ಬೊಜ್ಜು ದೇಹವನ್ನು ಕರಗಿಸಲು ಈ ಆಹಾರಗಳ ಸೇವನೆ ಮಾಡಿ

ಬೊಜ್ಜು ದೇಹವನ್ನು ಕರಗಿಸಲು ಈ ಆಹಾರಗಳ ಸೇವನೆ ಮಾಡಿ

HSA   ¦    Sep 25, 2018 01:44:55 PM (IST)
ಬೊಜ್ಜು ದೇಹವನ್ನು ಕರಗಿಸಲು ಈ ಆಹಾರಗಳ ಸೇವನೆ ಮಾಡಿ

ಬೊಜ್ಜು ದೇಹವನ್ನು ಹೊಂದಿರುವವರು ದೇಹದ ತೂಕ ಇಳಿಸಿಕೊಳ್ಳಲು ಆಹಾರ ಪಥ್ಯ ಮಾಡುವರು. ಆದರೆ ಈ ಆಹಾರ ಪಥ್ಯದಿಂದಾಗಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗದೇ ಇರಬಹುದು. ಈ ವೇಳೆ ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳು ನಿಮ್ಮ ಆಹಾರದಲ್ಲಿರಬೇಕು. ತಿನ್ನುವಂತಹ ಪ್ರತಿಯೊಂದು ಆಹಾರವು ಆರೋಗ್ಯಕ್ಕೆ ವಿಭಿನ್ನ ರೀತಿಯಿಂದ ನೆರವಾಗುವುದು. ಇದರ ಬಗ್ಗೆ ತಿಳಿಯಿರಿ.

ಬಹುದಳ ತರಕಾರಿಗಳು
ಬ್ರೊಕೊಲಿ, ಎಲೆಕೋಸು, ಹೂಕೋಸು ಇತ್ಯಾದಿ ತರಕಾರಿಗಳಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಪ್ರೋಟೀನ್ ಇದೆ. ಇದು ಕ್ಯಾನ್ಸರ್ ವಿರೋಧಿ ಮತ್ತು ಕಡಿಮೆ ಶಕ್ತಿ ಸಾಂದ್ರತೆಯುಳ್ಳ ತರಕಾರಿ. ಪ್ರಾಣಿಜನ್ಯ ಆಹಾರದಂತೆ ಇದರಲ್ಲಿ ಪ್ರೋಟೀನ್ ಇಲ್ಲದೆ ಇದ್ದರೂ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದು.

ಹಸಿರೆಲೆ ತರಕಾರಿಗಳು
ತೂಕ ಕಳೆದುಕೊಳ್ಳುವತ್ತ ನೀವು ಕೆಲಸ ಮಾಡುತ್ತಲಿದ್ದರೆ ಆಗ ನೀವು ಹೆಚ್ಚಿನ ಕಾರ್ಬ್ಸ್ ಮತ್ತು ಕ್ಯಾಲರಿ ಇರುವಂತಹ ಆಹಾರವನ್ನು ಸೇವನೆ ಮಾಡಬಾರದು. ಈ ಕಾರಣದಿಂದಾಗಿ ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಬಸಲೆ, ಕಾಲಾರ್ಡ್ಸ್, ಕೇಲ್, ಸ್ವಿಸ್ ಚಾರ್ಡ್ ಗಳು ಇತ್ಯಾದಿಗಳನ್ನು ಸೇವಿಸಿ. ಇದು ಪರಿಣಾಮಕಾರಿಯಾಗಿ ತೂಕ ಇಳಿಸಲು ನೆರವಾಗುವುದು ಮತ್ತು ವಿವಿಧ ರೀತಿಯ ಪೋಷಕಾಂಶಗಳು, ಆ್ಯಂಟಿಆಕ್ಸಿಡೆಂಟ್, ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ ಒದಗಿಸಿ, ಸಂಪೂರ್ಣ ಆರೋಗ್ಯ ಕಾಪಾಡುವುದು.

ಮೊಟ್ಟೆ
ಮೊಟ್ಟೆಯಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಇದೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಅಧ್ಯಯನಗಳು ಇದು ಸುಳ್ಳು ಎಂದು ಹೇಳಿವೆ. ಮೊಟ್ಟೆಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ದೀರ್ಘಕಾಲದ ತನಕ ಇದು ಹೊಟ್ಟೆ ತುಂಬಿರುವಂತೆ ಮಾಡುವುದು. ಬೊಜ್ಜು ದೇಹವನ್ನು ಹೊಂದಿದ್ದ 30 ಮಹಿಳೆಯರಿಗೆ ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ನೀಡಿ ಪರೀಕ್ಷೆ ಮಾಡಲಾಯಿತು. ಇವರಿಗೆ ದೀರ್ಘಕಾಲ ಹೊಟ್ಟೆ ತುಂಬಿದಂತೆ ಆಗಿ, ಮುಂದಿನ 36 ಗಂಟೆಗಳ ಕಾಲ ಕಡಿಮೆ ಆಹಾರ ಸೇವಿಸುತ್ತಿದ್ದರು. ಕ್ಯಾಲರಿ ನಿರ್ಬಂಧಿತ ಆಹಾರ ಕ್ರಮವು ಮಹಿಳೆಯರಲ್ಲಿ ತೂಕ ಕಳೆದುಕೊಳ್ಳಲು ಸಹಕಾರಿಯಾಯಿತು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಎಣ್ಣೆಯಂಶವಿರುವ ಮೀನುಗಳು
ಎಣ್ಣೆಯಂಶವಿರುವ ಮೀನುಗಳಾಗಿರುವಂತಹ ಸಾಲ್ಮನ್, ಮ್ಯಾಕೆರೆಲ್,ಸಾರ್ಡಿನ್, ಟ್ರೌಟ್ ಇತ್ಯಾದಿಗಳಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು. ಇವುಗಳಲ್ಲಿ ಇರುವಂತಹ ಐಯೋಡಿನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಸುಧಾರಣೆ ಮಾಡುವುದು ಮತ್ತು ಹೃದಯದ ಕಾಯಿಲೆಗಳನ್ನು ದೂರವಿಡುವುದು. ಹಲವಾರು ಪೋಷಕಾಂಶಗಳೊಂದಿಗೆ ತುಂಬಿರುವ ಇದು ಥೈರಾಯ್ಡ್ ಸರಿಯಾಗಿ ಕೆಲಸ ಮಾಡಲು ನೆರವಾಗುದು ಮತ್ತು ಚಯಾಪಚಯ ವೃದ್ಧಿಸುವುದು. ತೂಕ ಇಳಿಸುವ ವೇಳೆ ನೀವು ಈ ಆಹಾರ ಸೇವಿಸಬೇಕು.