ಸಿಹಿ ತಿಂದು ತೂಕ ಇಳಿಸಿಕೊಳ್ಳಿ!

ಸಿಹಿ ತಿಂದು ತೂಕ ಇಳಿಸಿಕೊಳ್ಳಿ!

HSA   ¦    Nov 20, 2019 03:10:21 PM (IST)
ಸಿಹಿ ತಿಂದು ತೂಕ ಇಳಿಸಿಕೊಳ್ಳಿ!

ತೂಕ ಹೆಚ್ಚಳ ಮಾಡಿಕೊಂಡ ಬಳಿಕ ದೇಹದಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ಆಗ ತೂಕ ಇಳಿಸಲೇಬೇಕಾಗುತ್ತದೆ. ತೂಕ ಹೆಚ್ಚಳ ಮಾಡುವಾಗ ಆಲೋಚನೆ ಮಾಡದೆ ಇದ್ದ ಜನರು ತೂಕ ಇಳಿಸುವ ವೇಳೆ ತುಂಬಾ ಆಲೋಚಿಸುವರು. ಯಾಕೆಂದರೆ ಇಲ್ಲಿ ಆಹಾರ ಪಥ್ಯವು ತುಂಬಾ ಮುಖ್ಯವಾಗಿರುವುದು. ಅದರಲ್ಲೂ ಸಿಹಿ ತುಂಬಾ ದೂರವಿಡಬೇಕಾಗುತ್ತದೆ. ಆದರೆ ಸಿಹಿ ತಿಂದು ತೂಕ ಸಮತೋಲನದಲ್ಲಿ ಇಡಲು ಹೀಗೆ ಮಾಡಬಹುದು.

ಮೊಟ್ಟೆ ಹಾಗೂ ಸಿಹಿಯ ಆಹಾರ ಕ್ರಮ

ಉಪಹಾರ ಕ್ರಮದಲ್ಲಿ ಏನಾದರೂ ಸಿಹಿ ಸೇರಿಸಿದರೆ ಆಗ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಸಿಗುವುದು. ಇದರಿಂದ ಆಹಾರ ಪಥ್ಯ ಮಾಡುವ ವೇಳೆ ದೇಹಕ್ಕೆ ಸರಿಯಾದ ಪೋಷಕಾಂಶ ಕೂಡ ಸಿಗುವುದು. ಇದರಿಂದ ನೀವು ಹಸಿವು ಕಡಿಮೆ ಮಾಡಿ ತೂಕ ಕಾಪಾಡಬಹುದು.

ಸಂಶೋಧನೆಗಳಿಂದ ದೃಢ

ತೂಕ ಇಳಿಸಲು ಬಯಸುವಂತಹವರಿಗಾಗಿ ಬಂದಿರುವ ಮೊಟ್ಟೆ ಮತ್ತು ಸಿಹಿಯ ಆಹಾರ ಕ್ರಮದಿಂದಾಗಿ ಬಯಕೆ ಕಡಿಮೆ ಮಾಡಿಕೊಂಡು ತಿನ್ನುವುದನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಹೇಳಿವೆ.

ಪೋಷಕಾಂಶಗಳು ಇರಲಿ

ನೀವು ಸೇವಿಸುವಂತಹ ಸಿಹಿಯಲ್ಲಿ ಕೇವಲ ಸಕ್ಕರೆ ಮಾತ್ರವಿದ್ದರೆ ಅದು ಬಯಕೆ ಕಡಿಮೆ ಮಾಡುವುದು. ಆದರೆ ಹೆಚ್ಚಿನ ಸಿಹಿ ತಿಂಡಿಯಲ್ಲಿ ಸಕ್ಕರೆಯು ಅತಿಯಾಗಿದ್ದು, ಪೋಷಕಾಂಶಗಳು ಕಡಿಮೆ ಇರುವುದು. ಇಂತಹ ಸಿಹಿಯನ್ನು ನೀವು ಕಡೆಗಣಿಸಬೇಕು.