ಅಖಿಲ ಭಾರತ ಕೊಂಕಣಿ ಪರಿಷದ್ ಯಶಸ್ವಿಯಾಗಿ ಸಮಾಪ್ತಿ

ಅಖಿಲ ಭಾರತ ಕೊಂಕಣಿ ಪರಿಷದ್ ಯಶಸ್ವಿಯಾಗಿ ಸಮಾಪ್ತಿ

HSA   ¦    Jan 09, 2018 04:23:13 PM (IST)
ಅಖಿಲ ಭಾರತ ಕೊಂಕಣಿ ಪರಿಷದ್ ಯಶಸ್ವಿಯಾಗಿ ಸಮಾಪ್ತಿ

ಮುಂಬಯಿ: ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಆಯೋಜಿಸಿದ್ದ 31ನೇ ಅಖಿಲ ಭಾರತ ಕೊಂಕಣಿ ಪರಿಷದ್ ಜ.6ರಂದು ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಮಹಾರಾಷ್ಟ್ರ ರಾಜ್ಯ ಭಾರತ್ ಸ್ಕೌಟ್ ಗೈಡ್ಸ್ ಸಭಾಗೃಹದಲ್ಲಿ ಯಶಸ್ವಿಯಾಗಿ ನೆರವೇರಿತು.

ರಾಯನ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರು ಪರಿಷದ್ ನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮಾತೃಭಾಷೆ ಕೊಂಕಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕು. ಈ ಭಾಷೆ ನಮ್ಮನ್ನು ಸಮಾಜದಲ್ಲಿ ಪ್ರಜ್ವಲಿಸುವಂತೆ ಮಾಡಿದೆ. ಕೊಂಕಣಿಯನ್ನು ಮಾತೃಭಾಷೆ ಕರುಣಿಸಿದ್ದಕ್ಕೆ ದೇವರನ್ನು ಸ್ಮರಿಸಿ ಭಾಷೆ ಉಳಿಸೋಣ ಎಂದು ಹೇಳಿದರು.

ಕೊಂಕಣಿ ಸಾಹಿತಿ ಪಯ್ಯನ್ನೂರು ರಮೇಶ್ ಪೈ ಅವರ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಸಮ್ಮೇಳನವು ನಡೆಯಿತು. ವಿವಿಧ ಕ್ಷೇತ್ರದ ಗಣ್ಯರು ಈ ಸಮ್ಮೇಳನದಲ್ಲಿ ಅತಿಥಿಗಳಾಗಿ ಆಗಮಿಸಿದ್ದರು.