ಅಂದದ ಕೂದಲಿಗೆ ಸಿಂಪಲ್ ಟಿಪ್ಸ್...

ಅಂದದ ಕೂದಲಿಗೆ ಸಿಂಪಲ್ ಟಿಪ್ಸ್...

LK   ¦    Sep 05, 2018 03:11:11 PM (IST)
ಅಂದದ ಕೂದಲಿಗೆ ಸಿಂಪಲ್ ಟಿಪ್ಸ್...

ಸುಂದರವಾದ ದಟ್ಟ ಮಿರುಗುವ ಕೇಶರಾಶಿ ಪ್ರತಿ ಮಹಿಳೆಯ ಕನಸು. ಇದಕ್ಕಾಗಿ ನಿಯಮಿತವಾಗಿ ಪಾಲಿಸಬೇಕಾಗಿರುವ ಹಲವಾರು ಕ್ರಮಗಳಿವೆ, ತಲೆಗೂದಲು ಕಪ್ಪಗೆ ಉದ್ದವಾಗಿ ಬೆಳೆಯಬೇಕೆ.? ಇಲ್ಲಿವೆ ನೋಡಿ ಕೆಲವು ಸಿಂಪಲ್ ಟಿಪ್ಸ್.

ಮೆಂತ್ಯವನ್ನು ಮೊಸರಿನಲ್ಲಿ ನೆನೆಸಿ, ಬೆಳಗ್ಗೆ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ ಇದಕ್ಕೆ ನಿಂಬೆರಸ ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಹೀಗೆ ನಿಯಮಿತವಾಗಿ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ವಾರಕ್ಕೊಮ್ಮೆ ಆಲಿವ್ ಆಯಿಲ್, ಎಳ್ಳೆಣ್ಣೆ, ಹರೆಳೆಣ್ಣೆ, ಕೊಬ್ಬರಿ ಎಣ್ಣೆ ಎಲ್ಲವನ್ನೂ ಬೆರೆಸಿ ಬಿಸಿ ಮಾಡಿಕೊಂಡು ಕೂದಲ ಬುಡದಿಂದ ತುದಿಯವರೆಗೂ ಮಾಲಿಷ್ ಮಾಡಿ. ಇದರಿಂದ ಕೂದಲಿಗೆ ಹೊಳಪು ಬರುವುದಲ್ಲದೇ ಕಪ್ಪಾಗುತ್ತದೆ. ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ನಿಂಬೆರಸ ಬೆರೆಸಿ ಮಸಾಜ್ ಮಾಡಿಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡುವುದುರಿಂದ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ದಾಸವಾಳ ಎಲೆ, ಭೃಂಗರಾಜ ಸೊಪ್ಪು, ಒಂದೆಲಗ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಕರಿಬೇವಿನ ಸೊಪ್ಪನ್ನು ರುಬ್ಬಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ, ಇದನ್ನು ಬೆಚ್ಚಗೆ ಮಾಡಿಕೊಂಡು ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಕೊಬ್ಬರಿ ಎಣ್ಣೆಗೆ ಸಮ ಪ್ರಮಾಣದಲ್ಲಿ ನಿಂಬೆರಸ ಬೆರೆಸಿ ತಲೆಗೂದಲಿಗೆ ಕೈಬೆರಳ ತುದಿಯಿಂದ ಉಜ್ಜಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಸ್ನಾನ ಮಾಡುವ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ ಅದರಿಂದ ತಲೆ ಸ್ನಾನ ಮಾಡಿದಲ್ಲಿ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ಬೆಟ್ಟದ ನೆಲ್ಲಿಕಾಯಿ ಮತ್ತು ಭೃಂಗರಾಜ, ದಾಸವಾಳ ಎಲೆಗಳನ್ನು ರುಬ್ಬಿ, ಹೇರ್ ಪ್ಯಾಕ್ ಹಾಕಿಕೊಳ್ಳಿ. ಬಾಳೆದಿಂಡನ್ನು ಸಣ್ಣಗೆ ಹಚ್ಚಿ ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ, 2-3 ದಿನ ಬಿಟ್ಟು ಸೋಸಿಕೊಂಡು ಎಣ್ಣೆಯಿಂದ ಕೂದಲ ಮಸಾಜ್ ಮಾಡಿ ಇದರಿಂದ ಕೂದಲು ಕಪ್ಪಾಗುತ್ತದೆ. ಇದಲ್ಲದೆ ನಿಮ್ಮ ಬಾಚಣಿಕೆ, ಹೇರ್‍ ಬ್ರಷ್, ಟವೆಲ್‍ಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಜೊತೆಗೆ ತಲೆಗೂದಲ ಬೆಳವಣಿಗೆಗೆ ವ್ಯಾಯಾಮ, ಯೋಗ ಕೂಡ ಸಹಾಕಾರಿ, ಸ್ತ್ರೀ ಸೌಂದರ್ಯದ ಸಂಕೇತದಂತಿರುವ ಕೇಶ ಸಂರಕ್ಷಣೆ ಮಹತ್ವವುಳ್ಳದಾಗಿದೆ.