ನೂರು ರೋಗಗಳಿಗೆ ಗೋಮೂತ್ರ ಮದ್ದು

ನೂರು ರೋಗಗಳಿಗೆ ಗೋಮೂತ್ರ ಮದ್ದು

Feb 07, 2020 04:17:52 PM (IST)
ನೂರು ರೋಗಗಳಿಗೆ ಗೋಮೂತ್ರ ಮದ್ದು

‘ಇಟ್ಟರೆ ಸೆಗಣಿಯಾದೆ, ತಟ್ಟಿದರೆ ಬೆರಣಿಯಾದೆ, ಸುಟ್ಟರೆ ಹಣೆಗೆ ವಿಭೂತಿಯಾದೆ ನೀ ಯಾರಿಗಾದೆಯೋ ಎಲೆ ಮಾನವ’ ವಚನಕಾರರು ಶತಶತಮಾನಗಳ ಹಿಂದೆ ಹೇಳಿರುವ ಮಾತು ನೂರಕ್ಕೆ ನೂರರಷ್ಟು ಸತ್ಯ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಪುಟ್ಟಆರೋಗ್ಯ ವಿಷಯಗಳಿಗೆ ನಾವು ಆಸ್ಪತ್ರೆಯ ನಾಮಸ್ಮರಣೆ ಮಾಡುತ್ತೇವೆ .ಆದರೆ ಇಲ್ಲೊಬ್ಬ ಯುವಕ ದೇಸಿಯ ಹಸುಗಳ ಗೋಮೂತ್ರ ಹಾಗೂ ಸೆಗಣಿಯಿಂದ ರೋಗ ನಿರ್ಮೂಲನೆಗೆ ಹಾದಿ ಕಂಡು ಕೊಂಡಿದ್ದಾನೆ. ಇದನ್ನು ಬಳಸುವುದರಿಂದ ಆರೋಗ್ಯದ ಮೇಲೆ ಯಾವುದೆ ದುಷ್ಟಪರಿಣಾಮವಿಲ್ಲ.
ಕಲಬುರಗಿ ಜಿಲ್ಲೆಯ ನಿವಾಸಿ ವಿಜಯಕುಮಾರ್ ಮಾಲ ಅವರು ಕಳೆದ ಮೂರು ವರ್ಷಗಳಿಂದ ಇಟ್ಟ ಹೆಜ್ಜೆ ಹಿಂದಕ್ಕೆಇಡದೆ, ಗೋಮೂತ್ರ ಹಾಗೂ ಸೆಗಣಿಯಿಂದ ಉತ್ಪಾದಿಸುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಂಡಿರುವಯ ಶೋಗಾಥೆ ನಿಮ್ಮ ಮುಂದಿದೆ .

ತುಂಬು ಕುಟುಂಬದಲ್ಲಿ ಜನಸಿದ ವಿಜಯ ಮೇಲೆ ಸರಸ್ವತಿ ಮುನಿಸಿಕೊಂಡಿದ್ದರಿಂದ ಹತ್ತನೆ ತರಗತಿಯಲ್ಲಿ ಶಾಲೆಗೆ ಗುಡ್‍ಬೈ ಹೇಳಿ, ಹೊಟ್ಟೆ ಪಾಡಿಗಾಗಿ 13 ವರ್ಷಗಳ ಕಾಲ ಟೈಲರ್ ವೃತ್ತಿಯಿಂದ ಜೀವನ ನಡೆಸಿದರು. ವೃತ್ತಿಯಲ್ಲಿ ತೃಪ್ತಿ ಸಿಗದ ಕಾರಣ ದೇಶಿ ಹಸುಗಳ ಕಡೆ ಮುಖ ಮಾಡಿದರು.
ಮನೆಯವರ ವಿರೋಧದ ಮಧ್ಯೆಯೂ ಗುಜರಾತ ರಾಜ್ಯದಿಂದ ಗೀರ್ ತಳಿಯ ಹಸುಗಳನ್ನು ತಂದು ಕಲಬುರಗಿ ಹೊರವಲಯದ ರಿಂಗ್ ರಸ್ತೆಯ ತಾಜ ಸುಲ್ತಾನಪೂರ ಹತ್ತಿರ ತಮ್ಮ ನಾಲ್ಕು ಎಕರೆ ಜಮೀನಲ್ಲಿ ಧರಣಿ ಗೋಶಾಲೆ ಪ್ರಾರಂಭಿಸಿಯೇ ಬಿಟ್ಟರು.

ಪ್ರಾರಂಭದ ದಿನಗಳಲ್ಲಿ ಮನೆಯವರ ಸಹಕಾರವಿಲ್ಲದೆ ಒನ್ ಮ್ಯಾನ್ ಆರ್ಮಿ ಹಾಗೆ ಎಲ್ಲಾ ಕೆಲಸ ಕಾರ್ಯಗಳನ್ನು ತಾವೇ ಮಾಡುತ್ತಿದ್ದರು. ಹಸುಗಳಿಂದ ಹಾಲು, ತುಪ್ಪ, ಮೊಸರು, ಮಜ್ಜಿಗೆ ಹಾಗೂ ಹಸು ತ್ಯಾಜ್ಯದಿಂದ ವಿಭೂತಿ, ಅರ್ಕ, ಕೇಶ ತೈಲ, ಧೂಪ ವಿವಿಧ ರೀತಿಯ ಔಷಧಿಗಳನ್ನು ಇವರು ಸಿದ್ದಪಡಿಸುತ್ತಾರೆ.
ಶಿವಮೊಗ್ಗದ ತೀರ್ಥಹಳ್ಳಿಯ ಶಂಕರ ನಾರಾಯಣ ಪಂಡಿತರ ಹತ್ತಿರಗೋಮೂತ್ರದಿಂದ ಅರ್ಕ ಸಿದ್ದಪಡಿಸುವುದನ್ನು ಕಲಿತಿದ್ದಾರೆ.ಗೋಮೂತ್ರ ಆರ್ಕನಲ್ಲಿ ಅನೇಕ ವಿಧಗಳಿವೆ, ತುಳಸಿಯುಕ್ತ, ಅಮೃತ್ ಬಳ್ಳಿ ಬಳಸಿ ಸಿದ್ದಪಡಿಸುತ್ತಾರೆ.

ಈಗ ಇವರಲ್ಲಿ ಒಟ್ಟು 20 ಹಸುಗಳಿವೆ. ಸಗಣಿ ಹಾಗೂ ಗೋಮೂತ್ರದಿಂದ ಸಾವಯವ ರಸಗೊಬ್ಬರ ಬಳಸಿಕೊಂಡು ತರಕಾರಿ, ತೋಟಗಾರಿಕೆ ಬೆಳೆ ಬೆಳೆಯುತ್ತಾರೆ.ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣ್ಣಮಟ್ಟದ ಔಷಧಿಗಳನ್ನು ಇವರು ಸಿದ್ದಪಡಿಸುತ್ತಾರೆ.ಕಲಬುರಗಿ ಜಿಲ್ಲೆಯಲ್ಲಿ 30ಕ್ಕಿಂತ ಹೆಚ್ಚು ಗ್ರಾಹಕರು ಇವರ ಬಳಿ ಖಾಯಂ ಆಗಿ ಔಷಧಿ ಪಡೆದುಕೊಳ್ಳುತ್ತಿದ್ದಾರೆ.ಅದರ ಜೊತೆಯಲ್ಲಿ ಕೊಪ್ಪಳ್ಳ, ಹುಬ್ಬಳಿ, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಗೋಮೂತ್ರದಿಂದ ಉತ್ಪಾಸಿದ ಔಷಧಿಗಳನ್ನು ಪ್ರದರ್ಶನ ಮಾತ್ತು ಮಾರಾಟ ಮಾಡುತ್ತಾರೆ.

ಗೋಮೂತ್ರದ ಉಪಯೋಗಗಳು: ಮಲಬದ್ಧತೆ, ಕಿವಿ ಸಮಸ್ಯೆ, ಬಿಪಿ, ಸಂಧಿವಾತ, ಮಧಮೇಹ, ಹೃದಯಘಾತ, ಉಬ್ಬಸ, ಸೋರಿಯಾಸಿಸ್, ಮೈಗ್ರೇನ್, ಸ್ತ್ರೀ ಸಂಬಂಧಿ ಕಾಯಿಲೆಗಳು, ಜ್ವರ, ನೆಗಡಿ, ಕೆಮ್ಮು, ರಕ್ತದಕ್ಯಾನ್ಸರ್, ಮಧುಮೇಹ, ಬಿಳಿರಕ್ತ ಕಣಗಳ ಉತ್ಪತ್ತಿ, ಜ್ಞಾಪಕ ಶಕ್ತಿ ಹೆಚ್ಚುವಿಕೆ, ಮೂಗಿನ ಸಮಸ್ಯೆಇನ್ನಿತರ ರೋಗಗಳಿಗೆ ಇದುರಾಮ ಬಾಣವಾಗಿದೆ.

ಇನ್ನು ವಿಭೂತಿ ಸಿದ್ಧಪಡಿಸಲು 13 ದಿನಗಳು ಬೇಕು.ಜ್ವರ ಬಂದ ಸಮಯದಲ್ಲಿ ವಿಭೂತಿಯನ್ನು ನೀರಿನಲ್ಲಿ ಹಾಕಿಕೊಂಡುಕುಡಿದರೆಜ್ವರಕಡಿಮೆಯಾಗುತ್ತದೆ. ಹಲವಾರುಜಾತ್ರೆ, ಉತ್ಸವಗಳಲ್ಲಿ ಮಳಿಗೆ ಹಾಕಿ ಪ್ರಚಾರ ಮಾಡುತ್ತೇನೆ, ವರ್ಷಕ್ಕೆ ಸುಮಾರು 5 ರಿಂದ 6 ಲಕ್ಷರೂ. ವರೆಗೆ ಲಾಭ ಇದೆ ಎನ್ನುತ್ತಾರೆ ವಿಜಯಕುಮಾರ್‍ಅವರು. ಸಂಪರ್ಕಕ್ಕೆ 9538901010.