ಕುಲಾಲ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ದೇವದಾಸ್ ಕುಲಾಲ್ ಆಯ್ಕೆ

ಕುಲಾಲ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ದೇವದಾಸ್ ಕುಲಾಲ್ ಆಯ್ಕೆ

Nov 11, 2017 02:52:32 PM (IST)
ಕುಲಾಲ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ದೇವದಾಸ್ ಕುಲಾಲ್ ಆಯ್ಕೆ

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಂಘದ ಹಿರಿಯ ಸದಸ್ಯ ಸಂಘದ ಜೊತೆ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ ಕಳೆದ ಮೂವತ್ತೇಳು ವರ್ಷಗಳ ಕಾಲ ಸೇವೆ ಮಾಡುತ್ತಾ ಬಂದಿರುವ ದೇವದಾಸ್ ಎಲ್. ಕುಲಾಲ್ ಇವರು ಕುಲಾಲ ಸಂಘ ಮುಂಬಯಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಇವರು ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವರು. ಉಪಾಧ್ಯಕ್ಷರಾಗಿ ರಘು ಎ. ಮೂಲ್ಯ ಪಾದೆಬೆಟ್ಟು, ಗೌರವ ಫ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ ಬಿ. ಸಾಲ್ಯಾನ್, ಗೌರವ ಕೋಶಾಧಿಕಾರಿಯಾಗಿ ಜಯ ಎಸ್. ಅಂಚನ್, ಜತೆ ಕಾರ್ಯದರ್ಶಿಗಳಾಗಿ ರಘು ಬಿ. ಮೂಲ್ಯ ಮತ್ತು ಅಣ್ಣಿ ಬಿ. ಮೂಲ್ಯ, ಜತೆ ಕೋಶಾಧಿಕಾರಿಗಳಾಗಿ ಚಂದ್ರಹಾಸ ಸಾಲ್ಯಾನ್, ಸಾಮಾಜಿಕ-ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆನಂದ ಕುಲಾಲ್, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾದೆಬೆಟ್ಟು ಶೇಖರ ಮೂಲ್ಯ, ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾಗಿ ಉಮೇಶ್ ಎಂ. ಬಂಗೇರ, ವೈದ್ಯಕೀಯ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುರೇಶ್ ಕೆ. ಕುಲಾಲ್, ಸ್ಥಿರಾಸ್ತಿ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಲ್ಲಮಾರು ಗೋಪಾಲ ಬಂಗೇರ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೀನ ಜಿ. ಮೂಲ್ಯ, ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾಗಿ ಡಿ. ಐ. ಮೂಲ್ಯ, ಕಾರ್ಯದರ್ಶಿಯಾಗಿ ಸುರೇಶ್ ಕುಲಾಲ್, ಅಮೂಲ್ಯ ಸಂಪಾದಕರಾಗಿ ಶಂಕರ ವೈ. ಮೂಲ್ಯ ವಿರಾರ್, ಉಪಸಂಪಾದಕರಾಗಿ ಉದಯ ಮೂಲ್ಯ, ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿ ಆನಂದ ಬಿ. ಮೂಲ್ಯ, ಜಯರಾಜ್ ಪಿ. ಸಾಲ್ಯಾನ್, ಆಶೀಶ್ ವಿ. ಕರ್ಕೇರ, ಗಣೇಶ್ ಬಿ. ಸಾಲ್ಯಾನ್, ಸುನಿಲ್ ಕೆ. ಕುಲಾಲ್, ಸಂಜೀವ ಬಂಗೇರ, ಸುಂದರಿ ಎನ್. ಮೂಲ್ಯ, ಪುಷ್ಪಲತಾ ಸಾಲ್ಯಾನ್, ಮಮತಾ ಗುಜರನ್ ಆಯ್ಕೆಯಾಗಿರುವರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಗುಜರನ್ ಪುನರಾಯ್ಕೆಯಾಗಿರುವರು.

ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಜರಗಿದ್ದು ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

More Images