ದುಬೈನಲ್ಲಿ ಅದ್ಧೂರಿ ಬಿಸಿಎಫ್ ಇಫ್ತಾರ್ ಕೂಟ

ದುಬೈನಲ್ಲಿ ಅದ್ಧೂರಿ ಬಿಸಿಎಫ್ ಇಫ್ತಾರ್ ಕೂಟ

May 16, 2019 05:37:13 PM (IST)
ದುಬೈನಲ್ಲಿ ಅದ್ಧೂರಿ ಬಿಸಿಎಫ್ ಇಫ್ತಾರ್ ಕೂಟ

ದುಬೈ: ಅನಿವಾಸಿ ಕನ್ನಡಿಗರ ಪ್ರಖ್ಯಾತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಂ ವತಿಯಿಂದ ಈಚೆಗೆ ದುಬೈ ಯಾ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯ ಇಫ್ತಾರ್ ಮೀಟ್ 2019 ನೆರವೇರಿತು.

ಯುಎಇಯಾದ್ಯಂತ ಸುಮಾರು ಸಾವಿರಕ್ಕೂ ಅಧಿಕ ಮುಸ್ಲಿಂ- ಹಿಂದೂ ಹಾಗೂ ಕ್ರಿಶ್ಚಿಯನ್ ಸಮಾಜದ ಅನಿವಾಸಿ ಕನ್ನಡ ಹಾಗೂ ಕನ್ನಡೇತ್ತರ ಭಾಂದವರು, ಮಹನೀಯರು, ಮಹಿಳೆಯರು ಮತ್ತು ಮಕ್ಕಳು ಸಮಾರಂಭದಲ್ಲಿ ಭಾಗಿಯಾದರು.

ಇಫ್ತಾರ್ ಗೆ ಮುನ್ನ ಜನಾಬ್ ಇಕ್ಬಾಲ್ ಕುಂದಾಪುರ (ಮೇಫ), ಜನಾಬ್ ಅಶ್ರಫ್ ಸತ್ತಿಕಲ್ ಸಹಭಾಗಿತ್ವದಲ್ಲಿ ಜನಾಬ್ ಸಜಿಪ ಅಬ್ದುಲ್ ರಹ್ಮಾನ್, ಅಮೀರ್ ಹಳೆಯಂಗಡಿ, ಜನಾಬ್ ರಿಯಾಜ್ ಸುರತ್ಕಲ್ ರವರ ಸಹಯೋಗದೊಂದಿಗೆ ಹಾಗೂ ಇಸ್ಲಾಮಿಕ್ ರಸ ಪ್ರಶ್ನೆಗಳ ಸ್ಪರ್ಧೆ ನಡೆಸಲಾಯಿತು.

ಬಹುಮಾನ್ಯ ತಾಹ ಬಾಫಖಿ ತಂಗಳ್, ಗೌರವಾಧ್ಯಕ್ಷರು, ಅಧ್ಯಕ್ಷರು ಪ್ರಾರ್ಥನೆ ನೆರವೇರಿಸಿದರು. ನಮಾಜಿನ ನಂತರ ಮುಖ್ಯ ಸಭಾಕಾರ್ಯಕ್ರಮ ಹಾಗೂ ಬಿಸಿಎಫ್ ಸ್ಕಾಲರ್ಷಿಪ್ ನಿರೂಪಣಾ ಕಾರ್ಯಕ್ರಮ ನಡೆಸಲಾಯಿತು.

ಬಿಸಿಎಫ್ ಅಧ್ಯಕ್ಡ್ಶ ಡಾ.ಬಿ.ಕೆ. ಯೂಸುಫ್ ಅವರ ಘಾನಾ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಿಸಿಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್ ಅತಿಥಿ ಗಳನ್ನು ಸ್ವಾಗತಿಸಿದರು. ಮಾಸ್ಟರ್ ಆಫ್ರಾಜ್ ಅಫೀಕ್ ಹುಸೈನ್ ಕಿರಾತ್ ಪಠಿಸಿದರು.

ಡಾ ಬಿ.ಕೆ. ಯೂಸುಫ್ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯೆಯು ಸಮಾಜದ ಅಭಿವೃದ್ಧಿಯ ಹೆಬ್ಬಾಗಿಲಾಗಿದ್ದು ಪ್ರವಾದಿ ಮೊಹಮ್ಮದ್ ವಿದ್ಯೆಗೆ ಅತೀ ಹೆಚ್ಚು ಮಹತ್ವ ಕೊಟ್ಟು ವಿದ್ಯೆಯು ಸಮಾಜದ ಜೀವಾಳ ಎಂದು ಹೇಳಿದ್ದು ಪವಿತ್ರ ಕುರಾನಿನಲ್ಲಿ ಅಲ್ಲಾಹು ಕೊಟ್ಟ ವಾಗ್ದಾನವಾಗಿದೆ. ಪ್ರಸ್ತುತ ರಂಜಾನ್ ವೃತದ ತಿಂಗಳು ನಮ್ಮಿಂದ ದ ತಪ್ಪು ದೋಷಗಳನ್ನು ಕ್ಷಮಿಸುವ ತಿಂಗಳು. ಅಲ್ಲಾಹುವಿನ ಅನುಗ್ರಹ ಈ ವೇಳೆ ಎಲ್ಲರ ಮೇಲೇರುತ್ತದೆ ಎಂದರು.

ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಮಾತನಾಡಿ, ಅಲ್ಲಾಹು ನಮ್ಮ ಎಲ್ಲ ಈ ಉತ್ತಮ ಕಾರ್ಯವನ್ನು ಸ್ವೀಕರಿಸಿ ಅನುಗ್ರಹಿಸಲಿ ಎಂದು ದುಆ ಮಾಡಿದರು. ನಿಸ್ವಾರ್ಥ ಮನಸ್ಸಿನ ಸಮಾಜ ಸೇವೆಯನ್ನು ಮಾಡುವವರನ್ನು ಖಂಡಿತವಾಗಿ ಅಲ್ಲಹು ಅನುಗ್ರಹಿಸುತ್ತಾನೆ, ಒಂದು ಸಣ್ಣ ಒಳ್ಳೆಯ ಕಾರ್ಯ ಒಂದು ದೊಡ್ಡ ಅನುಗ್ರಹವಾಗಿ ನಮಗೆ ಒದಗುತ್ತದೆ ಎಂದರು.

ಬಿಸಿಎಫ್ ಸ್ಕಾಲರ್ಷಿಪ್ ಕಮಿಟಿ ಉಪಾಧ್ಯಕ್ಷರಾದ ಜನಾಬ್ ಒ.ಇ.ಮೂಳೂರ್ ಮಾತನಾಡಿ, ಇಫ್ತಾರ್ ಕೂಟದಲ್ಲಿ ಸೇರಿರುವ ಎಲ್ಲ ಕನ್ನಡಿಗರು, ವಿವಿಧ ಜಾತಿ, ಪಂಗಡಕ್ಕೆ ಸೇರಿದ ಕನ್ನಡಿಗರಾಗಿದ್ದು ಈ ಇಫ್ತಾರ್ ಕೂಟವು ನಮ್ಮ ಭಾರತದ, ವಿಶೇಷವಾಗಿ ನಮ್ಮ ಕರ್ನಾಟಕದ ಸಹೋದರತೆ, ಸಮಾನತೆ ಯನ್ನು ಸಾರುವ ವಿವಿಧತೆಯಲ್ಲಿ ಏಕತೆಯ ಸಂದೇಶಕ್ಕೆ ಸಾಕ್ಷಿಯಾಗಿದೆ ಎಂದರು.

ಬಿಸಿಎಫ್ ಪ್ರತಿ ವರ್ಷ ಸುಮಾರು 600 ರಿಂದ 700 ರಷ್ಟು ಮಕ್ಕಳಿಗೆ ಪದವಿ ಪೂರ್ವ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿವಿಧ ಕ್ಷೆತ್ರಗಳಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ.

ಸಮಾಜ ಸೇವಕ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜನಾಬ್ ಝಫರುಲ್ಲಾ ಖಾನ್ ಮಾತನಾಡಿ, ಬಿಸಿಎಫ್ ಸಂಸ್ಥೆಯು ಅದೆಷ್ಟೋ ವರ್ಷಗಳಿಂದ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ದೊಡ್ಡ ರೀತಿಯಲ್ಲಿ ಮಾಡುತ್ತಿದ್ದು ಈ ಸಂಸ್ಥೆಯ ಪ್ರಧಾನ ಸಲಹೆಗಾರರಾಗಿ ಜನ ಸೇವೆ ಮಾಡುವ ಅವಕಾಶ ತನಗೆ ಸಿಕ್ಕಿದ್ದು ಇದು ತನಗೊಂದು ಹೆಮ್ಮ್ಮೆಯ ವಿಚಾರ ಎಂದರು.
ಜನಾಬ್ ಝಫರುಲ್ಲಾ ಖಾನ್ ಮಂಡ್ಯ ರವರಿಗೆ ಅವರ ಸುಧೀರ್ಘ ಅವಧಿಯ ಸಮಾಜ ಸೇವೆಯನ್ನು ಗುರುತಿಸಿ ಬಿಸಿಎಫ್ ವತಿಯಿಂದ ವಿಶೇಷವಾದ ಗೌರವ ಫಲಕವನ್ನು ನೀಡಿ ಸನ್ಮಾನಿಸಲಾಯಿತು.
ಮತ್ತೋರ್ವ ಮುಖ್ಯ ಅತಿಥಿ ಪ್ರಖ್ಯಾತ ಉದ್ಯಮಿ ಜನಾಬ್ ಶಬ್ಬೀರ್ ಸೈಫುದ್ದೀನ್ ಅವರು ಉತ್ಕ್ರಷ್ಟವಾದ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜನಾಬ್ ರಿಜ್ವಾನುಲ್ಲಾ ಖಾನ್, ಪ್ರೆಸಿಡೆಂಟ್- ಎಮಿರೇಟ್ಸ್ ಗ್ಲಾಸ್, ಜನಾಬ್ ಝಯ್ನ್ ಝಫರುಲ್ಲಾ ಖಾನ್, ಜನಾಬ್ ಅಶ್ರಫ್ ಏ ಒ., ಜನಾಬ್ ನವೀದ್, ಆಖ ಸಮೀರ್ ಯೂಸುಫ್, ಜನಾಬ್ ಅಸ್ಲಾಂ- ಅಲ ಬಾಹರ್ ಹೋಟೆಲ್ಸ್, ಜನಾಬ್ ಇರ್ಷಾದ್ , ನಫೀಸ್ ಗ್ರೂಪ್, ಜನಾಬ್ ಶುಕೂರ್ ಮನಿಲಾ,. ಜನಾಬ್ ಯೂಸುಫ್ ಅರ್ಲಪಡವು ಇದ್ದರು.

ಪ್ರಧಾನ ಕಾರ್ಯದರ್ಶಿ ಡಾ.ಕಾಫು ಮೊಹಮ್ಮದ್ ಪ್ರಸ್ತಾವಿಕ ಮಾತನಾಡಿದರು.

ಕನ್ನಡ ಪರ ಸಂಘಟನೆಗಳಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್,ಕೆಸಿಎಫ್, ಶಾರ್ಜಾ ಕರ್ನಾಟಕ ಸಂಘ, ಕೆಎನ್ ಆರ್ ಐ , ದುಬೈ ಕರ್ನಾಟಕ ಸಂಘ , ಸ ಅದಿಯ್ಯ, ಕೆಐಸಿ , ಮೂಳೂರ್ ಅಸೋಸಿಯೇಷನ್, ಕುಂದಾಪುರ ಅಸೋಸಿಯೇಷನ್, ತವಕ್ಕಲ್ ಓವರ್ಸೀಸ್,ಕಣ್ಣಂಗಾರ್ ಅಸೋಸಿಯೇಷನ್ ಅಲ ಕಮರ್ ಅಸೋಸಿಯೇಷನ್, ಆಲ್ ಇಸ್ಲಾಮಿಯ್ಯ, ಬಿಲ್ಲವಾಸ್ ದುಬೈ, ಮ್ಯಾಂಗಲೋರ್ ಕೊಂಕಣ್ಸ್ , ಬಂಟ್ಸ್ ಅಸೋಸಿಯೇಷನ್ ಮೊದಲ್ಲದ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಸಿಎಫ್ ಉಪಾಧ್ಯಕ್ಷರಾದ ಜನಾಬ್ ಅಮೀರುದ್ದೀನ್ ಎಸ್ ಐ ಅವರು ಧನ್ಯವಾದ ಸಮರ್ಪಿಸಿದರು.