ಆರೋಗ್ಯಕರ ಮನುಷ್ಯನಿಗೆ ನಿದ್ರೆ ಎಷ್ಟು ಮುಖ್ಯ?

ಆರೋಗ್ಯಕರ ಮನುಷ್ಯನಿಗೆ ನಿದ್ರೆ ಎಷ್ಟು ಮುಖ್ಯ?

YK   ¦    Jan 16, 2018 03:05:07 PM (IST)
ಆರೋಗ್ಯಕರ ಮನುಷ್ಯನಿಗೆ ನಿದ್ರೆ ಎಷ್ಟು ಮುಖ್ಯ?

ಪ್ರತಿಯೊಬ್ಬ ಮನುಷ್ಯನ ಆರೋಗ್ಯಕರ ಚಟುವಟಿಕೆಗೆ ನಿದ್ದೆಯ ಪಾತ್ರ ಮಹತ್ವದ್ದಾಗಿದೆ. ಇನ್ನೂ ಚಿಕ್ಕ ಮಕ್ಕಳಲ್ಲಿ ನಿದ್ದೆಯ ಅವಶ್ಯಕತೆ ಹೆಚ್ಚಾಗಿದ್ದು, ದೊಡ್ಡವರಾಗುತ್ತ ನಿದ್ದೆಯ ಸಮಯ ಇಳಿಮುಖವಾಗುತ್ತದೆ. ಆದರೆ ಆರೋಗ್ಯಕ್ಕರ ಜೀವನಕ್ಕೆ 6–8ಗಂ. ರಾತ್ರಿ ನಿದ್ದೆಯ ಅವಶ್ಯಕತೆಯಿರುತ್ತದೆ. ಆದರೆ ಕೆಲವೊಬ್ಬರು ಇದಕ್ಕಿಂತ ಕಡಿಮೆ ಅಥವಾ ಜಾಸ್ತಿ ನಿದ್ದೆ ಮಾಡಿಯೂ ಸಹ ಚೈತನ್ಯಯುತವಾಗಿ ಜೀವನ ನಡೆಸುವವರು ಇದ್ದಾರೆ.

ನಿದ್ದೆ ಯಿಂದ ಏನು ಪ್ರಯೋಜನ: ಮನುಷ್ಯನ ನೆನಪಿನ ಶಕ್ತಿ ಹಾಗೂ ಇನ್ನಿತರ ಬೌದ್ಧಿಕ ಚಟುವಟಿಕೆಗಳಿಗೆ ಆರೋಗ್ಯಕರ ನಿದ್ದೆ ಅತಿ ಅವಶ್ಯಕವಾಗಿದ್ದು ದಿನನಿತ್ಯದಲ್ಲಿ ಒಂದಿಷ್ಟು ಸಮಯವನ್ನು ಅದಕ್ಕಾಗಿ ಮೀಸಲಿಡಬೇಕು. ಇನ್ನೂ ದೀರ್ಘಾವಧಿಯ ನಿದ್ರಾಹೀನತೆಯಿಂದ ಏಕಾಗ್ರತೆ ಕೊರತೆ ಹಾಗೂ ಅನೇಕ ರೀತಿಯಾ ದುಷ್ಪರಿಣಾಮಗಳು ಏದುರಾಗುತ್ತದೆ. ಕೆಲವೊಂದು ಬಾರಿ ನಿದ್ರಾಹೀನತೆಯಿಂದ ಕಾರಣ ಅಪಘಾತಗಳಾದ ಉದಾಹರಣೆಗಳನ್ನು ನಾವು ನೋಡಿ ತಿಳಿದಿರುತ್ತೇವೆ.

ಇನ್ನೂ ನಿದ್ರಾಹೀನತೆ ಮನುಷ್ಯನ ಮನೋರೋಗಗಳ ಮುಖ್ಯ ಗುಣಲಕ್ಷಣಗಳಲ್ಲಿ ಒಂದಾಗಿದೆ. ಖಿನ್ನತೆ, ಭಯ, ಆತಂಕ, ಸ್ಕಿಝೋಫ್ರೇನಿಯ ಮುಂತಾದ ಕಾಯಿಲೆಗಳು ನಿದ್ರಾಹೀನತೆಯಿಂದ ಕಾಣಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಮನುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ನಿದ್ದೆಯ ಪಾತ್ರ ಮುಖ್ಯವಾಗಿದೆ.

1. ಇನ್ನೂ ನಿದ್ದೆಗೆ ಜಾರುವ ಮುನ್ನ ಏಳುವ ಸಮಯ ನಿಯಮಿತವಾಗಿರಲಿ.
2. ಇನ್ನೂ ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲ ಎಂದು ಬೆಳಗ್ಗೆ ತಡವಾಗಿ ಏಳಬೇಡಿ.
3. ಮಲಗಿದ ತಕ್ಷಣ ನಿದ್ದೆ ಬರಲಿಲ್ಲವಾದರೆ ಹಾಸಿಗೆಯಲ್ಲಿ ಬಿದ್ದು ಹೊರಳಾಡುವ ಬದಲು ಎದ್ದು ಬಂದು ಸ್ವಲ್ಪ ಸಮಯದ ಬಳಿಕ ಹೋಗಿ ಮಲಗಿ ಕೊಳ್ಳಿ.
4. ಇನ್ನೂ ರಾತ್ರಿಯ ಊಟ ಮಿತವಾಗಿದ್ದು, ಆದಷ್ಟೂ ಮಸಾಲೆ ಪದಾರ್ಥಗಳನ್ನು ಸ್ವಲ್ಪ ದೂರವಿಡಿ.
5. ಊಟವಾದ ತಕ್ಷಣವೇ ಮಲಗುವುದನ್ನು ನಿರ್ಲಕ್ಷಿಸಿ
6. ಮಲಗುವ ಸಮಯದಲ್ಲಿ ಟೀ, ಕಾಫಿ, ಮದ್ಯ ಸೇವನೆ ಒಳಿತಲ್ಲ.7.ವ್ಯಾಯಾಮ ಆರೋಗ್ಯಕರ ಜೀವನಕ್ಕೆ ಒಳ್ಳೆಯದು.ಆದರೆ ಆದರೆ ನಿದ್ದೆಗೆ ಮುಂಚೆ ವ್ಯಾಯಾಮ ಬೇಡ.