ಚಳಿಗಾಲದ ಚರ್ಮ ಸಮಸ್ಯೆ

ಚಳಿಗಾಲದ ಚರ್ಮ ಸಮಸ್ಯೆ

YK   ¦    Dec 04, 2018 04:42:46 PM (IST)
ಚಳಿಗಾಲದ ಚರ್ಮ ಸಮಸ್ಯೆ

 ಚಳಿಗಾಲ ಆರಂಭವಾದರೆ ಕೆಲವರಿಗೆ ಚರ್ಮದ ಕಾಳಜಿಯನ್ನು ಹೇಗೇ ಮಾಡಬೇಕೆಂಬ ಚಿಂತೆ. ಚಳಿಗಾಲದಲ್ಲಿ ಚರ್ಮ ಒಣಗುವುದರಿಂದ ತುಂಬಾ ಹಿಂಸೆಗಳು ಆಗುತ್ತದೆ. ಇನ್ನು ಕೆಲವರ ಚರ್ಮ ಸೂಕ್ಷ್ಮವಾಗಿದ್ದಲ್ಲಿ ಕೈ, ಕಾಲು ಹಾಗೂ ಮೊಣಕ್ಕೆ ಭಾಗಗಳಲ್ಲಿ ಸ್ನಾನದ ಬಳಿಕ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಸಹ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದೆಲ್ಲ ಶುರುವಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯವಾಗಿದೆ.

ಹೀಗೇ ಮಾಡಿ:

1.ಸ್ನಾನ ಮಾಡುವ ನೀರಿಗೆ ಎರಡು ಹನಿ ತೆಂಗಿನ ಎಣ್ಣೆ ಬೆರೆಸಿ ಸ್ನಾನ ಮಾಡಿದರೆ, ಚರ್ಮ ಒಣಗುವುದು ಕ್ರಮೇಣ ದೂರವಾಗುತ್ತದೆ.  

2.ಸ್ವಲ್ಪ ಮೆಂತ್ಯೆಕಾಳನ್ನು ತೆಂಗಿನೆಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಇದು ಉಗುರು ಬೆಚ್ಚಗೆ ಇರುವಾಗ ಚರ್ಮದ ಮೇಲೆ ಹಚ್ಚ

3.ಇನ್ನು ತುರಿಕೆಗೆ ಎರಡು ಚಮಚ ತುಳಸಿ ಎಲೆಯ ಪುಡಿಗೆ ಒಂದು ಚಮಚ ಹಾಲಿನ ಕೆನೆ ಮತ್ತು ಒಂದು ಚಮಚ ಕಡ್ಲೆ ಹಿಟ್ಟು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.

4.ಅಲೊವೆರಾ ಮತ್ತು ಪಪ್ಪಾಯ ತಿರುಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಅದನ್ನು ದೇಹ ಮತ್ತು ಕೂದಲಿಗೆ ಲೇಪಿಸಿ. ಇದು ಒಣಗಿದ ಬಳಿಕ ತೊಳೆಯಿರಿ. ಇದರಿಂದ ಚರ್ಮ ಮತ್ತು ಕೂದಲಿಗೆ ತೇವಾಂಶ ಸಿಕ್ಕಿ ತುರಿಕೆ ದೂರವಾಗುತ್ತದೆ.