ಅಕ್ರಮ ಹೋಟೆಲ್ ಕಾರ್ಯಾಚರಣೆ ವಿರುದ್ಧ ಹೋಟೆಲಿಗರ ಪ್ರತಿಭಟನೆ

ಅಕ್ರಮ ಹೋಟೆಲ್ ಕಾರ್ಯಾಚರಣೆ ವಿರುದ್ಧ ಹೋಟೆಲಿಗರ ಪ್ರತಿಭಟನೆ

HSA   ¦    Jan 05, 2018 03:21:39 PM (IST)
ಅಕ್ರಮ ಹೋಟೆಲ್ ಕಾರ್ಯಾಚರಣೆ ವಿರುದ್ಧ ಹೋಟೆಲಿಗರ ಪ್ರತಿಭಟನೆ

ಮುಂಬಯಿ: ಅಕ್ರಮ ಹೋಟೆಲ್, ರೆಸ್ಟೋರೆಂಟ್ ಗಳ ನಿರ್ಮಾಣದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಉದ್ಯಮಿ, ಸಮಾಜಸೇವಕ ಎರ್ಮಾಳ್ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಹೋಟೆಲಿಗರು ಪ್ರತಿಭಟಿಸಿದರು.

ಕಮಲ ಮಿಲ್ಸ್ ಕಂಪೌಂಡ್ ನಲ್ಲಿ ನಡೆದ ಅಗ್ನಿ ಆಕಸ್ಮಿಕದ ಬಳಿಕ ಮುಂಬಯಿ ನಗರದಾದ್ಯಂತ ಅಕ್ರಮ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ವಿರುದ್ಧ ಬಿಎಂಸಿ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ವಿರೋಧಿಸಿ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಬಿಎಂಸಿ ಕಚೇರಿ ಎದುರು ಮೋರ್ಚಾ ತೆಗೆದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎರ್ಮಾಳ್ ಹರೀಶ್ ಶೆಟ್ಟಿ ಅವರು, ಹೋಟೆಲ್ ಕಂಪೌಂಡ್ ನಲ್ಲಿ ಸಿಲಿಂಡರ್ ಬಳಸದೇ ಇದ್ದರೂ ಬಿಎಂಸಿ ಅಧಿಕಾರಿಗಳು ಗೋಡೆ ಒಡೆದು ಹಾಕಿ ಹೋಟೆಲ್ ಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಯ್ಯಡೆ ಇಂಟರ್ ನ್ಯಾಶನಲ್ ಹೋಟೆಲ್ ಕಂಪೌಂಡ್ ಗೋಡೆ ಒಡೆದು ಹಾಕಲಾಗಿದೆ. ವೆಜ್ ಬ್ರೀಟ್ ಹೋಟೆಲ್ ನಲ್ಲಿ ಇದೇ ರೀತಿ ಮಾಡಲಾಗಿದೆ ಎಂದು ಅವರು ಹೇಳಿದರು.