ಬೇಸಿಗೆಗೆ ತಕ್ಕದಾಗಿ ನೀರು ಸೇವಿಸಿ

ಬೇಸಿಗೆಗೆ ತಕ್ಕದಾಗಿ ನೀರು ಸೇವಿಸಿ

YK   ¦    Mar 06, 2018 04:54:18 PM (IST)
ಬೇಸಿಗೆಗೆ ತಕ್ಕದಾಗಿ ನೀರು ಸೇವಿಸಿ

ಬೇಸಿಗೆಯ ದಾಹಕ್ಕೆ ಹೆಚ್ಚಾಗಿ ನೀರು ಕುಡಿಯುವುದು ಸಾಮಾನ್ಯ. ಆದರೆ ಒಮ್ಮೊಮ್ಮೇ ಈ ದಾಹ ಅತಿಯಾದರೆ ಅದನ್ನು ಹೇಗೆ ನೀಗಿಸಿಕೊಳ್ಳಬೇಕೆಂಬುದು ತಿಳಿಯುವುದಿಲ್ಲ. ಎಂತಹ ನೀರನ್ನು ಕುಡಿಯಬೇಕು? ಐಸ್ ಕ್ರೀಂನ್ನು ಸೇವಿಸಬಹುದು, ಫ್ರಿಜ್ ನಲ್ಲಿಟ್ಟ ನೀರನ್ನು ಕುಡಿದ ಬಾಯಾರಿಕೆಯನ್ನು ತೀರಿಸಬಹುದು ಎಂಬುದನ್ನು ಅರಿಯದೇ ಆ ಸಂದರ್ಭದಲ್ಲಿ ಬೇಕಾದನ್ನು ಕುಡಿದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ.

ಅತಿ ತಂಪಾದ ಪಾನೀಯಗಳನ್ನು ಕುಡಿದಾಗ ವೈರಸ್ ಗಳು  ದಾಳಿ ಇಟ್ಟು ಗಂಟಲು ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ನೀರು ಕುಡಿಯುವ ಮುಂಚೆ ಈ ರೀತಿ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಹಿಂದಿನ ಕಾಲದಲ್ಲಿ ಬೇಸಿಗೆ ಸಂದರ್ಭದಲ್ಲಿ ಶುಂಠಿ ಹಾಕಿ ಕಾಯಿಸಿದ ಬಿಸಿನೀರನ್ನು ಕುಡಿಯುತ್ತಿದ್ದರು. ಇದರಿಂದ ದೇಹವು ಆರೋಗ್ಯದಿಂದ ಕೂಡಿರುತ್ತದೆ. ಈ ಪದ್ಧತಿಯನ್ನು ಕೇರಳ ರಾಜ್ಯದಲ್ಲಿ ಇಂದಿಗೂ ಪಾಲಿಸುತ್ತಿದ್ದಾರೆ. ಈ ನೀರನ್ನು ಚಿಕ್ಕವರಿಂದ ವಯಸ್ಸಿನವರು ಇದನ್ನು ಸೇವಿಸಬಹುದು. ಇದರಿಂದ ಬೇಸಿಗೆಯಲ್ಲಿ ಬರಬಹುದಾದ ರೋಗಗಳನ್ನು ತಡೆಗಟ್ಟಬಹುದು.
ಇನ್ನೂ ಸಕ್ಕರೆ ರೋಗಿಗಳಿಗೆ ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಇದಕ್ಕೆ ಸಾರಾಂಬು ಎಂದರೆ ಕೆಂಪು ಹೊನ್ನೆಯ ಚಕ್ಕೆಯನ್ನು ನೀರಿನಲ್ಲಿ ನೆನೆಸಿ ಅದರಿಂದ ಬಂದ ನೀರನ್ನು ಸೇವಿಸವುದರಿಂದ . ಮೂತ್ರದ ಮೂಲಕ ಅಧಿಕ ಸಕ್ಕರೆ ಅಂಶವೂ ಶರೀರದಿಂದ ಹೊರ ಹೋಗಲು ಅದು ಸಹಾಯ ಮಾಡುತ್ತದೆ.
ಜೇನುತುಪ್ಪವನ್ನು ಬೆರೆಸಿದ ನೀರಿನೊಂದಿಗೆ ಸೇವಿಸುವುದರಿಂದ ದಪ್ಪಗೆ ಇರುವವರು ತಮ್ಮ ತೂಕವನ್ನು ಕಡಿಮೆಮಾಡಲು ಸಹಕಾರಿಯಾಗುತ್ತದೆ.

ರಾತ್ರಿ ಮಲಗುವ ಮುಂಚೆ ಅರ್ಧ ಚಮಚದಷ್ಟು ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ರಾತ್ರಿ ನೆನೆ ಹಾಕಿ ಮರುದಿನ ಆ ನೀರನ್ನು ಕುಡಿದರೆ ಅಸಿಡಿಟಿ ಮುಂತಾದ ಜೀರ್ಣಾಂಗದ ತೊಂದರೆಗಳು ದೂರವಾಗುತ್ತದೆ.

ನೀರನ್ನು ಕುಡಿಯುವ ಮೊದಲು ಆರೋಗ್ಯ ಕಡೆಗೂ ಒತ್ತನ್ನು ನೀಡಿದರೆ ಇದರಿಂದ ದೇಹವೂ ಲವಲವಿಜಕೆಯಿಂದ ಕೂಡಿರುತ್ತದೆ. ಈ ರೀತಿಯ ಜೌಷಧಿಗಳ ಜತೆಗ ನೀರು ಸೇವನೆ ಜತೆಗೆ ಆಯಾ ಕಾಲಕ್ಕೆ ತಕ್ಕಂತೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ಪೂರ್ವಜರ ಆರೋಗ್ಯಕಾರಿ ಜೀವನಪದ್ಧತಿಗಳನ್ನು ನಾವು ಅಳವಡಿಸಿಕೊಳ್ಳುವುದರಿಂದ ಲಾಭ.