ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಭಾಂಡೂಪ್ ಪಶ್ಚಿಮ ಶಾಖೆ ಸ್ಥಳಾಂತರ

ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಭಾಂಡೂಪ್ ಪಶ್ಚಿಮ ಶಾಖೆ ಸ್ಥಳಾಂತರ

HSA   ¦    Jan 28, 2019 01:30:42 PM (IST)
ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಭಾಂಡೂಪ್ ಪಶ್ಚಿಮ ಶಾಖೆ ಸ್ಥಳಾಂತರ

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ ಭಾಂಡೂಪ್‌ ಪಶ್ಚಿಮದ ಸ್ಥಳಾಂತರಿತ ಶಾಖೆಯನ್ನು ಸ್ಥಳೀಯ ಸುಭಾಷ್‌ ನಗರದಲ್ಲಿನ ಸ್ಕಾಯ್‌ಲೈನ್‌ ಸ್ಪಾರ್ಕಲ್‌ ಕಟ್ಟಡದಲ್ಲಿ ಜ. 25ರಂದು ಸೆಂಟ್ರಲ್‌ ಹೆಲ್ತ್‌ ಹೋಮ್‌ ಭಾಂಡೂಪ್‌ ಇದರ ಮುಖ್ಯಸ್ಥ ಡಾ| ಕೆ.ರತ್ನಾಕರ್‌ ಶೆಟ್ಟಿ ಉದ್ಘಾಟಿಸಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರಿಬ್ಬನ್‌ ಎಳೆದು ಶಾಖೆಯನ್ನು ಸೇವಾರ್ಪಣೆಗೊಳಿಸಿದರು. ಬ್ಯಾಂಕಿನ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ದೀಪ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌ ಎಟಿಎಂ ಸೇವೆಯನ್ನೂ ಹಾಗೂ ನಿರ್ದೇಶಕಿ ಶಾರದಾ ಸೂರು ಕರ್ಕೇರ ಭದ್ರತಾ ಕೇಂದ್ರವನ್ನು ಉದ್ಘಾಟಿಸಿದರು.

ಉದ್ಯಮಿ ಜನಾರ್ದನ ಕದಂ, ಧನ್‌ಬದ್ಧೂರ್‌ ಸಿಂಗ್‌, ರಾಜೇಶ್‌ ಅಗರ್ವಾಲ್‌, ಸಿಎ ಕಪಾಡಿಯಾ, ಸಂಗೀತಾ ಪಂಕಜ್‌ ಅಗರ್ವಾಲ್‌, ರವೀಂದ್ರ ಪೂಜಾರಿ, ಹಿರಿಯ ನಾಗರಿಕ ಪ್ರಭಾಕರ್‌ ವಿನಾಯಕ್‌ ಪ್ರಧಾನ್‌ ಮಾತನಾಡಿ ಭಾರತ್‌ ಬ್ಯಾಂಕ್‌ನಲ್ಲಿ ತಮ್ಮ ವ್ಯವಹಾರ ಅನುಭವಗಳನ್ನು ಹಂಚಿ ಸಿಬಂದಿಗಳ ಸೇವಾವೈಖರಿಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ, ನಿರ್ದೇಶಕರಾದ ಎಲ್‌. ವಿ. ಅಮೀನ್‌, ಎನ್‌. ಟಿ. ಪೂಜಾರಿ, ಗಂಗಾಧರ್‌ ಜೆ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್‌ ಎಂ. ಸಾಲ್ಯಾನ್‌, ಎಂ. ಎನ್‌. ಕರ್ಕೇರ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಮೋಹನ್‌ದಾಸ್‌ ಎ. ಪೂಜಾರಿ, ಪುರುಷೋತ್ತಮ ಎಸ್‌. ಕೋಟ್ಯಾನ್‌, ಮಾಜಿ ನಿರ್ದೇಶಕರಾದ ಎನ್‌. ಎಂ. ಸನಿಲ್‌, ಎಂ. ಬಿ. ಸನಿಲ್‌, ಬಿಲ್ಲವರ ಧುರೀಣರುಗಳಾದ ರಾಘವ ಕೆ.ಕುಂದರ್‌, ಶಂಕರ್‌ ಪೂಜಾರಿ, ನಿವೃತ್ತ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್‌, ಸದಾನಂದ ಪೂಜಾರಿ, ನವೀನ್‌ಚಂದ್ರ ಬಂಗೇರ, ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹರೀಶ್‌ ಜಿ. ಅಮೀನ್‌, ಬ್ಯಾಂಕ್‌ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ, ಉಪ ಪ್ರಧಾನ ಪ್ರಬಂಧಕ ಪ್ರಭಾಕರ್‌ ಜಿ. ಸುವರ್ಣ, ಸತೀಶ್‌ ಎಂ. ಬಂಗೇರ, ಪ್ರಭಾಕರ ಜಿ. ಪೂಜಾರಿ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್‌ ಎ.ಗುಜರನ್‌, ವಿಜಯ್‌ ಪಾಲನ್‌, ಭಾರತ್‌ ಬ್ಯಾಂಕ್‌ ಎಂಪ್ಲಾಯಿಸ್‌ ಯೂನಿಯನ್‌ ಕಾರ್ಯದರ್ಶಿ ದಿನೇಶ್‌ ಕೆ. ಸನಿಲ್‌, ವಿವಿಧ ಶಾಖೆಗಳ ಮುಖ್ಯಸ್ಥರು ಸೇರಿದಂತೆ ಬ್ಯಾಂಕ್‌ನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.