ಬಹ್ರೈನ್ ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ

ಬಹ್ರೈನ್ ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ

HSA   ¦    Nov 13, 2018 03:26:31 PM (IST)
ಬಹ್ರೈನ್ ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ

ಮನಾಮ: ಬಹ್ರೈನ್ ನಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಭವನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಶಂಕುಸ್ಥಾಪನೆ ಮಾಡಿದರು.

ನ.11ರಂದು ದೇವೇಗೌಡರು ಪತ್ನಿ ಚೆನ್ನಮ್ಮ ಅವರೊಂದಿಗೆ ಬಹ್ರೈನ್ ಗೆ ತೆರಳಿದ್ದರು. ಬಹ್ರೈನ್ ನಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನದ ಕಟ್ಟಡದ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು.

ಬಹ್ರೈನ್ ನ ರಾಜಧಾನಿ ಮನಾಮದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣವಾಗುತ್ತಿದೆ. ಮಂಗಳವಾರ ದೇವೇಗೌಡರು ಶಂಕುಸ್ಥಾಪನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ಅಲೋಕ್ ಸಿನ್ಹಾ, ಅನಿವಾಸಿ ಕನ್ನಡಿಗರ ಸಂಘದ ಉಪಾಧ್ಯಕ್ಷೆ ಆರತಿ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

More Images