬಂಟರಸಂಘ ಸಂಚಾಲಕತ್ವದ ರಾತ್ರಿಶಾಲೆಗಳ ವಾರ್ಷಿಕೋತ್ಸವ

Feb 06, 2018 03:39:48 PM (IST)
ಬಂಟರಸಂಘ ಸಂಚಾಲಕತ್ವದ ರಾತ್ರಿಶಾಲೆಗಳ ವಾರ್ಷಿಕೋತ್ಸವ

ಮುಂಬಯಿ: ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಫೆ.3ರಂದು ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಹಾಗೂ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಜಂಟಿ ಆಶ್ರಯದಲ್ಲಿ ರಾತ್ರಿ ಶಾಲೆಗಳ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಮತ್ತು ಬಂಟರವಾಣಿ ಪ್ರತಿಭಾ ಸ್ಪರ್ಧೆ ನಡೆಯಿತು.

ಸಮಾರಂಭವನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಂಟರ ಸಂಘಗಳ ಒಕ್ಕೂಡದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.