ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವ

ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವ

HSA   ¦    Mar 06, 2019 01:12:10 PM (IST)
ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವ

ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘಟದ ವಜ್ರ ಮಹೋತ್ಸವ ಸಮಾರೋಪ ಸಮಾರಂಭವು ಮಾ.3ರಂದು ಮಲಾಡ್ ಪಶ್ಚಿಮದ ಬಜಾಜ್ ಹಾಲ್ ನಲ್ಲಿ ನೆರವೇರಿತು.

ಸಮಾರಂಭದ ವೇಳೆ ನಡೆದ ಮುಂಬಯಿ ಕನ್ನಡಿಗರ ಸಂಘಟನೆಗಳು ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ. ಸುರೇಂದ್ರ ಕುಮಾರ್ ಅವರು, ಈ ಸಂಘವನ್ನು 60 ವರ್ಷಗಳ ಹಿಂದೆ ಹಿರಿಯರು ಸ್ಥಾಪಿಸಿದ್ದಾರೆ. ನಿರಂತರ ಕನ್ನಡ ಸೇವೆ ಮಾಡುತ್ತಾ ಸಂಘವನ್ನು ಈ ಮಟ್ಟಕ್ಕೆ ತಂದಿದ್ದಾರೆ. ಆದರೆ ಇಂದಿನ ಹೆಚ್ಚಿನ ಸಂಘಟನೆಗಳು ವ್ಯಾಪಾರೀಕರಣ ಮಾಡುತ್ತಿವೆ. ವ್ಯಾಪಾರೀಕರಣವಿಲ್ಲದೆ ಸಂಘಟನೆಗಳು ಬೆಳೆಯಬೇಕು ಎಂದರು.

ಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಸದಾನಂದ ಎನ್. ಆಚಾರ್ಯ ಕಲ್ಯಾಣ್ ಪುರ ಅವರು ಮಾತನಾಡಿ, 60 ವರ್ಷ ಪೂರೈಸಿದ ಗೋರೆಗಾಂವ್ ಕರ್ನಾಟಕ ಸಂಘದ ಈ ಕಾರ್ಯ ಅಭಿನಂದನೀಯ. ಇಲ್ಲಿ ಇಂದು ಹಿರಿಯರು ಮಾತ್ರ ಸೇರಿದ್ದಾರೆ. ಯುವಜನರನ್ನು ಸೇರಿಸುವ ಕಾರ್ಯಕ್ರಮವಾಗಬೇಕಾಗಿದೆ ಎಂದರು.

ಜಾತಿಸಂಘಟನೆಗಳ ಬಗ್ಗೆ ಉಪನ್ಯಾಸಕರಾಗಿ ಡಾ. ಪೂರ್ಣಿಮಾ ಶೆಟ್ಟಿ ಅವರು ಮಾತನಾಡಿದರು.