ಶಂಸುಲ್ ಅರೇಬಿಕ್ ಕಾಲೇಜು ತೋಡಾರ್ ಅಬುದಾಬಿ ವಾರ್ಷಿಕ ಸಭೆ

ಶಂಸುಲ್ ಅರೇಬಿಕ್ ಕಾಲೇಜು ತೋಡಾರ್ ಅಬುದಾಬಿ ವಾರ್ಷಿಕ ಸಭೆ

Dec 14, 2016 11:05:04 AM (IST)

ಅಬುದಾಬಿ: ಶಂಸುಲ್ ಅರೇಬಿಕ್ ಕಾಲೇಜು ತೋಡಾರ್ ಇದರ ಅಬುಧಾಬಿ ಘಟಕದ ಪ್ರಥಮ ವಾರ್ಷಿಕ ಸಭೆ ಹಾಗೂ ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಸಮಿತಿಯ ಸಹಯೋಗ ದೊಂದಿಗೆ ಮೌಲೂದ್ ಕಾರ್ಯಕ್ರಮವು ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಯಿತು.

ಪೆಲ್ಲಾರ್ ಮೊಹಮ್ಮದ್ ಕುಟ್ಟಿ ಉಸ್ತಾದ್ ಹಾಗೂ ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು ಪ್ರಿನ್ಸಿಪಾಲ್ ಸಲೀಂ ದಾರಿಮಿ ಉಸ್ತಾದರ ನೇತ್ರತ್ವದಲ್ಲಿ ನಡೆದ ಮೌಲೂದ್ ಕಾರ್ಯಕ್ರಮದ ನಂತರ ಉಸ್ತಾದ್ ಹನೀಫ್ ಮುಸ್ಲಿಯಾರ್ ಬಿ ಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ಸೇರಿದ ವಾರ್ಷಿಕ ಮಹಾಸಭೆಯನ್ನು ಜನಾಬ್ ಅಬ್ದುಲ್ ಖದರ್ ಬೈತಡ್ಕ ರವರು ಉದ್ಘಾಟಿಸಿದರು. ಮುಖ್ಯ ಪ್ರಭಾಷಣ ಮಾಡಿದ ಉಸ್ತಾದ್ ಸಲೀಂ ದಾರಿಮಿಯವರು ಸಂಸ್ಥೆಯ ಕಾರ್ಯ ವೈಖರಿಯನ್ನು ವಿವರಿಸಿದರು ಹಾಗೂ ಸಂಸ್ಥೆಯಲ್ಲಿ ಕಲಿಯುತಿರುವ ವಿದ್ಯಾರ್ಥಿಗಳು ಅಂತರ್ಕಾಲೇಜು ಮಟ್ಟದಲ್ಲಿ ಮಾಡಿದ ಪ್ರಧರ್ಶನವನ್ನು ಕೊಂಡಾಡಿದರು.  ಪ್ರಸಕ್ತ ಸಾಲಿನ ವರಧಿ ವಾಚನ ಮತ್ತು ಲೆಕ್ಕ ಪಾತ್ರ ಮಂಡನೆ ಮಾಡಿದ ಬಳಿಕ ಹಳೆ ಸಮಿತಿಯನ್ನು ವಿಸರ್ಜಿಸಲಾಯ್ತು. ಮುಂದಿನ ಸಾಲಿನ ಪದಾಧಿಕಾರಿಗಳನ್ನು ಜನಾಬ್ ಅಶ್ರಫ್ ಪರ್ಲಡ್ಕರವರ ನೇತೃತ್ವದಲ್ಲಿ ರಚಿಸಲಾಯ್ತು.

2016-2017ನೇ ಸಾಲಿನ ಪದಾಧಿಕಾರಿಗಳು
ಗೌರವಾಧ್ಯಕ್ಷರು : ಹಾಜಿ ಅಬ್ದುಲ್ ಸಲಾಂ ಸುರತ್ಕಲ್
ಅಧ್ಯಕ್ಷರು: ಉಸ್ತಾದ್ ಹನೀಫ್ ಮುಸ್ಲಿಯಾರ್ ಬಿ ಸಿ ರೋಡ್
ಉಪಾಧ್ಯಕ್ಷರುಗಳು: ಜನಾಬ್ ಹನೀಫ್ ಹರಿಯಮೂಲೆ, ಜನಾಬ್ ಅಬ್ದುಲ್ ಖಾದರ್ ಕಾರ್ಕಳ, ಮೊಹಮ್ಮದ್ ಮಾಡಾವು
ಕಾರ್ಯಾಧ್ಯಕ್ಷರು: ಜನಾಬ್ ರಶೀದ್ ನಾಳ
ಪ್ರಧಾನ ಕಾರ್ಯದರ್ಶಿ: ಜನಾಬ್ ಶಾಫಿ ಪೆರುವಾಯಿ
ಜೊತೆ ಕಾರ್ಯದರ್ಶಿಗಳು: ಯಾಹ್ಯಾ ಕೊಡ್ಲಿಪೇಟೆ, ಅಬ್ಬಾಸ್ ಫರಂಗಿಪೇಟೆ
ಆರ್ಗನೈಸಿಂಗ್ ಸೆಕ್ರೆಟರಿ: ಅಬ್ದುಲ್ ಖಾದರ್ ಕೊಪ್ಪಳ
ಕೋಶಾಧಿಕಾರಿ: ಮಹಮ್ಮದ್ ಮಡಿಕೇರಿ
ಸಲಹಾ ಸಮಿತಿ: ಜನಾಬ್ ರವೂಫ್ ಹಾಜಿ ಕೈಕಂಬ, ಜನಾಬ್ ದಾವೂದ್ ಹಾಜಿ ಉಜಿರೆ, ಅಜೀಜ್ ಮುಸ್ಲಿಯಾರ್ ಮಲಪ್ಪುರಂ, ಜನಾಬ್ ಮೊಯಿದೀನ್ ಹಾಜಿ ತಿರೂರ್, ಜನಾಬ್ ಅಬ್ದುಲ್ ರಹ್ಮಾನ್ ಬಾಯಾರ್, ಜನಾಬ್ ಮಜೀದ್ ಹರಿಯಮೂಲೆ
ಸಂಚಾಲಕರು: ಜನಾಬ್ ಹುಸೈನ್ ರೆಂಜಲಾಡಿ, ಜನಾಬ್ ಮೊಹಮ್ಮದ್ ಅಲಿ ಮಾಡನ್ನೂರ್, ಜನಾಬ್ ಅಶ್ರಫ್ ಮುಕ್ರಂಪಾಡಿ, ಜನಾಬ್ ಬಷೀರ್ ಕಾವು.
ಕಾರ್ಯಕ್ರಮದಲ್ಲಿ ದುಬೈ ಸಮಿತಿಯಿಂದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಜನಾಬ್ ಅಶ್ರಫ್ ಪರ್ಲಡ್ಕ, ಜನಾಬ್ ಅಶ್ರಫ್ ಖಾನ್, ಜನಾಬ್ ಅಜೀಜ್ ಸೊಂಪಾಡಿ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ಜನಾಬ್ ಶಾಫಿ ಪೆರುವಾಯಿ ಸ್ವಾಗತಿಸಿ ಜನಾಬ್ ಅಬ್ದುಲ್ ಖಾದರ್ ಬೈತಡ್ಕ ವಂದಿಸಿದರು.

More Images