ತೂಕ ಇಳಿಸಬೇಕೇ? ಅನ್ನ ತ್ಯಜಿಸಿ ಚಪಾತಿ ತಿನ್ನಿ

ತೂಕ ಇಳಿಸಬೇಕೇ? ಅನ್ನ ತ್ಯಜಿಸಿ ಚಪಾತಿ ತಿನ್ನಿ

HSA   ¦    Jan 17, 2018 02:42:13 PM (IST)
ತೂಕ ಇಳಿಸಬೇಕೇ? ಅನ್ನ ತ್ಯಜಿಸಿ ಚಪಾತಿ ತಿನ್ನಿ

ಅನ್ನ ಅಥವಾ ಚಪಾತಿ ನಿಮ್ಮ ನಿತ್ಯದ ಊಟದ ತಟ್ಟೆಯಲ್ಲಿ ಇದ್ದೇ ಇರುತ್ತದೆ. ಇದರ ಹೊರತಾಗಿ ನಿಮ್ಮ ಊಟ ಸಂಪೂರ್ಣವಾಗದು. ಇದನ್ನು ಬಿಟ್ಟು ಆಹಾರ ಕ್ರಮ ಪಾಲಿಸುವುದು ತುಂಬಾ ಕಠಿಣ ಸವಾಲು. ಆದರೆ ದೇಹದಲ್ಲಿ ಅತಿಯಾದ ತೂಕ ಏರಿಸಿಕೊಂಡಿರುವವರು ಮಾತ್ರ ಕಾರ್ಬ್ಸ್ ನ್ನು ತ್ಯಜಿಸಬೇಕು. ಇದಕ್ಕಾಗಿ ಅನ್ನ ಮತ್ತು ಚಪಾತಿ ಬಿಡಲೇಬೇಕು. ಎರಡಕ್ಕೂ ತಮ್ಮದೇ ಆದ ಸಾಧಕ ಬಾಧಕಗಳು ಇವೆ. ಆದರೆ ತೂಕ ಕಳೆದುಕೊಳ್ಳುವಾಗ ಯಾವುದು ಉತ್ತಮ ಎಂದು ತಿಳಿದುಕೊಳ್ಳುವ.

ಅನ್ನ ಮತ್ತು ಚಪಾತಿ ಎರಡರಲ್ಲೂ ಸಮ ಪ್ರಮಾಣದ ಕಾರ್ಬ್ಸ್ ಮತ್ತು ಕ್ಯಾಲರಿಗಳಿವೆ. ಆದರೆ ಇದರಲ್ಲಿ ಭಿನ್ನ ರೀತಿಯ ಪೌಷ್ಠಿಕಾಂಶಗಳಿವೆ. ಅನ್ನಕ್ಕೆ ಹೋಲಿಸಿದರೆ ಚಪಾತಿಯಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ನಾರಿನಾಂಶವಿರುವುದು. ಇದರಿಂದ ದೀರ್ಘಕಾಲ ಹೊಟ್ಟೆ ತುಂಬಿದಂತೆ ಇರುವುದು. ಅನ್ನದಲ್ಲಿ ಪಿಷ್ಟವಿರುವ ಕಾರಣ ಬೇಗನೆ ಕರಗುವುದು.

ಪೌಷ್ಠಿಕಾಂಶಗಳಿಗೆ ಹೋಲಿಸಿದರೆ ಚಪಾತಿ ಮೇಲುಗೈ ಪಡೆಯುವುದು. ಆದರೆ ಇಡೀ ಗೋಧಿ ಚಪಾತಿಯಲ್ಲಿ ಸೋಡಿಯಂ ಹೆಚ್ಚಿರುವುದು. ಪ್ರತೀ 120 ಗ್ರಾಂ ಗೋಧಿಯಲ್ಲಿ 190 ಮಿಗ್ರಾಂ ಸೋಡಿಯಂ ಇರುವುದು. ಆದರೆ ಅನ್ನದಲ್ಲಿ ಯಾವುದೇ ಸೋಡಿಯಂ ಇರುವುದಿಲ್ಲ. ಸೋಡಿಯಂ ಕಡಿಮೆ ಮಾಡಬೇಕಿದ್ದರೆ ಚಪಾತಿ ಬೇಡವೇ ಬೇಡ.

ಆದರೆ ತೂಕ ಕಳೆದುಕೊಳ್ಳುವವರಿಗೆ ಚಪಾತಿ ಒಳ್ಳೆಯದು. ಅನ್ನಕ್ಕಿಂತ ಚಪಾತಿ ಒಳ್ಳೆಯದು ಯಾಕೆ ಎಂದು ಮುಂದೆ ತಿಳಿಯಿರಿ.
*ಚಪಾತಿಗೆ ಹೋಲಿಸಿದರೆ ಅನ್ನದಲ್ಲಿ ಆಹಾರದ ನಾರಿನಾಂಶ ಕಡಿಮೆ ಇದೆ. ಚಪಾತಿಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ನಾರಿನಾಂಶವಿದೆ.
*ಚಪಾತಿಯಲ್ಲಿ ನಾರಿನಾಂಶ ಸಮೃದ್ಧವಾಗಿರುವ ಕಾರಣ ಹೊಟ್ಟೆ ತುಂಬಿದಂತೆ ಇರುವುದು. ಇದರಿಂದ ತೂಕ ಕಡಿಮೆಯಾಗುವುದು.
*ಅನ್ನದಲ್ಲಿ ಕ್ಯಾಲರಿ ಹೆಚ್ಚಿದೆ ಮತ್ತು ಇದು ಚಪಾತಿಯಷ್ಟು ಸಂತೃಪ್ತಿ ನೀಡಲ್ಲ.
*ನೀವು ಜಗಿಯುವ ಪ್ರತಿಯೊಂದು ತುಣುಕು ಚಪಾತಿ ಸೇವಿಸುವಾಗ ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿನಾಂಶ ಮತ್ತು ಪ್ರೋಸ್ಪೊರಸ್ ಸಿಗುವುದು. ಅನ್ನದಲ್ಲಿ ಕ್ಯಾಲ್ಸಿಯಂ ಇಲ್ಲ ಮತ್ತು ಪೊಟಾಶಿಯಂ ಮತ್ತು ಪ್ರೋಸ್ಪೊರಸ್ ಕಡಿಮೆ ಇದೆ.
*ಚಪಾತಿ ಕರಗಲು ದೀರ್ಘ ಸಮಯ ಬೇಕಾಗುವ ಕಾರಣ ರಕ್ತದ ಸಕ್ಕರೆ ಮಟ್ಟ ಸಾಮಾನ್ಯವಾಗಿರುವುದು.

ಸೂಚನೆ: ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ನೀವು ತೂಕ ಕಳೆದುಕೊಳ್ಳಲು ಬಯಸಿದ್ದರೆ ದಿನಕ್ಕೆ ನಾಲ್ಕು ಚಪಾತಿ ಮಾತ್ರ ಸೇವಿಸಬೇಕು. ರಾತ್ರಿ ಊಟಕ್ಕೆ ಚಪಾತಿ ಸೇವಿಸುವುದಾದರೆ ರಾತ್ರಿ 7.30ಕ್ಕೆ ಮೊದಲು ಸೇವಿಸಿ. ಅನ್ನವೇ ಬೇಕಿದ್ದರೆ ಕುಚ್ಚಲಕ್ಕಿ ತೂಕ ಇಳಿಕೆಗೆ ಒಳ್ಳೆಯದು.

More Images