ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಸೇವಿಸಬೇಕಾದ ಆಹಾರಗಳು

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಸೇವಿಸಬೇಕಾದ ಆಹಾರಗಳು

HSA   ¦    Dec 14, 2019 05:01:58 PM (IST)
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಸೇವಿಸಬೇಕಾದ ಆಹಾರಗಳು

ಚಳಿಗಾಲ ಆರಂಭವಾಗುತ್ತಿದ್ದಂತೆ ಹಲವಾರು ಸಣ್ಣಪುಟ್ಟ ಕಾಯಿಲೆಗಳು ದೇಹವನ್ನು ಒಕ್ಕರಿಸಲು ಆರಂಭಿಸುವುದು. ಈ ವೇಳೆ ಮುಖ್ಯವಾಗಿ ಕೆಲವೊಂದು ಆಹಾರಗಳಿಂದ ದೇಹದ ರಕ್ಷಣೆ ಮಾಡಬಹುದು. ಇದರಲ್ಲಿ ಇರುವಂತಹ ಪೋಷಕಾಂಶಗಳು ಚಳಿಯಲ್ಲಿ ಬರುವಂತಹ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುವುದು. ಯಾವ್ಯಾವ ಆಹಾರ ಚಳಿಗಾಲದಲ್ಲಿ ಸೇವಿಸಬಹುದು ಎಂದು ಇಲ್ಲಿ ತಿಳಿಯಿರಿ.

ಬೇರಿನ ತರಕಾರಿಗಳು

ಬೇರಿನ ತರಕಾರಿಗಳಾಗಿರುವಂತಹ ಬೀಟ್ ರೂಟ್, ಕ್ಯಾರೆಟ್ ಚಳಿಗಾಲದಲ್ಲಿ ಸೇವಿಸಬಹುದಾದ ಉತ್ತಮ ಆಹಾರವಾಗಿದೆ. ಸಾವಯವವಾಗಿ ಬೆಳೆದಿರುವ ತರಕಾರಿ ಸಿಕ್ಕಿದರೆ ಆಗ ಮತ್ತಷ್ಟು ಲಾಭ ಸಿಗುವುದು.

 ಓಟ್ ಮೀಲ್

ಓಟ್ ಮೀಲ್ ಎಂದರೆ ಕೇವಲ ಉಪಾಹಾರಕ್ಕೆ ಹೊಟ್ಟೆ ತುಂಬಿಸಲು ಸೇವಿಸುವ ಆಹಾರವಲ್ಲ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಓಟ್ ಮೀಲ್ ನಲ್ಲಿ ಉನ್ನತ ಮಟ್ಟದ ಸತು, ಹೀರಿಕೊಳ್ಳುವ ನಾರಿನಾಂಶವಿದೆ. ತಯಾರಿಸಲ್ಪಟ್ಟು ಸಿಗುವಂತಹ ಓಟ್ಸ್ ಬಳಸಬೇಡಿ.

ಸೂಪ್

ಚಳಿಗಾಲದಲ್ಲಿ ಸೂಪ್ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಉತ್ತಮ ಮಟ್ಟದ ಕ್ರೀಮ್, ಉಪ್ಪು ಮತ್ತು ಮಾಂಸವಿರಬೇಕು. ತಕಾರಿ ಅಥವಾ ಚಿಕನ್ ಸೂಪ್ ಕುಡಿಯಿರಿ.

ಟ್ಯುನಾ ರೋಲ್

ಟ್ಯುನಾದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಸಕ್ಕರೆ ಇರುವುದು. ಇದಕ್ಕಾಗಿ ನೀವು ಸುಶಿ ಬಳಸಿ. ಟ್ಯುನಾ ಅಥವಾ ಸಾಲ್ಮನ್ ಹಾಕಿರುವಂತಹ ರೋಲ್ ತಿನ್ನಿ. ಎರಡರಲ್ಲೂ ಉತ್ತಮ ಮಟ್ಟದ ವಿಟಮಿನ್ ಡಿ ಇದೆ. ಚಳಿಗಾಲದಲ್ಲಿ ಬಿಸಲಿಗೆ ಮೈಯೊಡ್ಡುವುದು ಕಡಿಮೆ ಆಘಿರುವ ಕಾರಣದಿಂದಾಗಿ ಆಹಾರದಿಂದ ವಿಟಮಿನ್ ಡಿ ಪಡೆಯಬೇಕು.

ಬ್ರಾಕೋಲಿ ಮತ್ತು ಹೂಕೋಸು

ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡು ಜ್ವರ ಹಾಗೂ ಶೀತ ನಿವಾರಣೆ ಮಾಡಬಹುದು. ಆದರೆ ಈ ತರಕಾರಿಗಳು ಚಳಿಗಾಲದಲ್ಲಿ ಅನಾರೋಗ್ಯ ದೂರವಿಡುವುದು. ಬ್ರಾಕೋಲಿ ಮತ್ತು ಹೂಕೋಸಿನಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದ್ದು, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು.