ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ಮುಂಬಯಿ ಇದರ 22 ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಉತ್ಸವ

ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ಮುಂಬಯಿ ಇದರ 22 ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಉತ್ಸವ

HSA   ¦    Dec 23, 2019 11:00:41 AM (IST)
ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ಮುಂಬಯಿ ಇದರ 22 ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಉತ್ಸವ

ಮುಂಬಯಿ: ಆರಂಭದಲ್ಲಿ ಪ್ರತಿಷ್ಠಾನ ಸ್ಥಾಪನೆಯಾದಾಗ ಜನರಿಗೆ ಪ್ರಯೋಜನಕಾರಿಯಾಗಲು ನಾಲ್ಕು ವಿವಿಧ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದೆವು. ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಧಾರ್ಮಿಕ ಪ್ರಜ್ನೆ ಮೂಡಿಸಲು ಹರಿಕಥಾ ಸಪ್ತಾಹ, ಧರ್ಮ ಜಾಗೃತಿಗೊಳಿಸಲು ಯಾಗ ಮುಂತಾದವುಗಳು ಕಳೆದ 22 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಇದು ನಮ್ಮ ಸಂಸ್ಥೆಯ ಪದಾ ಧಿಕಾರಿಗಳ ಪರಿಶ್ರಮ ಹಾಗೂ ದಾನಿಗಳ ಸಹಕಾರದಿಂದ ಸಾಧ್ಯ ಎಂದು ಶ್ರೀಕೃಷ್ಣ ವಿಠ್ಹಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರು ತಿಳಿಸಿದರು.

ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ದ 22ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಉತ್ಸವ ಸಮಾರಂಭವು ಡಿ. 21 ರಂದು ಅಂಧೇರಿಯ ಅದಮಾರು ಮಠದ ಆವರಣದಲ್ಲಿ ಅಷ್ಠೋತ್ತರ ಸಹಸ್ರ ಮೋದಕ ಸಹಿತ (1008), ಅಷ್ಠೋತ್ತರ ಶತ ನಾಲಿಕೇರ ಮಹಾಗಣಪತಿ ಯಾಗ (108) ಹಾಗೂ ಸನವಗ್ರಹ ಶನೈಶ್ಚರ ಶಾಂತಿಯು  ಜರಗಿದ್ದು  ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐದು ಮಂದಿ ಸಾಧಕರನ್ನು ಸನ್ಮಾನಿಸಿ  ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರು ಮಾತನಾಡಿದರು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬೋಬೆ ಬಂಟ್ಸ್ ಅಸೋಷಿಯೇಶನಿನ ಅಧ್ಯಕ್ಷರಾದ ನ್ಯಾ. ಶುಭಾಷ್ ಶೆಟ್ಟಿಯವರು ಮಾತನಾಡುತ್ತಾ ಕಳೆದ 22 ವರ್ಷಗಳಿಂದ ಪ್ರತಿಷ್ಠಾನ ಕಾರ್ಯಗಳು ಜನಸಾಮಾನ್ಯರನ್ನು ಜಾಗೃತಿಗೊಳಿಸಿದೆ. ಧರ್ಮದ ದಾರಿಯಲ್ಲಿ ನಡೆಯಲು ಪ್ರೇರೇಪಿಸಿದೆ. ಇಂತಹ  ಕಾರ್ಯಕ್ಕೆ ನಾವೆಲ್ಲರೂ ಸಹಕರಿಸಬೇಕು ಎಂದರು.

ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ನ್ಯಾಯ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಎಲ್ ಶೆಟ್ಟಿಯವರು ಮಾತನಾಡಿ ಸ್ಥಾಪನೆಯ ದಿನದಿಂದಲೇ ಶ್ರೀಕೃಷ್ಣ ವಿಠ್ಹಲ ಪ್ರತಿಷ್ಠಾನ ದೊಂದಿಗೆ ನನಗೆ ನಿಕಟ ಸಂಪರ್ಕವಿದ್ದು ಇಂತಹ ಪುಣ್ಯಕಾರ್ಯಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ಇಂದು ದುಷ್ಕರ್ಮಿಗಳಿಂದ ನಮ್ಮ ನಾಡು ಉರಿಯುತ್ತಿದೆ. ಇದನ್ನು ಬಗೆಹರಿಸಲು ದೇವರಿಂದ ಮಾತ್ರ ಸಾಧ್ಯ. ದುಷ್ಕರ್ಮಿಗಳಿಂದ ದೇಶವನ್ನು ರಕ್ಷಿಸಲು ದೇವರ ಮೊರೆ ಹೋಗುಹುದು ನಮ್ಮೆಲ್ಲರ ಕರ್ತವ್ಯ. ಇಂದು ಗುಣಮಟ್ಟವನ್ನು ಪರಿಗಣಿಸಿ ಸಾಧಕರಿಗೆ ಸನ್ಮಾನಿಸಿದ್ದು ಇದು ಅರ್ಥಪೂರ್ಣವಾಗಿದೆ ಎಂದರು.

ಇನ್ನೋರ್ವ ಅತಿಥಿ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಯವರು ಮಾತನಾಡಿ ಇಂತಹ ಪುಣ್ಯ ಕಾರ್ಯದಲ್ಲಿ ಯುವಕರು ಕಡಿಮೆ ಸಂಖ್ಯೆಯಲ್ಲಿದ್ದು ಯುವಕರಲ್ಲಿ ಧರ್ಮ ಜಾಗೃತಿ ಕೆಲಸ ನಡೆಯುವಂತಾಗಲಿ. ಹರಿಕಥೆಯು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದರು.

ಅತಿಥಿ ಬೋಂಬೆ ಬಂಟ್ಸ್ ಅಸೋಷಿಯೇಶನಿನ ಮಾಜಿ ಅಧ್ಯಕ್ಷರಾದ ಶ್ಯಾಂ ಎನ್ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸನ್ಮಾನಿತರೆಲ್ಲರು ಸನ್ಮಾನಕ್ಕೆ ಅರ್ಹರು. ನಮ್ಮ ಮಕ್ಕಳನ್ನು ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪಾಲಕರು ಕ್ರೀಯಾಶೀಲರಾಗಲಿ.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜವಾಬ್ ಅಧ್ಯಕ್ಷರಾದ ಸಿಎ ಐ.ಆರ್. ಶೆಟ್ಟಿಯವರು ಮಾತನಾಡುತ್ತಾ ಸಮಾನ ಮನಸ್ಕರಿಂದ ಈ ಸಂಘಟನೆ ಬೆಳೆದಿದೆ. ಪ್ರತಿಷ್ಠಾನವು ಕೇವಲ ಧಾರ್ಮಿಕ ಸೇವೆಗೆ ಮಾತ್ರ ಸೀಮಿತವಾಗಿರದೆ ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದೆ ಎಂದರು.

ಬೋಂಬೆ ಬಂಟ್ಸ್ ಅಸೋಷಿಯೇಶನಿನ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ ಯವರು ಮಾತನಾಡಿ ನಮ್ಮ ಬದುಕಿನ ಯಶಸ್ಸಿಗೆ ದೇವರ ಅನುಗ್ರಹ ಬೇಕಾಗಿದ್ದು ಇಂತಹ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನಬೀಡುಮನೆ ರವೀಂದ್ರ ಶೆಟ್ಟಿಯವರು ಮಾತನಾಡಿ ಇಂದಿನ ಈ ಧಾರ್ಮಿಕ ಕಾರ್ಯದಿಂದ ನನ್ನ ಬದುಕು ಪಾವನಗೊಂಡಿದೆ. ನಮ್ಮ ಊರಿನ ಶಾಲೆಯ ಅಭಿವೃದ್ದಿಯಲ್ಲಿ ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ಮುಂಬಯಿ ಯ ಬಹು ದೊಡ್ಡ ದೇಣಿಗೆಯಿದೆ ಎಂದರು. ಇನ್ನು ಮುಂದೆಯೂ ಇವರು ನಮ್ಮ ಶಾಲೆಗೆ ಸಹಕರಿಸುತ್ತಿರಲಿ ಎಂದರು.

 

ಉದ್ಯಮಿ ಬನ್ನಂಜೆ ಯಶವಂತ ಶೆಟ್ಟಿಯವರು ಮಾತನಾಡಿ ಸಂಸ್ಥೆಯನ್ನು ಸ್ಥಾಪಿಸಲು ಸುಲಭವಾಗಿದ್ದರು ಅದನ್ನು ಮುನ್ನಡೆಸುವುದು ಕಷ್ಟಕರ. ಅಧಿಕಾರದ ದಾಹಕ್ಕಾಗಿ ಸಂಸ್ಥೆಗಳಲ್ಲಿ ಗಲಭೆಗಳು ನಡೆದು ಸಂಸ್ಥೆಗಳು ಮುಚ್ಚಿಕೊಳ್ಳುವುದಿದೆ. ಸಮಾಜ ಸೇವೆ ಮಾಡುವವರು ಸದ್ದು ಗದ್ದಲವಿಲ್ಲದೆ ಸೇವೆ ಮಾಡಬಹುದು. ಜಾತಿ ಬೇದವನ್ನು ಮರೆತು ಇಲ್ಲಿ ಒಗ್ಗಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಧರ್ಮದ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗೋಣ ಎಂದರು.

ಕೆ. ಗೋವಿಂದ ಭಟ್ ಇವರಿಗೆ ಯಕ್ಷಕಲಾ ಸಾರ್ವಭೌಮ ಪ್ರಸಸ್ತಿ, ಸುನಂದಾ ಎಸ್ ಉಪಾಧ್ಯಾಯ ರಿಗೆ ಅಪೂರ್ವ ಗೌರವ ಮಹಿಳಾ ರತ್ನ ಪ್ರಸಸ್ತಿ,  ಕೆ. ರಾಜೇಂದ್ರ ಭಟ್ ರಿಗೆ ಸುವಿದ್ಯಾ ವಿಚಕ್ಷಣ ಪ್ರಸಸ್ತಿ,   ಡಾ. ಅರ್. ಕೆ. ಶೆಟ್ಟಿ ಯವರಿಗೆ  ಸಮಾಜ ಸೇವಾ ದುರೀಣ ಪ್ರಸಸ್ತಿ,  ಮತ್ತು ಹರೀಶ್ ಜಿ ಅಮೀನ್ ಇಅರಿಗೆ  ಸಮಾಜ ಸೇವಾ ದುರಂದರ್ ಪ್ರಸಸ್ತಿ,  ನೀಡಿ  ಸನ್ಮಾನಿಸಲಾಯಿತು. ಸುಶೀಲ ದೇವಾಡಿಗ, ಪದ್ಮನಾಭ ಸಸಿಹಿತ್ತ್ಲು, ಕೈರಬೆಟ್ಟು ವಿಶ್ವನಾಥ ಭಟ್, ಶ್ಯಾಮಲ ಭಟ್ ಇವರು ಸನ್ಮಾನ ಪತ್ರವನ್ನು ವಾಚಿಸಿದರು.

ಜೊತೆ ಕಾರ್ಯದರ್ಶಿ ಕುಕ್ಕೆಹಳ್ಳಿ ಸದಾನಂದ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು.  ಕಾರ್ಯಕ್ರಮವನ್ನು ಅಶೋಕ ಪಕ್ಕಳ ಮತ್ತು ಸುಶೀಲ ದೇವಾಡಿಗ ನಿರೂಪಿಸಿದರು.

ವೇದಿಕೆಯಲ್ಲಿ ಶ್ರೀಕೃಷ್ಣ ವಿಠ್ಹಲ  ಪ್ರತಿಷ್ಠಾನ ಮುಂಬಯಿ ಯ ಟ್ರಷ್ಟಿಗಳಾದ ಡಾ. ವಿರಾರ್ ಶಂಕರ್ ಶೆಟ್ಟಿ ಮತ್ತು ಸುಮಾ ವಿ. ಭಟ್, ಕೋಶಾಧಿಕಾರಿ ಅವಿನಾಷ್ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

ರಮೇಶ್ ಡಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಪೂವಪ್ಪ ಪೂಜಾರಿ, ಸಹಕಾರ್ಯದರ್ಶಿ ಕುಕ್ಕೆಹಳ್ಳಿ ಸದಾನಂದ ಶೆಟ್ಟಿ, ಶಶಿಧರ ಬಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಂದಾ ಎಸ್ ಉಪಾಧ್ಯಾಯ, ಯುವ ವಿಭಾಗದ ಸಂಚಾಲಕ ನವೀನ್ ಪಡು ಇನ್ನ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗುರುಮೂರ್ತಿ, ಜಗನ್ನಾಥ ಪುತ್ರನ್, ಜಗನ್ನಾಥ ಕಾಂಚನ್, ವಿಶ್ವನಾಥ  ಸಿ. ಶೆಟ್ಟಿ, ಅದಮಾರು ಮಠದ ಪ್ರಭಂಧಕ ರಾಜೇಶ್ ಭಟ್, ಶಂಕರ ಕೆ. ಪೂಜಾರಿ, ಸುಧಾಕರ ಶೆಟ್ಟಿ, ಗೋಪಾಲ್ ನ್ಯಾಕ್, ರವೀಂದ್ರ ಕರ್ಕೇರ, ಸುಧೀರ್ ಶೆಟ್ಟಿ, ಸುಧೀರ್ ಅಮೀನ್, ಸತೀಶ್ ಪೂಜಾರಿ, ಮಾಧವ ಕೋಟ್ಯಾನ್, ದಿನೇಶ್ ಕರ್ಕೇರ, ವಾದಿರಾಜ ಕುಬೇರ್, ಪ್ರಭಾಕರ ಬೆಳುವಾಯಿ, ರಾಜು ಪೂಜಾರಿ, ಭರತ್ ಶೆಟ್ಟಿ, ವಸುಂಧರ ಶೆಟ್ಟಿ, ರಮಾನಾಥ ಕೋಟ್ಯಾನ್, ಶ್ಯಾಮಲಾ ಶಾಸ್ತ್ರಿ, ವಿಜಯಾ ರಾವ್, ಜಯಾ ರಾವ್, ಲಕ್ಷ್ಮೀ ಕೋಟ್ಯಾನ್, ಸುಚಿತ್ರಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್

ಚಿತ್ರ: ದಿನೇಶ್ ಕುಲಾಲ್