ಸೌದಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ವ್ಯಕ್ತಿ ಸಾವು

ಸೌದಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ವ್ಯಕ್ತಿ ಸಾವು

SC   ¦    Oct 10, 2017 12:58:18 PM (IST)
ಸೌದಿಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ವ್ಯಕ್ತಿ ಸಾವು

ಕಾಸರಗೋಡು: ಸೌದಿಯಲ್ಲಿ ಉಂಟಾದ ರಸ್ತೆ ಅಪಘಾತದಲ್ಲಿ ಕುಂಬಳೆ ನಿವಾಸಿ ಯೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ಬಂಬ್ರಾಣದ ಸಲಾಂ ( ೩೦) ಎಂದು ಗುರುತಿಸಲಾಗಿದೆ. ಜಿದ್ದಾ ಕೆ ಎಂ ಸಿ ಸಿ ಸಂಘಟನೆ ಯ ಮಂಜೇಶ್ವರ ಮಂಡಲ ಕಾರ್ಯದರ್ಶಿಯಾಗಿದ್ದರು.

ಸೋಮವಾರ ಸಂಜೆ ಸಲಾಂ ಸಂಚರಿಸುತಿದ್ದ ಕಾರಿಗೆ ಟ್ರಕ್ಕೊಂದು ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿರುವುದಾಗಿ ಮಾಹಿತಿ ಲಭಿಸಿದೆ. ಏಳು ತಿಂಗಳ ಹಿಂದೆಯಷ್ಟೇ ಇವರ ವಿವಾಹ ನಡೆದಿತ್ತು.