ಅಲೋವೇರದಿಂದ ದೇಹಕ್ಕೆ ಏನೆಲ್ಲಾ ಉಪಯೋಗ ಇದೆ ಗೊತ್ತಾ?

ಅಲೋವೇರದಿಂದ ದೇಹಕ್ಕೆ ಏನೆಲ್ಲಾ ಉಪಯೋಗ ಇದೆ ಗೊತ್ತಾ?

YK   ¦    Feb 08, 2018 05:42:10 PM (IST)
ಅಲೋವೇರದಿಂದ ದೇಹಕ್ಕೆ ಏನೆಲ್ಲಾ ಉಪಯೋಗ ಇದೆ ಗೊತ್ತಾ?

ಮನುಷ್ಯನ ಆರೋಗ್ಯದ ವಿಚಾರದಲ್ಲಿ ಬಹಳ ಬೇಡಿಕೆಯಲ್ಲಿರು ಅಲೋವೇರ ಅಥವಾ ಲೋಳೆಸರ ಇದು ಅನೇಕ ರೋಗಗಳನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಲೋಳೆಸರದ ಎಲೆಯಿಂದ ಮನುಷ್ಯನಿಗೆ ಅನೇಕ ಉಪಯೋಗಗಳಿವೆ.

ಲೋಳೆಸರದ ಎಲೆಯಲ್ಲಿ ಸಿಗುವ ಅಂಟನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಗುತ್ತದೆ. ಅದಲ್ಲದೆ ಈ ಅಂಟು ತ್ವಜೆಗೆ ಹಚ್ಚುವುದರಿಂದ ಕಾಂತಿಯುತವಾಗಿ ಕಾಣಿಸುತ್ತದೆ. ತ್ವಜೆಯನ್ನು ಕಾಂತಿಯುತವನ್ನಾಗಿಸುವುದರ ಜತೆಗೆ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ.

ಮುಖದ ಮೇಲೆ ಕಾಣುವ ನೆರಿಗೆ, ಕಪ್ಪು ಕಲೆ, ಮೊಡವೆ ತೊಲಗಿಸಲು ಒಂದು ತಿಂಗಳ ಕಾಲ ಲೋಳೆರಸವನ್ನು ಹಚ್ಚಿ ಗಂಟೆಗಳ ಕಾಲ ಬಿಟ್ಟರೆ ಸುಕ್ಕುಗುಟ್ಟುವಿಕೆ ಮಾಯವಾಗಿ ಮುಖದಲ್ಲಿ ಹೊಸ ಕಾಂತಿ ಬರುತ್ತದೆ. ಅದಲ್ಲದೆ ಒಣ ಚರ್ಮ ಹೊಂದಿದವರು ಲೋಳೆಸರದ ಜೆಲ್ ಬಳಸುವುದು ತ್ವಜೆಗೆ ಇನ್ನಷ್ಟು ಉತ್ತಮ.

ಅದಲ್ಲದೆ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಲೋಳೆರಸವನ್ನು ಹಚ್ಚಿ ಮುಖ ತೊಳೆದು ಆಮೇಲೆ ಮೇಕಪ್ ಮಾಡಿಕೊಂಡರೆ ಮುಖದಲ್ಲಿ ಮತ್ತಷ್ಟು ಕಾಂತಿ ಬರುತ್ತದೆ.

ಇನ್ನೂ ಪುರುಷರು ಶೇವ್ ಮಾಡಿಕೊಳ್ಳುವ ವೇಳೆ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ.

ಚಳಿಗಾಲದ ವೇಳೆ ಚರ್ಮ ಒಡೆಯುವುದು ಸಾಮಾನ್ಯ. ಈ ವೇಳೆ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.

ಆಸಿಡಿಟಿಗೆ ಮದ್ದು: ಅದಲ್ಲದೆ ಆಸಿಡಿಟಿ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುತ್ತಾ ಬಂದರೆ ಆಸಿಡಿಟಿ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಲೋಳೆಸರದ ಜೆಲ್ ನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆಯ ಹೊಟ್ಟು ಕೂಡ ದೂರವಾಗುತ್ತದೆ.

ಇನ್ನೂ ಲೋಳೆಸರದ ತಿರುಳನ್ನು ಸೇವಿನೆ ಮಾಡುವುದರಿಂದ ಮೂಲವ್ಯಾಧಿ, ಜಠರದ ಹುಣ್ಣು ಕೂಡ ದೂರವಾಗುತ್ತದೆ.

ಲೋಳೆರಸವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.