ಮಹಿಳೆಯರ ನೆಮ್ಮದಿ ಕೆಡಿಸುವ ಫೈಬ್ರೈಡ್ ಯುಟೇರಸ್

ಮಹಿಳೆಯರ ನೆಮ್ಮದಿ ಕೆಡಿಸುವ ಫೈಬ್ರೈಡ್ ಯುಟೇರಸ್

LK   ¦    Mar 10, 2018 04:11:20 PM (IST)
ಮಹಿಳೆಯರ ನೆಮ್ಮದಿ ಕೆಡಿಸುವ ಫೈಬ್ರೈಡ್ ಯುಟೇರಸ್

ಇವತ್ತಿನ ದಿನಗಳಲ್ಲಿ ಮಹಿಳೆಯರನ್ನು ಒಂದಲ್ಲ ಒಂದು ಕಾಯಿಲೆಗಳು ಕಾಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣಗಳು ಹಲವಾರು. ಒತ್ತಡದ ಕೆಲಸ, ಜತೆಗೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಹೆಚ್ಚಿದ ಜವಬ್ದಾರಿ ಹೀಗೆ ವಿವಿಧ ಕಾರಣಗಳಿಂದಾಗಿ ತಮ್ಮ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದರೂ ಇನ್ನೊಂದು ದಿನ ಆಸ್ಪತ್ರೆಗೆ ಹೋದರಾಯಿತು ಎಂದು ಮುಂದೂಡುತ್ತಾ ಚಿಕ್ಕದರಲ್ಲೇ ವಾಸಿ ಮಾಡಿಕೊಳ್ಳಬಹುದಾದ ಕಾಯಿಲೆಗಳನ್ನು ಉಲ್ಭಣವಾಗುವಂತೆ ಮಾಡಿಕೊಳ್ಳುವುದು ಕಂಡು ಬರುತ್ತಿದೆ.

ಮನೆಯ ಒಳಗೂ ಹೊರಗೂ ದುಡಿಯುವ ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿಗೆ ಸಮಯವೇ ಇಲ್ಲದಂತಾಗಿದೆ. ಮನೆ ಸಂಸಾರದ ನಿರ್ವಹಣೆಯೊಂದಿಗೆ ಕಚೇರಿ ಕೆಲಸಗಳ ಬಗ್ಗೆಯೂ ನಿಗಾವಹಿಸಬೇಕಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡಗಳು ಆಕೆಯ ಮೇಲೆ ಹೆಚ್ಚಾಗುತ್ತಿದೆ. ತನ್ನ ಜವಬ್ದಾರಿಗಳ ನಡುವೆ ತನ್ನ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸಲು ಆರಂಭಿಸುತ್ತಾರೆ. ಇದು ಕೆಲವೊಮ್ಮೆ ಭಾರೀ ತೊಂದರೆಗೆ ಕಾರಣವಾಗಿ ಬಿಡುತ್ತದೆ.

ಇಷ್ಟಕ್ಕೂ ಮಹಿಳೆಯರು ಎಲ್ಲ ದಿನಗಳಲ್ಲೂ ಒಂದೇ ರೀತಿಯಾಗಿರಲು ಸಾಧ್ಯವಾಗುವುದಿಲ್ಲ. ಋತು ಚಕ್ರದ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಕಾಣಿಸಬಹುದು. ಮಾನಸಿಕವಾಗಿಯೂ ಕಿರಿಕಿರಿ ಎನಿಸತೊಡಗುತ್ತದೆ. ಯಾವುದರಲ್ಲೂ ಆಸಕ್ತಿ ಇಲ್ಲದಂತಾಗುತ್ತದೆ. ಕೋಪ ಉದ್ವೇಗಗಳು ಕಾಣಿಸಿಕೊಳ್ಳಬಹುದು. ಇದೆಲ್ಲ ಸಾಮಾನ್ಯ ಎಂಬುದು ಗೊತ್ತಿರುತ್ತದೆ.

ಆದರೆ ಇದರ ನಡುವೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಫೈಬ್ರೈಡ್ ಯುಟೇರಸ್ (ಗರ್ಭಕೋಶದಲ್ಲಿ ಗೆಡ್ಡೆ) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಕಾಣಿಸಿಕೊಂಡರೆ ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಬಂಜೆತನದ ಲಕ್ಷಣಗಳು ಕಂಡು ಬರುತ್ತವೆ.

ಆರಂಭದಲ್ಲಿ ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಮೊದಲಾದವುಗಳು ಕಂಡು ಬಂದಾಗಲೇ ವೈದ್ಯರ ಬಳಿಗೆ ತೆರಳಬೇಕು. ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್, ಎಂಆರ್ಐ, ಎಚ್ಎಸ್ಜಿ. ಹಿಸ್ಟೆರೋಸ್ಕೋಪಿ ಮೊದಲಾದ ಪರೀಕ್ಷೆಗಳನ್ನು ಮಾಡಿ ಫೈಬ್ರೈಡ್ ಯುಟೇರಸ್ನ್ನು ಕಂಡು ಹಿಡಿಯುತ್ತಾರೆ.

ಫೈಬ್ರೈಡ್ ಯುಟೇರಸ್ ವಂಶವಾಹಿನಿಯಾಗಿ ಬರುವ ಸಾಧ್ಯತೆ ಹೆಚ್ಚು ಇದೆಯಂತೆ. ಇಂದಿನ ಜೀವನಶೈಲಿ ಹಾಗೂ ಹಾಮರ್ೋನ್ ಸಂಬಂಧಿ ಸಮಸ್ಯೆಗಳು(ಈಸ್ಟ್ರೋಜಸ್, ಪ್ರೋ ಜೆಸ್ಟೋಸ್ ಹಾಗೂ ಇನ್ಸುಲಿನ್) ಹಿಂದಿನ ಕಾಲದ ಮಹಿಳೆಯರಿಗಿಂತ ಈಗಿನ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ.

ಫೈಬ್ರೈಡ್ ಗೆಡ್ಡೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವುದು ಹಿಂದಿನ ವಿಧಾನವಾಗಿತ್ತು. ಆದರೆ ಈಗ ತಂತ್ರಜ್ಞಾನ ಸುಧಾರಿಸಿದ್ದು, ಆಧುನಿಕ ಚಿಕಿತ್ಸಾ ವಿಧಾನಗಳು ಬಂದಿದ್ದು, ಹೆಚ್ಚು ನೋವು, ರಕ್ತಸ್ರಾವ ಆಗದಂತೆ ಸುಲಭವಾಗಿ ಲ್ಯಾಪ್ರೋಸ್ಕೋಪಿ ಮುಖಾಂತರ ಫೈಬ್ರೈಡ್ ಗೆಡ್ಡೆಗಳನ್ನು ಹೊರತೆಗೆಯಲಾಗುತ್ತದೆ. ಇದರಿಂದ ರಕ್ತಸ್ರಾವವೂ ಕಡಿಮೆ. ನೋವು ಕಡಿಮೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ವೈದ್ಯರ ಪ್ರಕಾರ ಲ್ಯಾಪ್ರೋಸ್ಕೋಪಿಕ್ ಮಯೋ ಮೆಕ್ಟೊಮಿ ಸುರಕ್ಷಿತ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳುವ ಶಸ್ತ್ರಚಿಕಿತ್ಸೆಯಾಗಿದ್ದು, ಹೊಟ್ಟೆಯ ಮೇಲ್ಭ್ಬಾಗದಲ್ಲಿ ಸಣ್ಣದಾಗಿ ರಂಧ್ರದಂತೆ ಮಾಡಿ ಗರ್ಭಕೋಶದಲ್ಲಿನ ಗೆಡ್ಡೆಗಳನ್ನೂ ಹೊರತೆಗೆದು ನಂತರ ಸೂಕ್ತ ರೀತಿಯಲ್ಲಿ ಗರ್ಭಕೋಶವನ್ನು ಪುನರ್ ನಿಮರ್ಿಸಲಾಗುತ್ತದೆ. ಮಾಸರ್ಿಲೇಶನ್ ಮೂಲಕ ಗರ್ಭ ಕೋಶದ ಗೆಡ್ಡೆಗಳನ್ನೂ ಸಣ್ಣ ಸಣ್ಣ ತುಣುಕುಗಳನ್ನು ಮಾಡಿ ಆ ಸಣ್ಣ ರಂಧ್ರದ ಮೂಲಕ ಹೊರತೆಗೆಯಲಾಗುತ್ತದೆ. ಈ ಚಿಕಿತ್ಸೆಯಿಂದ ಅನೇಕ ಉಪಯೋಗಗಳಿವೆ. ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯ ಭಾಗದಲ್ಲಿ ಕಲೆಗಳಿರುವುದಿಲ್ಲ. ಕಡಿಮೆ ನೋವಿನಲ್ಲಿ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಅಷ್ಟೇ ಅಲ್ಲದೆ ರಕ್ತ ಸ್ರಾವದ ಪ್ರಮಾಣವೂ ಕಡಿಮೆಯಿರುತ್ತದೆ. ಅಷ್ಟೇ ಅಲ್ಲದೆ ಬಹುಬೇಗ ಗುಣಮುಖರಾಗಲೂ ಇದರಿಂದ ಸಾಧ್ಯವಾಗುತ್ತದೆಯಂತೆ.

ಅದು ಏನೇ ಇರಲಿ ಮೇಲಿನ ಸಮಸ್ಯೆಗಳು ಬಾಧಿಸುತ್ತಿದ್ದರೆ, ತಕ್ಷಣ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಕೊಳ್ಳುವುದು ಬಹುಮುಖ್ಯವಾಗಿದ್ದು, ನಿರ್ಲಕ್ಷ್ಯ ವಹಿಸಿದರೆ ಅದರಿಂದ ಹೆಚ್ಚಿನ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಳ್ಳುವುದು ಒಳಿತು.