ಚರ್ಮದ ರಕ್ಷಣೆಗೆ ನಾವು ಏನೆಲ್ಲಾ ಮಾಡಬಹುದು?

ಚರ್ಮದ ರಕ್ಷಣೆಗೆ ನಾವು ಏನೆಲ್ಲಾ ಮಾಡಬಹುದು?

LK   ¦    Jan 03, 2019 03:12:13 PM (IST)
ಚರ್ಮದ ರಕ್ಷಣೆಗೆ ನಾವು ಏನೆಲ್ಲಾ ಮಾಡಬಹುದು?

ಚಳಿ, ಬಿಸಿಲು, ಮಳೆ ಹೀಗೆ ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗೆ ತಮ್ಮ ದೇಹ ಎಲ್ಲ ರೀತಿಯಲ್ಲಿ ಹೊಂದಿಕೆಯಾಗುವ ಗುಣವನ್ನು ಹೊಂದಿದ್ದರೂ ಕೆಲವೊಮ್ಮೆ ನಮ್ಮ ದೇಹವನ್ನು ರಕ್ಷಿಸುವ ಚರ್ಮದ ಮೇಲೆ ಪರಿಣಾಮ ಬೀರಬಹುದು. ನಾವು ಚರ್ಮದ ರಕ್ಷಣೆಗೆ ಹಲವು ರೀತಿಯ ಕಾಸ್ಮೆಟಿಕ್ ವಸ್ತುಗಳನ್ನು ಬಳಸಿದರೂ ಕೆಲವೊಂದು ಆಹಾರ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯದೊಂದಿಗೆ ಚರ್ಮದ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಿದೆ.

ಈ ಕುರಿತಂತೆ ತಜ್ಞರು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅದು ಏನೆಂದರೆ ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಎನ್ನುವ ಅಂಶವೂ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆಯಂತೆ. ಹೊಟ್ಟೆಯು ಸರಿಯಾಗಿದ್ದರೆ ಆಗ ಆಹಾರವು ಸುಗಮವಾಗಿ ಜೀರ್ಣವಾಗುತ್ತದೆ, ಇದರಿಂದ ನಾವು ಸೇವಿಸುವ ಆಹಾರದಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗುತ್ತದೆ. ಅಷ್ಟೇ ಅಲ್ಲದೇ ದೇಹದ ಆರೋಗ್ಯವನ್ನು ದೂರ ಮಾಡುವಂತಹ ಬ್ಯಾಕ್ಟೀರಿಯಾಗಳು ಬೆಳವಣಿಗೆ ಕುಂಠಿತವಾಗುತ್ತದೆ. ಮೊಸರಿನಿಂದ ನಮ್ಮ ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯಾಗಳು ಸಿಗುತ್ತದೆ. ಅದೇ ರೀತಿ ಮುಸುಕು ಹೊಂದಿರುವ ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಇವೆಲ್ಲವೂ ಆರೋಗ್ಯ ಹೆಚ್ಚಿಸುವಂತಹದ್ದು ,ಇದು ದೇಹದಲ್ಲಿ ರಕ್ತಹೀನತೆಯನ್ನು ದೂರ ಮಾಡುತ್ತದೆ. ಇನ್ನು ನೀರನ್ನು ಹೇರಳವಾಗಿ ಸೇವಿಸಿದರೆ ಇದು ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಅದರ ಹೊಳಪನ್ನು ಹೆಚ್ಚಿಸುತ್ತದೆ.

ಬಣ್ಣವು ಚರ್ಮದ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಉಂಟು ಮಾಡುತ್ತದೆ. ನಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ, ಇದು ವಾರ್ಧಕ್ಯದ ಸಮಸ್ಯೆಯನ್ನು ದೂರ ಮಾಡುತ್ತದೆ. ಬ್ಲಾಕ್ ಬೆರ್ರಿ, ಬ್ಲೂ ಬೆರ್ರಿ, ಹುಳಿಯಿಲ್ಲದ ದ್ರಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ, ಟೊಮೇಟೊ ದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿವೆಯಂತೆ. ಮೊಟ್ಟೆ, ಸ್ಪಿನಾಚ್, ಮೊಟ್ಟೆ ಬಿಳಿ ಭಾಗ, ಕಡಿಮೆ ಕೊಬ್ಬಿನಂಶ ಹೊಂದಿರುವ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕ್ಯಾರೆಟ್ ನಲ್ಲಿರುವ ಕೆರೊಟೆನಾಯಿಡ್ಸ್ ಚರ್ಮದ ಬಿಗಿತಕ್ಕೆ ಕಾರಣವಾಗುವಂತಹ ಅಂಶಗಳನ್ನು ಹೊಂದಿವೆ.ನೆಲ್ಲಿಕಾಯಿ, ಸೀಬೆ ಕಾಯಿ, ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳು, ವಿಟಮಿನ್ ಈ ಭರಿತ ತರಕಾರಿಗಳು, ಎಣ್ಣೆಗಳು, ಬೀಜಗಳು ಅದರಲ್ಲಿ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಆಲಿವ್, ಇವೆಲ್ಲವೂ ಸುಕ್ಕನ್ನು ನಿವಾರಿಸುವ ಅಂಶಗಳನ್ನು ಹೊಂದಿದೆ.

ಒಮೇಗಾ ಫ್ಯಾಟಿಯಾಸಿಡ್ ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಯೌವನ ಭರಿತವಾಗಿ ಕಾಣುವಂತೆ ಮಾಡುತ್ತದೆ. ತಣ್ಣನೆಯ ನೀರು, ಮಾಂಸಭರಿತ ಸಾಲೋಮನ್ ಮೀನು, ಆಲಿವ್, ಅವಕಡ, ಗಾಢ ಹಸಿರು ಬಣ್ಣದ ಎಲೆಗಳಿರುವ ತರಕಾರಿಗಳು ಆಹಾರದ ಭಾಗವಾಗ ಬೇಕು. ಇವುಗಳಿಂದ ನಿಮಗೆ ಒಮೇಗಾ ದೊರಕುತ್ತದೆ. ಕೋಳಿ, ಮಾಂಸಭರಿತ ಮೀನು, ಸಿಪ್ಪೆ ಇರುವಂತಹ ಧಾನ್ಯಗಳು ಚರ್ಮವನ್ನು ರಕ್ಷಿಸುವಂತಹ ಎಂಜೈಗಳನ್ನು ಹೊಂದಿವೆ. ಸೆಲೆನಿಯಂ ಖನಿಜ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳನ್ನು ಬಳಸಿ. ಅಣಬೆ, ಸಾಲೋಮನ್ ಮೀನು, ಪಾಲೀಶ್ ಮಾಡದ ಗೋಧಿ, ಸಿಹಿ ಕುಂಬಳದ ಬೀಜಗಳನ್ನು ಸೇವಿಸುವುದರಿಂದ ಸೆಲೆನಿಯಂ ದೊರಕುತ್ತದೆ. ಬಿ ಕಾಂಪ್ಲೆಕ್ಸ್ ಅಂಶಗಳನ್ನು ಒಳಗೊಂಡಿರುವ ಆಹಾರದ ಕಡೆಗೂ ಆದ್ಯತೆ ನೀಡ ಬೇಕು. ಗ್ರೀನ್ ಟೀ ಸೂರ್ಯನ ಕಿರಣದಿಂದ ರಕ್ಷಣೆಯನ್ನು ನೀಡುತ್ತದೆ. ಅದರಲ್ಲಿರುವ ಪಾಲಿಫೆನೋಲ್ಸ್ ಚರ್ಮದಲ್ಲಿ ಸುಕ್ಕು ಉಂಟಾಗುವುದನ್ನು ತಡೆಗಟ್ಟುತ್ತದೆ. ಕಪ್ಪುಬಣ್ಣದ ಚಾಕೋಲೇಟ್ ಬಳಕೆ ಮಾಡುವುದರಿಂದ ಚರ್ಮವು ಸೂರ್ಯನ ಅತಿನೇರಳೆ ಕಿರಣದಿಂದ ಸಹ ರಕ್ಷಣೆ ನೀಡುತ್ತದೆ.

ಸತುವಿನ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸ ಬೇಕು. ಹೆಚ್ಚಾಗಿ ಪ್ರೋಟೀನ್ ಭರಿತ ಆಹಾರಕ್ಕೂ ಆದ್ಯತೆ ನೀಡ ಬೇಕು. ಮಾಂಸ, ಸೀ ಫುಡ್, ಹಾಲಿನ ಉತ್ಪನ್ನಗಳು, ದೊಡ್ಡ ಹುರುಳಿ ಬೀಜಗಳು, ಬೀಜಗಳು, ಸಿಪ್ಪೆ ಇರುವ ಧಾನ್ಯಗಳು ಅಷ್ಟೇ ಅಲ್ಲದೇ ಧೂಮಪಾನ ಮಾಡದೇ ಇರುವುದು, ಹೇರಳವಾಗಿ ನೀರನ್ನು ಸೇವಿಸುವುದು, ಸಮಯಕ್ಕೆ ಸರಿಯಾಗಿ ನಿದ್ರಿಸುವುದು, ವ್ಯಾಯಾಮ, ಯೋಗ, ಧ್ಯಾನ ಇವೆಲ್ಲವೂ ಸಹ ಚರ್ಮದ ರಕ್ಷಣೆಯನ್ನು ಮಾಡುತ್ತದೆ.