ಗರ್ಭಿಣಿಯರಿಗೆ ಸೌಂದರ್ಯವರ್ಧಕಗಳಿಂದ ತೊಂದರೆಯಿದೆಯೇ?

ಗರ್ಭಿಣಿಯರಿಗೆ ಸೌಂದರ್ಯವರ್ಧಕಗಳಿಂದ ತೊಂದರೆಯಿದೆಯೇ?

YK   ¦    Jan 18, 2018 04:58:05 PM (IST)
ಗರ್ಭಿಣಿಯರಿಗೆ ಸೌಂದರ್ಯವರ್ಧಕಗಳಿಂದ ತೊಂದರೆಯಿದೆಯೇ?

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಎಲ್ಲ ರೀತಿಯಲ್ಲೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಈ ಕಾಳಜಿ ಆಹಾರದ ಜತೆಗೆ ಸೌಂದರ್ಯವರ್ಧಗಳಿಗೂ ಅನ್ವಯವಾಗುತ್ತದೆ. ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಸಮಯದಲ್ಲಿ ಸೌಂದರ್ಯವರ್ಧಕಗಳನ್ನು ಬಳಸುವ ಮುನ್ನಾ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕೆಲವೊಂದು ಬಾರಿ ಸೌದರ್ಯ ವರ್ಧಕಗಳು ಮಗುವಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮವನ್ನು ಬೀರಬಹುದು. ಹಾಗಾಗಿ ಕೆಲವೊಂದು ಲಿಪ್ ಸ್ಟಿಕ್, ಲಿಪ್ ಬಾಲ್,ಮತ್ತು ಮೊಡವೆ ನಿರೋಧಕ ಕ್ರೀಂ ಗಳಂತಹಾ ಮೇಕಪ್ ಉತ್ಪನ್ನಗಳಿಂದ ದೂರವಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಗರ್ಭಿಣಿಯರು ಯಾವುದೇ ಸೌಂದರ್ಯವರ್ಧಕಗಳನ್ನು ಬಲಸುವ ಮೊದಲು ಅದರ ಕುರಿತು ಯೋಚನೆ ಮಾಡಬೇಕು. ಸೌಂದರ್ಯವರ್ಧಗಳ ಗುಣಮಟ್ಟವನ್ನು ಅರಿತು ಬಳಸುವುದು ಒಳ್ಳೆಯದು. ಇನ್ನೂ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ರಾಸಾಯನಿಕಗಳಿಂದ ದೂರವಿರವುದು ಅತೀ ಉತ್ತಮ.

ಇನ್ನೂ ಹೆಚ್ಚಾಗಿ ಬಳಸುವ ಬಹುತೇಕ ಸೌಂದರ್ಯವರ್ಧಕಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ರಾಸಾಯನಿಕವೆಂದರೆ ಥಾಲೇಟ್ಗಳು. ಇದು ಹಾರ್ಮೋನ್ ಮಟ್ಟವನ್ನು ಕುಗ್ಗಿಸಿ ಎದೆ ಹಾಲಿನ ಉತ್ಪಾದನೆಗೆ ಧಕ್ಕೆ ತರುವಂತೆ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಸೌಂದರ್ಯವರ್ಧಕಗಳ ಬಗ್ಗೆ ಅರಿತಿರುವುದು ಮಗುವಿನ ಹಾಗೂ ತಾಯಿ ಆರೋಗ್ಯಕ್ಕೆ ತುಂಬಾ ಮುಖ್ಯವಾಗುತ್ತದೆ.