ಉತ್ತಮ ಆರೋಗ್ಯಕ್ಕೆ ಸೇವಿಸಿ ದಾಳಿಂಬೆ ಬೀಜ

ಉತ್ತಮ ಆರೋಗ್ಯಕ್ಕೆ ಸೇವಿಸಿ ದಾಳಿಂಬೆ ಬೀಜ

YK   ¦    Feb 06, 2018 04:37:01 PM (IST)
ಉತ್ತಮ ಆರೋಗ್ಯಕ್ಕೆ ಸೇವಿಸಿ ದಾಳಿಂಬೆ ಬೀಜ

ಪ್ರತಿಯೊಂದು ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಜೌಷಧಿಯಾಗಿ ಪರಿಣಮಿಸುತ್ತದೆ. ಹಾಗೆಯೇ ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಈ ಹಣ್ಣನ್ನು ಸೇವಿಸುವುದರಿಂದ ಆರೋಗ್ಯವನ್ನು ವೃದ್ಧಿಸಲು ಹಾಗೂ ಕೆಲವರಿಗೆ ಆವರಿಸಿದ ರೋಗವನ್ನು ಹೋಗಲಾಡಿಸುವಲ್ಲಿ ಇದು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಈ ಹಣ್ಣುಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಉರಿಯೂತ ಮೊದಲಾದವುಗಳನ್ನು ಕಡಿಮೆಯಾಗುತ್ತದೆ. ಈ ಹಣ್ಣುಗಳನ್ನು ಜ್ಯೂಸ್ ಮಾಡಿ ಅಥವಾ ಹಸಿಯಾಗಿಯು ಸೇವಿಸಬಹುದು.

ಸಂಧಿವಾತಕ್ಕೆ ಉತ್ತಮ: ದಾಳಿಂಬೆಯ ಬೀಜಗಳಲ್ಲಿರುವ ಫ್ಲೇವನಾಲ್ ಎಂಬ ಆಂಟಿ ಆಕ್ಸಿಡೆಂಟ್ ಗಳು ಸಂಧಿವಾತದ ನೋವನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ವೇಳೆ ಸಂಧಿವಾತದ ತೊಂದರೆ ಇದ್ದರೆ ದಾಳಿಂಬೆಯ ಬೀಜಗಳನ್ನು ದಿನನಿತ್ಯ ಸೇವಿಸುವುದು ಉತ್ತಮ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ: ದಾಳಿಂಬೆಯ ಬೀಜಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ. ಇವಗಳು ಹಾನಿಕಾರಕ ಆಕ್ಸಿಡೀಕೃತ ಮೇದಸ್ಸನ್ನು ಒಡೆದು ಇವುಗಳಿಂದಾಗುವ ಹಾನಿಯಾಗದಂತೆ ಇದು ರಕ್ಷಿಸುತ್ತವೆ.
ಕ್ಯಾನ್ಸರ್ ತಡೆಗಟ್ಟುವಂತೆ ಮಾಡುತ್ತದೆ.

ಇನ್ನೂ ದಾಳಿಂಬೆ ಬೀಜಗಳನ್ನು ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ಇದು ತಡೆಗಟ್ಟುತ್ತದೆ. ದೇಹದಲ್ಲಿ ಕ್ಯಾನ್ಸರ್ ಕಣಗಳು ಅಭಿವೃದ್ದಿಗೊಳ್ಳಲು ಬಿಡದೇ ಈ ಕೋಶಗಳನ್ನು ನಾಶಗೊಳಿಸಲು ಇವು ನೆರವಾಗುತ್ತದೆ.
ಮಧುಮೇಹಿಗಳಿಗೂ ಆರೋಗ್ಯಕ್ಕೆ ಉತ್ತಮ: ದಾಳಿಂಬೆ ಮಧುಮೇಹವನ್ನು ತಡೆಗಟ್ಟುವ ಶಕ್ತಿಯನ್ನು ಒಳಗೊಂಡಿದೆ.

ಒಸಡುಗಳನ್ನು ದೃಢಗೊಳಿಸುವಲ್ಲಿ ಸಹಕಾರಿಯಾಗುತ್ತದೆ: ದಾಳಿಂಬೆ ಬೀಜಗಳನ್ನು ಸೇವಿಸುವ ಮೂಲಕ ಒಸಡುಗಳು ದೃಢಗೊಳ್ಳುವುದರೊಂದಿಗೆ ಸಡಿಲವಾದ ಹಲ್ಲುಗಳು ಗಟ್ಟಿಯಾಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದಲ್ಲದೇ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಇವು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆಗೆ ಉತ್ತಮ: ದಾಳಿಂಬೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಜೀರ್ಣಕ್ರಿಯೆಗೆ ಸಹಕರಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗಲು ಇದು ನೆರವಾಗುತ್ತದೆ