ಮಲಬದ್ಧತೆ ಸಾಮಾನ್ಯವೆಂದು ಕಡೆಗಣಿಸಬೇಡಿ

ಮಲಬದ್ಧತೆ ಸಾಮಾನ್ಯವೆಂದು ಕಡೆಗಣಿಸಬೇಡಿ

Oct 15, 2017 11:18:45 AM (IST)
ಮಲಬದ್ಧತೆ ಸಾಮಾನ್ಯವೆಂದು ಕಡೆಗಣಿಸಬೇಡಿ

ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸರಿಯಾದ ರೀತಿಯ ಕಾರ್ಯವಾಗದೆ ಕರುಳು ಮಲ ಹೊರಹಾಕಲು ತುಂಬಾ ಕಷ್ಟಪಡುವುದು ಅಥವಾ ಒದ್ದಾಡುವುದನ್ನು ಮಲಬದ್ಧತೆ ಎನ್ನಲಾಗುವುದು. ಮಲಬದ್ಧತೆ ಇಂದಿನ ದಿನಗಳಲ್ಲಿ ತುಂಬಾ ಸಾಮಾನ್ಯ ಎನ್ನುವಂತೆ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುವುದು. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಈಗ ಹದಿಹರೆಯದವರಲ್ಲೂ ಕಂಡುಬರುವುದು. ಮಲಬ್ಧತೆ ಇದೆಯೆಂದರೆ ಕರುಳಿನ ಕ್ರಿಯೆಗಳು ಸರಾಗವಾಗಿ ಆಗುತ್ತಿಲ್ಲ ಮತ್ತು ಸಾಮಾನ್ಯಕ್ಕಿಂತ ಅದು ಭಿನ್ನವಾಗಿದೆ ಎನ್ನಬಹುದು. ಮಲಬದ್ಧತೆಯೊಂದಿಗೆ ಹೊಟ್ಟೆ ನೋವು ಅಥವಾ ಸೆಳೆತವಿದ್ದರೆ ತಕ್ಷಣ ಹೋಗಿ ವೈದ್ಯರನ್ನು ಭೇಟಿಯಾಗಿ.

ಮಲಬದ್ಧತೆ ಬರದಂತೆ ತಡೆಯಲು ಕೆಲವು ಸಲಹೆಗಳು ಇಲ್ಲಿವೆ.
1. ಮಲಬದ್ಧತೆ ಉಂಟು ಮಾಡುವಂತಹ ಬಿಳಿ ಅನ್ನ, ಬಾಳೆಹಣ್ಣು, ಚಾಕಲೇಟ್, ಸ್ಟ್ರಾಂಗ್ ಬ್ಲ್ಯಾಕ್ ಟೀ ಅಥವಾ ಕಾಫಿ ಸೇವಿಸಬೇಡಿ.
2. ಆಹಾರ ಕ್ರಮದಲ್ಲಿ ತರಕಾರಿ ಸೇರಿಸಿಕೊಳ್ಳಿ. ದಿನದಲ್ಲಿ ಎರಡು ಕಪ್ ಹಣ್ಣುಗಳು ಅಥವಾ ಎರಡು ಕಪ್ ತರಕಾರಿ ಪ್ರತಿನಿತ್ಯ ಸೇವಿಸಿ. ಹಣ್ಣು ಹಾಗೂ ತರಕಾರಿ ಸೇವಿಸಿದರೆ ಮಲಬದ್ಧತೆ ನಿಯಂತ್ರಣದಲ್ಲಿ ಇರುವುದು.
3. ನಿಯಮಿತವಾಗಿ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆಯು ಕುರಳಿನ ಸ್ನಾಯುಗಳನ್ನು ಉತ್ತೇಜಿಸಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುವುದು. ಕರುಳಿನ ಮೂಲಕ ಆಹಾರ ಹಾದು ಹೋಗುವ ಸಮಯವನ್ನು ಇದು ಕಡಿಮೆ ಮಾಡುವುದು.
4. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ದಿನದಲ್ಲಿ ಎಂಟರಿಂದ ಹತ್ತು ಲೋಟ ನೀರು ಸೇವಿಸಿ. ನೀರು ಕರುಳಿಗೆ ಲ್ಯೂಬ್ರಿಕೆಂಟ್ ನೀಡುವುದು ಮಾತ್ರವಲ್ಲದೆ ತಿಂದ ಆಹಾರಕ್ಕೆ ತೇವಾಂಶ ನೀಡುವುದು. ಇದರಿಂದ ಜೀರ್ಣಕ್ರಿಯೆ ಸರಾಗವಾಗುವುದು.
5. ಐಸ್ ಕ್ರೀಮ್, ಚಿಪ್ಸ್, ಮಾಂಸ, ಫಿಜ್ಜಾ ಮತ್ತು ಸಂಸ್ಕರಿತ ಆಹಾರ ತ್ಯಜಿಸಿ. ಇದರಲ್ಲಿ ನಾರಿನಾಂಶ ಕಡಿಮೆ ಇರುವುದು ಮತ್ತು ಇದರಿಂದ ಮಲಬದ್ಧತೆ ಉಂಟಾಗಬಹುದು.
6. ಒತ್ತಡ ಕಡಿಮೆ ಮಾಡಿ. ಕರುಳಿನ ಕ್ರಿಯೆಯು ಹೊಟ್ಟೆ ಮತ್ತು ಮೆದುಳಿನ ಸಂಕೇತದಿಂದ ನಡೆಯುವುದು. ಮೆದುಳು ಹೆಚ್ಚು ಒತ್ತಡದಲ್ಲಿ ಇರುವಾಗ ಕರುಳು ಕೂಡ ಒತ್ತಡದಲ್ಲಿರುವುದು. ಯಾವುದೇ ವಿಷಯದ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ.
7. ಸಮತೋಲಿತ ಆಹಾರವು ಮಲಬದ್ಧತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ರಿಫೈನ್ಡ್ ಮಾಡದೆ ಇರುವ ಇಡೀ ಧಾನ್ಯದ ಸೀರಲ್, ಮೊಳಕೆಕಾಳುಗಳು, ಜೇನುತುಪ್ಪ, ಹಸಿರೆಳೆ ತರಕಾರಿ, ಮೂಲಂಗಿ, ತಾಜಾ ಹಣ್ಣುಗಳು, ಒಣ ಹಣ್ಣುಗಳು ಮತ್ತು ಹಾಲಿ ಉತ್ಪನ್ನಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
8. ಆಹಾರ ಕ್ರಮದಲ್ಲಿ ಹೆಚ್ಚು ನಾರಿನಾಂಶವಿರುವ ಆಹಾರ ಸೇರಿಸಿಕೊಳ್ಳಿ. ಇದರಿಂದ ಕರುಳಿನ ಕ್ರಿಯೆ ಸರಾಗವಾಗುವುದು.
9. ಮೊಸರು ಹೆಚ್ಚು ಕ್ಯಾಲ್ಸಿಯಂನ್ನು ಒಳಗೊಂಡಿದೆ. ಇದು ಕರುಳಿಗೆ ಒಳ್ಳೆಯದು ಮತ್ತು ಮಲಬದ್ಧತೆ ನಿವಾರಿಸುವುದು.