26/11 ರ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಲು ವಿಕಲಾಂಗ ಯೋಧರ ಸೈಕಲ್ ಜಾಥ

26/11 ರ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಲು ವಿಕಲಾಂಗ ಯೋಧರ ಸೈಕಲ್ ಜಾಥ

Nov 26, 2017 01:57:31 PM (IST)
26/11 ರ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಲು ವಿಕಲಾಂಗ ಯೋಧರ ಸೈಕಲ್ ಜಾಥ

ಮುಂಬಯಿ: 26/11/2008 ರಂದು ಮುಂಬಯಿಗೆ ಉಗ್ರರು ದಾಳಿ ನಡೆಸಿದ್ದು ಹುತಾತ್ಮರಾದ ಯೋಧರು ಮತ್ತುಸಾರ್ವಜನಿಕರಿಗೆ ಶ್ರದ್ದಾಂಜಲಿ ಅರ್ಪಿಸಲು ದೆಹಲಿಯಿಂದ ಮುಂಬಯಿಗೆ ವಿಕಲಾಂಗ ಯೋಧರು ಸೈಕಲ್ ಜಾಥಾ ನಡೆಸಿದ್ದು ಮಿರಾರೋಡ್ ಶೆಲ್ಟರ್ ಗ್ರೂಪ್ ಆಫ್ ಹೋಟೇಲಿನಿಂದ ಮುಂಬಯಿಗೆ ಸ್ವಾಗತ ಕೋರಲಾಯಿತು.

ದೆಹಲಿಯಿಯ ಇಂಡಿಯಾ ಗೇಟ್ ನಿಂದ ನ. 14ರಂದು ಸೈಕಲ್ ನಲ್ಲಿ ಹೊರಟ ಇವರು ನ. 25ರಂದು ಮುಂಬಯಿಗೆ ತಲಪಿದ್ದು ಹೋಟೆಲಿನ ಪಾಲುದಾರರಾದ ರಮಾನಾಥ ಶೆಟ್ಟಿ, ಸತೀಶ್ ಶೆಟ್ಟಿ, ನವೀನ್ ಸುಧಾಕರ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಮೊದಲಾದವರು ಇವರನ್ನು ಸ್ವಾಗತಿಸಿದರು.  

ಆ ನಂತರ ಮೀರಾರೋಡ್ ಶೆಲ್ಟರ್ ಹೋಟೆಲಿನ ಮುಂಬಾಗದಲ್ಲಿ ಇರಿಸಲಾದ ಹುತಾತ್ಮರ ಭಾವಚಿತ್ರದ ಮುಂದೆ ಕ್ಯಾಂಡಲ್ ಹಚ್ಚಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಉಪಮೇಯರ್  ಚಂದ್ರಕಾಂತ್ ಮೈತಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ನ. 26 ರಂದು ಬೆಳಿಗ್ಗೆ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದಲ್ಲಿ ಮುಖ್ಯಮಂತ್ರಿ ದೇವೇಂದ್ರ ಘಡ್ನಾವೀಸ್ ಅವರಿಂದ ಈ ಯೋಧರನ್ನು ಗೌರವಿಸಲಾಯಿತು.

More Images